ಮಳೆಗಾಗಿ ಮಂಡೂಕ ಮದುವೆ

7

ಮಳೆಗಾಗಿ ಮಂಡೂಕ ಮದುವೆ

Published:
Updated:
ಮಳೆಗಾಗಿ ಮಂಡೂಕ ಮದುವೆ

ಬೇಲೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ವರುಣನ ಕೃಪೆಗೆ ಪಟ್ಟಣಕ್ಕೆ ಸಮೀಪದ ಮಲ್ಲಾಪುರ ಕೊಪ್ಪಲಿನಲ್ಲಿ ಕಪ್ಪೆಗಳ ಮದುವೆ ಮಾಡಲಾಯಿತು.ಸನ್ಯಾಸಿ ಹಳ್ಳಿ ಸಮೀಪದ ಮಲ್ಲಾಪುರ ಕೊಪ್ಪಲಿನ ಮುಸ್ಲಿಂ ಜನಾಂಗಕ್ಕೆ ಸೇರಿದ ವಜೀರ್ ಮತ್ತು ಇತರ ಗ್ರಾಮಸ್ಥರು ಹೆಣ್ಣು ಮತ್ತು ಗಂಡು ಕಪ್ಪೆಯನ್ನು ಹಿಡಿದು ತಂದು ಬಿದಿರಿನ ಕೋಲಿಗೆ ಕಟ್ಟಿ ಮದುವೆ ಮಾಡಿದರು.ಬಳಿಕ ಸುತ್ತಮುತ್ತಲ ಗ್ರಾಮಗಳಾದ ಸನ್ಯಾಸಿಹಳ್ಳಿ, ಹಳೇ ಉತ್ಪಾತನಹಳ್ಳಿ, ಬಿಟ್ರವಳ್ಳಿ ಮತ್ತು ಹೊಸ ಉತ್ಪಾತನಹಳ್ಳಿ ಗ್ರಾಮಗಳ ಪ್ರತಿ ಮನೆಗಳಿಗೆ ತೆರಳಿದರು. ಮನೆ ಮುಂದೆ ಬಂದ ಕಪ್ಪೆಗಳಿಗೆ ಜನರು ಕೊಡದಲ್ಲಿ ನೀರು ಸುರಿದು ಅಕ್ಕಿಯನ್ನು ನೀಡಿದರು.ಮನೆಗೆ ಹಿಂತಿರುಗಿದ ವಜೀರ್ ಕುಟುಂಬ ಮನೆಯಲ್ಲಿ ಸಿಹಿ ತಿಂಡಿ ಮಾಡಿ ಹಬ್ಬ ಆಚರಿಸಿದರು. ಈ ರೀತಿ ಮಾಡುವುದರಿಂದ ಮಳೆ ಸುರಿಯು ತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry