ಮಂಗಳವಾರ, ಏಪ್ರಿಲ್ 20, 2021
26 °C

ಮಳೆಯಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್. ಹೇಮಂತ್ ನಿರ್ಮಾಣದ  `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ~ ಚಿತ್ರಕ್ಕೆ ಕೃತಕ ಮಳೆ ಹಾಗೂ ಸಹಜ ಮಳೆಯಲ್ಲಿ ಮಡಿಕೇರಿಯ ಗೋಣಿಕೊಪ್ಪ, ಪಾಲಿ, ಪೊನ್ನಂಪೇಟ್, ವೆಸ್ಟ್ ಪುರಿ ಎಸ್ಟೇಟ್‌ನಲ್ಲಿ ರಕ್ಷಿತ್ ಶೆಟ್ಟಿ, ಶ್ವೇತಾ ಶ್ರಿವಾತ್ಸವ್, ಕನಕದರ್ಶನ್, ಅಭಿನಯದಲ್ಲಿ ಕೆಲವು ಸನ್ನಿವೇಶಗಳ ಚಿತ್ರೀಕರಣ ನಡೆಯಿತು. ಇದರೊಂದಿಗೆ ಮಳೆಗಾಲದ ಕಥೆ  ಮುಕ್ತಾಯಗೊಂಡಿತು. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸುನಿ ಅವರದು. ಛಾಯಾಗ್ರಹಣ, ಮನೋಹರ್ ಜೋಶಿ, ಸಂಗೀತ ಭರತ್ ಬಿಜೆ, ಸಂಕಲನ ಸಚಿನ್, ಕಲೆ ಪ್ರಭು,  ಸಹ ನಿರ್ದೇಶನ ಹರಿ, ವಿಜೇತ್, ಸಿದ್ಧುಸ್, ಅಭಿಷೇಕ್, ನಿರ್ಮಾಣ ವಿನ್ಯಾಸ ದರ್ಶನ್ ಕನಕ, ನಿರ್ವಹಣೆ ಅನಿಲ್. ಮುಂದಿನ ಭಾಗದ ಚಿತ್ರೀಕರಣ ಚಳಿಗಾಲದಲ್ಲಿ ನಡೆಯಲಿದೆ.

ಭೂತ ಬಂಗಲೆಯಲ್ಲಿ `ಸಿಡಿಲ ಮರಿ~


ಹಬೀಬ್ ನಿರ್ಮಾಣದ `ಸಿಡಿಲ  ಮರಿ~ ಚಿತ್ರಕ್ಕೆ ಬೆಂಗಳೂರಿನ ಭೂತ ಬಂಗಲೆಯಲ್ಲಿ ಶರತ್ ಲೋಹಿತಾಶ್ವ, ಶಂಕರ್ ನಾರಾಯಣ್, ಡ್ಯಾನಿ, ಕಿರಣ್ ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು.  ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ರಘುರಾಜ್.

ಸಂಭಾಷಣೆ, ಬಿ.ಎ. ಮಧು. ಛಾಯಾಗ್ರಹಣ, ಜನಾರ್ದನ್, ಸಂಗೀತ ಎಂ.ಎನ್ ಕೃಪಾಕರ್, ಸಂಕಲನ ಗೋವರ್ಧನ್,  ಸಾಹಸ ಥ್ರಿಲ್ಲರ್ ಮಂಜು, ಕಲೆ ಬಾಬುಖಾನ್, ಸಹನಿರ್ದೇಶನ ವಿಜಯಕುಮಾರ್ ಭದ್ರಾವತಿ, ನಿರ್ವಹಣೆ ಜಯಂತ್. ತಾರಾಗಣದಲ್ಲಿ ಆಯೇಷಾ, ಜೈಜಗದೀಶ್, ಶರತ್ ಲೋಹಿತಾಶ್ವ, ಸತ್ಯಜಿತ್, ಶಿಲ್ಪಾ, ಪೆಟ್ರೋಲ್ ಪ್ರಸನ್ನ ಜಯಲಕ್ಷ್ಮಿ ಪಾಟೀಲ್, ಸಿದ್ಧರಾಜು ಕಲ್ಯಾಣ್‌ಕರ್, ಮೈಸೂರು ಮಂಜುಳ, ಶಂಕರ್ ನಾರಾಯಣ್, ದರ್ಶನ್, ಕಿಂಗ್ ಡ್ಯಾನಿ, ಮೈಸೂರು ಮಲ್ಲೇಶ್, ಹಾಗೂ ಸಂಕಲನಕಾರ ಶ್ಯಾಮ್ ಅಭಿನಯಿಸುತ್ತಿದ್ದಾರೆ.

 

ಗುರು~ ಚಿತ್ರಕ್ಕೆ ಮಾತಿನ ಜೋಡಣೆ

ನಟ ಜಗ್ಗೇಶ್ ನಿರ್ದೇಶನದ `ಗುರು~ ಚಿತ್ರಕ್ಕೆ ಮಾತಿನ ಜೋಡಣೆ ನಡೆಯುತ್ತಿದೆ. ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.ಜಗ್ಗೇಶ್ ಹಾಗೂ ಪರಿಮಳಾ ಜಗ್ಗೇಶ್ ನಿರ್ಮಿಸುತ್ತಿರುವ ಈ ಚಿತ್ರದ ನಾಯಕರಾಗಿ ಗುರುರಾಜ್ ಅಭಿನಯಿಸುತ್ತಿದ್ದಾರೆ. ಯತಿರಾಜ್, ರಶ್ಮಿಗೌತಮ್, ಗೌತಮಿ, ಶ್ರಿನಿವಾಸಮೂರ್ತಿ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಕರ್ ಪಾಟೀಲ್, ಶೈಲಶ್ರಿ, ಅಭಿಜಿತ್, ಜೀವನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿನಯಚಂದ್ರ ಸಂಗೀತ, ರಮೇಶ್‌ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಟಿ.ಎ.ಆನಂದ್ ಸಹ ನಿರ್ದೇಶನ ಹಾಗೂ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.