ಮಳೆಯಿಂದ ಕುಸಿದ 8 ಮನೆ ಮಠದಿಂದ ನಿರ್ಮಾಣ

7
ಚಾತುರ್ಮಾಸ್ಯದಲ್ಲಿ ಶಿಷ್ಯರ ನಿಷ್ಠೆ: ರಾಘವೇಶ್ವರ ಶ್ರೀ ಹರ್ಷ

ಮಳೆಯಿಂದ ಕುಸಿದ 8 ಮನೆ ಮಠದಿಂದ ನಿರ್ಮಾಣ

Published:
Updated:

ವಿಟ್ಲ: ಶಿಷ್ಯರ ಸ್ಫೂರ್ತಿಯಿಂದ ಚಾತು ರ್ಮಾಸ್ಯದ ವಿಜಯವಾಗಿದೆ. ಸತ್ಕಾ ರ್ಯಕ್ಕೆ ಮುಂದುವರಿದ ಆಧುನಿಕ ಯುಗದಲ್ಲೂ ಸಹಕರಿಸುವವರಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೊಸನಗರ ಶ್ರೀರಾಮ ಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ಮಾಣಿ ಪೆರಾಜೆ ರಾಮಚಂದ್ರಾಪುರ ಮಠದಲ್ಲಿ ಗುರುವಾರ ವಿಜಯ ಚಾತು ರ್ಮಾಸ್ಯ ವ್ರತಾಚರಣೆಯ ಸೀಮೋ ಲ್ಲಂಘನ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಈ ಚಾತುರ್ಮಾಸ್ಯ ಸತ್ಯ, ಸತ್ವಗಳ ವಿಜಯ. ಮಂಗಳೂರು ಹೋಬಳಿಯ ಶಿಷ್ಯರ ತಾತ್ವಿಕ,  ಸಾತ್ವಿಕ ಕಾರ್ಯ ಮೆಚ್ಚುವಂತದ್ದು. ಇಂಥ ಶಿಷ್ಯರನ್ನು ಪಡೆದುಕೊಳ್ಳುವ ಗುರುವಿನ ಭಾಗ್ಯ ವಿದು. ಶಿಷ್ಯಂದಿರು ಗುರುವಿನ ಪ್ರತಿನಿಧಿ ಎಂಬುದನ್ನು ಸಾಬೀತುಪಡಿಸಿರುವುದು ಸಂತಸ ತಂದಿದೆ. ಮುಂದಿನ ಚಾತುರ್ಮಾಸ್ಯವನ್ನು ಘೋಷಿಸುವುದು ಕೂಡಾ ಸಂದಿಗ್ಧ ಸ್ಥಿತಿಯನ್ನುಂಟು ಮಾಡಿದೆ ಎಂದರು.ಮನ ಮನೆಗಳ ನಡುವೆ ಅಂತರವಿಲ್ಲದ ಸಮಾಜದ ಭರವಸೆ ತಾಳುವ ಕಾಲ ಹತ್ತಿರ ಬಂದಿದೆ. ಸೇವೆಗೆ ಸದಾ ಸಿದ್ದ ಎನ್ನುವ ಹನುಮನಂತೆ ನೀವೆಲ್ಲ ಇದ್ದೀರಿ ಎಂದು ಅವರು ತಿಳಿಸಿದರು.ತೆಕ್ಕುಂಜ ಪ್ರಕಾಶ್ ಭಟ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿದರು. ಸಾಗರದಲ್ಲಿ ಸುರಿದ ಭಾರೀ ಮಳೆಗೆ ಕುಸಿದ 8 ಕುಟುಂಬಗಳ ಮನೆಗಳಿಗೆ ಹುಲು ಕೋಡು ಶುಭಾಶಯ ಯೋಜನೆಯನ್ನು ಜಾರಿಗೊಳಿಸಿ, ಶ್ರೀಮಠದ ವತಿಯಿಂದ ತಲಾ ₨ 5 ಲಕ್ಷ ದಲ್ಲಿ ಮನೆ ನಿರ್ಮಿಸ ಲಾಗುವುದು ಎಂದು ಘೋಷಿಸ ಲಾಯಿತು. ಧರ್ಮಭಾರತೀ ಪತ್ರಿಕೆಯ ವಿಶೇಷ ಪುರವಣಿ ಶ್ರೀಮುಖವನ್ನು ಬಿಡುಗಡೆಗೊಳಿಸಿದರು.ಅಗಡಿ ಆನಂದವನ ಮಠದ ಗುರುದತ್ತ ಮೂರ್ತಿ ಚಕ್ರವರ್ತಿ ಸ್ವಾಮೀಜಿ ಆಶೀರ್ವಚನ ನೀಡಿ, ರಾಮಚಂದ್ರಾಪುರ ಮಠದ ಹೆಸರಿಗೆ ತಕ್ಕಂತಹ ರಾಘ ವೇಶ್ವರ ಭಾರತೀ ಸ್ವಾಮೀಜಿ  ರಾಮ ಕಥಾ ನಡೆಸಿ ಸಮಾಜದ ಪರಿವರ್ತನೆಗೆ ಕಾರಣ ರಾಗಿದ್ದಾರೆ. ಇಂಥ ಗುರು ಕಾರುಣ್ಯ ಸಿಕ್ಕಿರುವುದು ಮಹಾಭಾಗ್ಯ ಎಂದರು. ಉದ್ಯಮಿ ಆರ್.ಎಸ್. ಗೋಯೆಂಕಾ ಮಾತನಾಡಿ, ಮುಂದಿನ ವರ್ಷದಿಂದ ತಾವು ಶ್ರೀಮಠದ ಕಾಮದುಘಾ ಯೋಜನೆಗೆ ಮೀಸಲು ಎಂದರು.ಶ್ರೀಗಳ ಆಪ್ತ ಕಾರ್ಯದರ್ಶಿ ಮೋಹನ ಹೆಗಡೆ ಅಭಿನಂದನಾ ಭಾಷಣ ಮಾಡಿದರು. ತೆಕ್ಕುಂಜ ಪ್ರಕಾಶ್ ಭಟ್ ಅವರ ಪತ್ನಿ ಈಶ್ವರಿ, ಮಹಾ ಸರ್ವಾ ಧಿಕಾರಿ ಟಿ.ಮಡಿಯಾಲ್, ಧರ್ಮ ಭಾರತೀಯ ವಿಶೇಷ ಪುರವಣಿ ‘ಶ್ರೀಮುಖ’ ಪತ್ರಿಕೆಯ ಸಂಪಾದಕ       ರಮೇಶ ಹೆಗಡೆ ಗುಂಡೂಮನೆ ಇತರರು ಇದ್ದರು.ಶ್ರೀಗಳು ನಡೆಸುತ್ತಿರುವ ರಾಣೆಬೆನ್ನೂರು ಗೋಶಾಲೆಗೆ ಡಾ.ಸಂಜಯ ನಾಯಕ್ ₨ 5 ಲಕ್ಷ ನೀಡುವ ಭರವಸೆ ನೀಡಿದರು.

ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ದಂಪತಿ ಸಭಾ ಪೂಜೆ ನೆರವೇರಿಸಿದರು. ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್ ಚಾತುರ್ಮಾಸ್ಯ ಅವಲೋಕನ ನಡೆಸಿದರು. ಧರ್ಮಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ವಿದ್ವಾನ್ ಜಗದೀಶ ಶರ್ಮಾ ಪ್ರಸ್ತಾವಿಕ ಮಾತನಾಡಿದರು. ಸತ್ಯಶಂಕರ ಹಿಳ್ಳೇಮನೆ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry