ಶನಿವಾರ, ಮೇ 15, 2021
22 °C

ಮಳೆಯಿಂದ ಹೆಚ್ಚಿದ ತರಕಾರಿ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತರಕಾರಿಗಳ ಬೆಲೆ ಅಧಿಕ ಪ್ರಮಾಣದಲ್ಲಿ ಏರುತ್ತಿರುವುದರಿಂದ ಮಧ್ಯಮ ವರ್ಗ ಹಾಗೂ ಬಡ ಜನರು ತತ್ತರಿಸುವಂತಾಗಿದೆ.ಚಿಲ್ಲರೆ ಅಂಗಡಿಗಳಲ್ಲಿ ಟೊಮೆಟೋ ಹಾಗೂ ಹುರುಳಿಕಾಯಿಯ ಬೆಲೆ ನೂರರ ಗಡಿ ದಾಟಿದೆ.

ಮಂಗಳವಾರ ತರಕಾರಿ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದ್ದು, ಟೊಮೆಟೋ, ಹುರುಳಿಕಾಯಿ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆಗಳು ಹೆಚ್ಚಾಗಿವೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಹಾಪ್‌ಕಾಮ್ಸ ಅಧ್ಯಕ್ಷೆ ಎಚ್.ಕೆ.ನಾಗವೇಣಿ, `ಬೇಸಿಗೆಯ ಕಾರಣಕ್ಕೆ ತರಕಾರಿ ಬೆಳೆ ಹೆಚ್ಚಿನ ಇಳುವರಿ ನೀಡದ ಕಾರಣ ತರಕಾರಿಗಳ ಬೆಲೆ ಕಳೆದ ವಾರಗಳಿಂದ ಏರಿಕೆಯಾಗುತ್ತಿತ್ತು. ಈಗ ಮಳೆಯಾಗುತ್ತಿರುವುದರಿಂದ ತರಕಾರಿ ಕೊಯಿಲು ಸರಿಯಾಗಿ ಆಗದ ಕಾರಣಕ್ಕೆ ಬೆಲೆ ಏರಿಕೆಯಾಗುತ್ತಿದೆ. ಭಾರಿ ಮಳೆಯಾಗುವ ಸಂದರ್ಭದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ' ಎಂದರು.`ನಗರಕ್ಕೆ ಹೊಸಕೋಟೆ, ದೇವನಹಳ್ಳಿ, ಕೋಲಾರ ಭಾಗಗಳಿಂದ ತರಕಾರಿ ಪೂರೈಕೆಯಾಗುತ್ತದೆ. ಹೊರ ರಾಜ್ಯಗಳಿಂದಲೂ ತರಕಾರಿ ಆಮದಾಗುತ್ತದೆ. ಸದ್ಯಕ್ಕೆ ಟೊಮೆಟೋ ಮತ್ತು ಹುರುಳಿಕಾಯಿಯ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಏರಿಕೆಯಾಗಿದೆ. ಉಳಿದ ತರಕಾರಿಗಳ ಬೆಲೆ ಸ್ಪಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ನಿಯಮಿತ ಮಳೆಯಾಗಿ ಉತ್ತಮ ಇಳುವರಿ ಬಂದ ನಂತರ ತರಕಾರಿಗಳ ಬೆಲೆ ಇಳಿಕೆಯಾಗಲಿದೆ' ಎಂದು ಅವರು ಮಾಹಿತಿ ನೀಡಿದರು.ಟೊಮೆಟೋ ಮತ್ತು ಹುರುಳಿಕಾಯಿಯ ಬೆಲೆ ಮಾತ್ರ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ, ನಗರದ ಚಿಲ್ಲರೆ ಅಂಗಡಿಗಳಲ್ಲಿ ಎಲ್ಲ ತರಕಾರಿಗಳ ಬೆಲೆಯನ್ನೂ ಅಧಿಕ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ.

ಮಹಾಲಕ್ಷ್ಮೀ ಬಡಾವಣೆಯ ನಿವಾಸಿ ರೇಖಾ, `ಚಿಲ್ಲರೆ ಅಂಗಡಿಗಳಲ್ಲಿ ಟೊಮೆಟೋ ಮತ್ತು ಹುರುಳಿಕಾಯಿ ಬೆಲೆ ಪ್ರತಿ ಕೆ.ಜಿ ಗೆ ರೂ 100 ಹಾಗೂ ಈರುಳ್ಳಿ ಬೆಲೆ ರೂ 50 ಇದೆ. ತಿಂಡಿ ತಯಾರಿಕೆಗೆ ಬಳಸುವ ತರಕಾರಿಗಳ ಪ್ರಮಾಣವನ್ನು ತಗ್ಗಿಸುವುದೂ ಅನಿವಾರ್ಯವಾಗಿದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.