ಭಾನುವಾರ, ಮೇ 16, 2021
27 °C

ಮಳೆಹಾನಿ ಪ್ರದೇಶಕ್ಕೆ ಸಚಿವರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಶುಕ್ರವಾರ ಸುರಿದ ಭಾರೀ ಮಳೆಯಿಂದ ಹಾನಿ ಗೀಡಾದ ಪ್ರದೇಶಗಳಿಗೆ ನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಭೇಟಿ ನೀಡಿದರು.ಬೆಳಿಗ್ಗೆ 8ಕ್ಕೆ ಮೆಜೆಸ್ಟಿಕ್ ಭಾಗದಲ್ಲಿ ನೀರು ನಿಂತಿದ್ದ ಜಾಗಗಳಿಗೆ ಸಚಿವರು ಭೇಟಿ ನೀಡಿದರು. ಬಸ್ ನಿಲ್ದಾಣದ ಚರಂಡಿಗಳಲ್ಲಿ ಹೂಳು ತೆಗೆಸಿ ಮಳೆ ನೀರು ಸರಾಗಿ ಹರಿಯುವಂತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.ನಂತರ ಓಕಳಿಪುರದ ನಾಗೇಂದ್ರ ಗಾರ್ಡನ್‌ನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದ ಸ್ಥಳಗಳಿಗೆ ಭೇಟಿ ನೀಡಿದರು. ತಗ್ಗು ಪ್ರದೇಶದ ಬಳಿಯ ಚರಂಡಿಯ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗಿತ್ತು.ಶೀಘ್ರವೇ ಈ ಪ್ರದೇಶದ ಮನೆಗಳಿಗೆ ನುಗ್ಗಿರುವ ನೀರನ್ನು ತೆರವುಗೊಳಿಸಿ, ಚರಂಡಿಯ ತಡೆಗೋಡೆಯ ದುರಸ್ಥಿ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.ಪೀಣ್ಯ ದಾಸರಹಳ್ಳಿ ಬಳಿ ಶುಕ್ರವಾರ ಮೃತಪಟ್ಟ ಮಲ್ಲೇಶ್ ಅವರ ಕುಟುಂಬಕ್ಕೆ ್ಙ 1ಲಕ್ಷ ಪರಿಹಾರ ನೀಡುವುದಾಗಿ ಸಚಿವರು ಘೋಷಿಸಿದರು.ಇಲ್ಲಿನ ಬೃಹತ್ ನೀರುಗಾಲುವೆಯನ್ನು 24 ಗಂಟೆಗಳ ಒಳಗಾಗಿ ಸ್ವಚ್ಛಗೊಳಿಸಿ, ಸರಾಗವಾಗಿ ನೀರು ಹರಿಯುವಂತೆ ತಕ್ಷಣದಿಂದಲೇ ಜೆ.ಸಿ.ಬಿ. ಯಂತ್ರಗಳನ್ನು ಉಪಯೋಗಿಸಿಕೊಂಡು ಪರಿಹಾರ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.