ಮಳೆ: ಅಡಿಕೆ ಕೊಯಿಲಿಗೆ ಹಿನ್ನಡೆ

7

ಮಳೆ: ಅಡಿಕೆ ಕೊಯಿಲಿಗೆ ಹಿನ್ನಡೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ, ಕಳಸ, ಕಡೂರು ಹಾಗೂ ಚಿಕ್ಕಮಗ ಳೂರು ನಗರದಲ್ಲಿ ಭಾನುವಾರ ಮಳೆ ಯಾಗಿದೆ. ಮಲೆನಾಡು ಭಾಗದಲ್ಲಿ ಆರಂಭವಾಗಿರುವ ಅಡಿಕೆ ಕೊಯಿಲು ಕಾರ್ಯಕ್ಕೆ ಮಳೆಯಿಂದ ತೊಂದರೆ ಯಾಗಿದ್ದರೆ, ಬಯಲುಸೀಮೆಯಲ್ಲಿ ಮಳೆಯಿಂದ ರೈತರು ಖುಷಿಗೊಂಡಿದ್ದಾರೆ. 

 

ಚಿಕ್ಕಮಗಳೂರು ನಗರದಲ್ಲಿ ಭಾನು ವಾರ ಮಧ್ಯಾಹ್ನ ಗುಡುಗಿನಿಂದ ಕೂಡಿದ ಮಳೆಯಾಯಿತು.ಬೆಳಿಗ್ಗೆ ಸ್ವಲ್ಪಹೊತ್ತು ಮೋಡದ ವಾತಾವರಣ ಉಂಟಾಗಿ ನಂತರ ಬಿಸಿಲು ಬಂತು. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ಉಂಟಾಗಿ ಗುಡುಗಿ ನಿಂದ ಕೂಡಿದ ಮಳೆ ಸ್ವಲ್ಪ ಹೊತ್ತು ಸುರಿಯಿತು. ಮಳೆ ಹೆಚ್ಚು ಹೊತ್ತು ಬೀಳಬಹುದೆಂದು ನಿರೀಕ್ಷಿಸ ಲಾಗಿ ತ್ತಾದರೂ ಮಳೆ ನಿಂತೇ ಹೋಯಿತು.ಸಾರ್ವಜನಿಕರು ಮಳೆಯಲ್ಲಿ ನೆನೆಯ ದಂತೆ  ಕೊಡೆಯನ್ನು ಆಶ್ರಯಿಸಿ ನಗರ ದಲ್ಲಿ ಸಾಗಿದರೆ, ದ್ವಿಚಕ್ರ ವಾಹನ ಚಾಲಕರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ಕಟ್ಟಡಗಳ ಆಶ್ರಯ ಪಡೆದರು. ದಿನದ ಕೂಳಿಗಾಗಿ ದುಡಿಯುವ ಒಂಟೆತ್ತಿನ ಗಾಡಿಯವರು ತಮ್ಮ ಗಾಡಿಗೆ ತುಂಬಿಸಿದ್ದ ಸಾಮಾನುಗಳನ್ನು ಮಳೆ ಯಿಂದ ರಕ್ಷಿಸಲು ಪ್ಲಾಸ್ಟಿಕ್ ಹೊದಿಸಿ ಮುಂದೆ ಸಾಗಿದ ದೃಶ್ಯ ಸಾಮಾನ್ಯ ವಾಗಿತ್ತು.ಸಂಜೆಯತನಕ ಮೋಡಕವಿದ ತಂಪಾದ ವಾತಾವರಣ ಇತ್ತು. ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ತುಸುಹೊತ್ತು ಮಳೆಯಾಯಿತು. ಕಡೂರು ತಾಲ್ಲೂಕು ಸೇರಿದಂತೆ ತರೀಕೆರೆ ತಾಲ್ಲೂಕಿನ ಶಿವನಿ, ಅಜ್ಜಂಪುರ, ಚಿಕ್ಕ ಮಗಳೂರು ತಾಲ್ಲೂಕಿನ ಅಂಬಳೆ ಲಕ್ಯಾ ಹೋಬಳಿಗಳಲ್ಲಿ ಬೆಳೆಗಳಿಗೆ ಮಳೆ ಅಗತ್ಯವಾಗಿದೆ.ಮಲೆನಾಡು ಭಾಗದಲ್ಲಿ ಮಕ್ಕಿಗದ್ದೆ ಗಳಲ್ಲಿದ್ದ ನೀರು ಇಂಗಿಹೋಗಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪ್ರತಿನಿತ್ಯಿ ಆಗಸ ವನ್ನು ನೋಡುವ ಪರಿಸ್ಥಿತಿ ಬಹುತೇಕ ಕಡೆಗಳಲ್ಲಿ ಉಂಟಾಗಿದೆ.ಶೃಂಗೇರಿಯಲ್ಲಿ ಮಳೆ: ತಾಲ್ಲೂಕಿನಾದ್ಯಂತ ಭಾನುವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ.  ದಸರಾ ಮುಗಿ ದಾಕ್ಷ ಣವೇ ಮಳೆ ಶುರು ಹಚ್ಚಿರುವುದು ಆಶ್ಚರ್ಯ ತಂದಿದೆ. ತಾಲ್ಲೂಕಿನಲ್ಲಿ ಈ ವರ್ಷ ಎಲ್ಲಾ ತಿಂಗಳುಗಳಲ್ಲಿಯೂ ಮಳೆ ಬರುತ್ತಲೇ ಇತ್ತು. ಕಳೆದ 15 ದಿನಗಳಿಂದ ಮಳೆಯ ಛಾಯೇವೇ ಇರದೇ ಈ ದಿನಗಳಲ್ಲಿ ಬಿಸಿಲಿನ ತಾಪ ವಿಪರೀತ ಜಾಸ್ತಿ ಯಾಗಿತ್ತು. ಇದೀಗ ಮಳೆ ಬಂದು ತಂಪಾದ ವಾತಾವರಣ ಉಂಟಾಗಿದೆ.ಆದರೆ ಮಳೆ ಬಂದು ಅಡಿಕೆ ಬೆಳೆ ಗಾರರಿಗೆ ಸ್ವಲ್ಪ ಮಟ್ಟಿನ ಆತಂಕ ಎದು ರಾಗಿದ್ದು ಇದೀಗ ತಾನೇ ಅಡಿಕೆ ಬೆಳೆಗಾ ರರು ಅಡಿಕೆ ಕೊಯ್ಲು ಪ್ರಾರಂಭಿಸಿದ್ದು, ಮಳೆ ಬಂದ ಕಾರಣ ಚಿಂತಾಕ್ರಾಂತ ರಾಗಿದ್ದಾರೆ. ಕಡೂರು: ತಂಪೆರೆದ ಚಿತ್ತೆ ಮಳೆ

ಕಡೂರು: ಬರಗಾಲದ ಛಾಯೆಯಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಪಟ್ಟಣಕ್ಕೆ ಭಾನುವಾರ ಮಧ್ಯಾಹ್ನ ಸುರಿದ ಚಿತ್ತೆ ಮಳೆಯು ತಂಪೆರೆಯಿತು.ಬಸವೇಶ್ವರ ವೃತ್ತದ ಬಟ್ಟೆ ಅಂಗಡಿಗೆ ನೀರು ಹರಿದು ನಷ್ಟವಾಯಿತು.

 

9ನೇ ವಾರ್ಡ್‌ನಲ್ಲಿರುವ ಸ್ಕಂದ ಹೋಟೆಲ್ ಹಿಂಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದರೆ. ರಾಷ್ಟ್ರೀಯ ಹೆದ್ದಾ ರಿಯ ಮೆಸ್ಕಾಂ ಇಲಾಖೆ  ಮುಂದೆ ಎರಡು ಅಡಿಗಳಷ್ಟು ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಯಾಯಿತು.ಕೆಲವು ವಾರ್ಡ್‌ಗಳ ಮೋರಿಗಳಲ್ಲಿ ತುಂಬಿದ್ದ ಕಸಕಡ್ಡಿ ಕೊಚ್ಚಿ ಹೋಗಿ ಸ್ವಚ್ಛವಾದರೆ, ಹಲವು ಭಾಗದಲ್ಲಿ ಮೋರಿಗಳು ಮುಚ್ಚಿ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry