ಬುಧವಾರ, ಮೇ 18, 2022
23 °C

ಮಳೆ ಇಲ್ಲ: ಬೀಜ ವಿತರಣೆಯೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಮುಂಗಾರು ಮಳೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪ್ರವೇಶಿಸಿದ್ದರೂ ಇಲ್ಲಿ ಮಾತ್ರ ಆಗಸದಲ್ಲಿ ಆಗಾಗ ಮೋಡಕವಿದ ವಾತಾವರಣ ಇದೆ. ಗುರುವಾರದವರೆಗೆ ತಾಲ್ಲೂಕಿನಲ್ಲಿ ಮಳೆ ಬಿದ್ದಿಲ್ಲ. ಆದ್ದರಿಂದ ಮುಂಗಾರು ಹಂಗಾಮಿನ ಬಿತ್ತನೆಯೂ ಆರಂಭಗೊಂಡಿಲ್ಲ.ಹೊಲಗಳಲ್ಲಿ ಉಳುಮೆ ಮಾಡಿ ಬಿತ್ತನೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಬಿತ್ತನೆ ಬೀಜದ ವಿತರಣೆ ಇನ್ನೂ ಆರಂಭವಾಗಿಲ್ಲ. ಆದರೂ ಕೂಡಜನರು ರೈತ ಸಂಪರ್ಕ ಕೇಂದ್ರಗಳಿಗೆ ಅಲೆಯುತ್ತಿರುವುದು ಕಂಡು ಬಂದಿದೆ. `ಮಳೆ ಯಾವಾಗಲಾದರೂ ಆಗಲಿ, ಈಗಿನಿಂದಲೇ ಬೀಜ ವಿತರಿಸಿದರೆ ಮುಂದೆ ನೂಕುನುಗ್ಗಲು ಆಗುವುದಿಲ್ಲ. ಆದ್ದರಿಂದ ಶೀಘ್ರ ಬೀಜದ ವಿತರಣೆ ಆರಂಭಿಸಬೇಕು~ ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದ ಜಾಪೂರವಾಡಿ ರೈತರಾದ ಚಿತ್ರಶೇಖರ ಕಲ್ಯಾಣಪ್ಪ ಮತ್ತು ಶರಣಬಸಪ್ಪ ಬಿರಾದಾರ ಅಭಿಪ್ರಾಯಪಟ್ಟರು.ತಾಲ್ಲೂಕಿನಲ್ಲಿ ಒಟ್ಟು 6 ರೈತ ಸಂಪರ್ಕ ಕೇಂದ್ರಗಳು ಮತ್ತು 4 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲಿ 100 ರಿಂದ 280 ಕ್ವಿಂಟಲ್ ಸೋಯಾಬೀನ್ ಬೀಜ ಮತ್ತು ಇತರೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ ಚೆನ್ನಶೆಟ್ಟಿ ತಿಳಿಸಿದ್ದಾರೆ. ಮಳೆ ಬಂದಾಗ ಎಲ್ಲೆಡೆ ಬೀಜ ವಿತರಣೆ ಆರಂಭಿಸಲಾಗುತ್ತದೆ ಎಂದಿದ್ದಾರೆ.ಕಳೆದ ಸಾಲಿನಲ್ಲಿ ಹಿಂಗಾರು ಮಳೆ ಆಗಿಲ್ಲ. ನಂತರ ಬೇಸಿಗೆಯಲ್ಲೂ ಮಳೆ ಬಿದ್ದಿಲ್ಲ. ಈಗ ಮಳೆಗಾಲ ಆರಂಭ ಆಗಿದ್ದರೂ ಇನ್ನುವರೆಗೆ ಮೇಘರಾಜನ ಪತ್ತೆಯೇ ಇಲ್ಲವಾದ್ದರಿಂದ ರೈತರು ಆತಂಕ ಪಡುವಂತಾಗಿದೆ.

`ಧಗಿ ಭಾಳ ಅದಾರಿ, ಆದರ ಮಳಿನೇ ಬರಾಲ್ದು ನೋಡ್ರಿ. ಈ ವರ್ಷರೇ ಮಳಿ ಸರಿಯಾಗಿ ಬಂದು ಜನರ ಬಾಳ್ವ್ಯಾ ಛಂದ ಮಾಡ್ತದೋ ಎನ್ ಹೋದ ವರ್ಷದಾಂಗ್ ಮಣ್ಣಾಗ್ ಹಾಕ್ತದೋ~ ಎಂದು ಸಮಯಕ್ಕೆ ಸರಿಯಾಗಿ ಮಳೆ ಆಗುತ್ತದೆ ಎಂದು ನಂಬಿದ್ದ ಇಲ್ಲಿನ ರೈತರು ಬೇಸರ ವ್ಯಕ್ತಪಡಿಸುವಂತಾಗಿದೆ.`ಪಕ್ಷದ ಸಾಧನೆ ಗೆಲುವಿಗೆ ಶ್ರೀರಕ್ಷೆ~

ಗುಲ್ಬರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ಸಾಧನೆಯೇ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೇಳಿದರು.ಈಶಾನ್ಯ ಮತಕ್ಷೇತ್ರದ ಚುನಾವಣೆ ಅಂಗವಾಗಿ ನಗರದ ಕೆ.ಬಿ.ಎನ್. ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಪಕ್ಷ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ  ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.