ಮಂಗಳವಾರ, ಮೇ 11, 2021
25 °C

ಮಳೆ ಇಳಿಮುಖ: ವಿವಿಧೆಡೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮುಂಗಾರು ಮಳೆ ರಭಸ ಕಡಿಮೆಯಾಗಿದೆ. ಮಡಿಕೇರಿಯಲ್ಲಿ ಬೆಳಿಗ್ಗೆ ವೇಳೆಯಲ್ಲಿ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ.ಮಳೆಯ ನಡುವೆ ದಟ್ಟವಾದ ಮಂಜು ಕವಿದ ಹಿನ್ನೆಲೆಯಲ್ಲಿ ವಾಹನ ಸವಾರರು ರಸ್ತೆ ಕಾಣದೇ ಮಧ್ಯಾಹ್ನದ ಸಮಯದಲ್ಲಿ ವಾಹನಗಳ ದೀಪವನ್ನು ಹೊತ್ತಿಸಿಕೊಂಡು ವಾಹನ ಚಾಲಿಸುತ್ತಿದ್ದ ದೃಶ್ಯ ಕಂಡು ಬಂತು.ಮಡಿಕೇರಿಯಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಿಸಿಲಿನ ವಾತಾವರಣ ತೀರ ವಿರಳವಾಗಿದೆ. ಇದರಿಂದ ಜನಸಾಮಾನ್ಯರಿಗೆ ಬಟ್ಟೆ ಒಣಗಿಸುವುದು ಸೇರಿದಂತೆ ಮತ್ತಿತರ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಬಟ್ಟೆ ಒಣಗಿಸಲು ಬಿದಿರಿನ ಬಳಂಜಿ ಕೊಳ್ಳಲು ಜನ ಮುಗಿ ಬಿದ್ದರು.ದಿನವಿಡೀ ಮಳೆಯ ಜೊತೆಗೆ ಮಂಜು ಕವಿದ ವಾತಾವರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಳಿಯಿಂದ ರಕ್ಷಣೆ ಪಡೆಯುವ ಸಲುವಾಗಿ           ಸ್ವೆಟರ್, ಜರ್ಕಿನ್ ಸೇರಿದಂತೆ ವಸ್ತುಗಳನ್ನು ಕೊಳ್ಳಲು ಜನರು ಅಂಗಡಿಗೆ ಮುಗಿ ಬೀಳುತ್ತಿರುವವರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ.ಜಿಲ್ಲೆಯ ಮಳೆ ವಿವರ

ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆ ಅವಧಿ ಪೂರ್ಣಗೊಂಡಂತೆ ಕಳೆದ 24 ಗಂಟೆಗಳಲ್ಲಿ 18.55 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 9.35 ಮಿ.ಮೀ. ಮಳೆ ದಾಖಲಾಗಿತ್ತು.ಜಿಲ್ಲೆಯಲ್ಲಿ ಜನೆವರಿಯಿಂದ ಇಲ್ಲಿಯವರೆಗಿನ ಮಳೆ 678.02 ಮಿ.ಮೀ. ಮಳೆ ಬಿದ್ದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 433.35 ಮಿ.ಮೀ ಮಳೆ ದಾಖಲಾಗಿತ್ತು.ಮಡಿಕೇರಿ ತಾಲ್ಲೂಕಿನಲ್ಲಿ 33.25 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 18.55 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 981.14 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 572.57 ಮಿ.ಮೀ. ಮಳೆಯಾಗಿತ್ತು.ವೀರಾಜಪೇಟೆ ತಾಲ್ಲೂಕಿನಲ್ಲಿ 9.17 ಮಿ.ಮೀ. ಮಳೆ ಬಿದ್ದಿದೆ. ಕಳೆದ ವರ್ಷ ಇದೇ ದಿನ 4.73 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 512.07 ಮಿ.ಮೀ. ಮಳೆ ಸುರಿದಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ 367.59 ಮಿ.ಮೀ. ಮಳೆಯಾಗಿತ್ತು.ಸೋಮವಾರಪೇಟೆ ತಾಲ್ಲೂಕಿನಲ್ಲಿ 13.22 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.78 ಮಿ.ಮೀ. ಮಳೆಯಾಗಿತ್ತು.ಜನವರಿಯಿಂದ ಇಲ್ಲಿಯವರೆಗೆ 540.87 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 359.90 ಮಿ.ಮೀ ಮಳೆಯಾಗಿತ್ತು.ಹೋಬಳಿವಾರು ಮಳೆ ವಿವರ

ಮಡಿಕೇರಿ ಕಸಬಾ 26.4 ಮಿ.ಮೀ., ನಾಪೋಕ್ಲು 9.4 ಮಿ.ಮೀ., ಸಂಪಾಜೆ 48.6 ಮಿ.ಮೀ., ಭಾಗಮಂಡಲ 48.6 ಮಿ.ಮೀ., ವೀರಾಜಪೇಟೆ ಕಸಬಾ 8.8 ಮಿ.ಮೀ., ಹುದಿಕೇರಿ 14.8 ಮಿ.ಮೀ., ಶ್ರಿಮಂಗಲ 16.2 ಮಿ.ಮೀ., ಪೊನ್ನಂಪೇಟೆ 2.2 ಮಿ.ಮೀ., ಅಮ್ಮತ್ತಿ 13 ಮಿ.ಮೀ., ಸೋಮವಾರಪೇಟೆ ಕಸಬಾ 16.2 ಮಿ.ಮೀ., ಶನಿವಾರಸಂತೆ 19 ಮಿ.ಮೀ., ಶಾಂತಳ್ಳಿ 20.6 ಮಿ.ಮೀ., ಕೊಡ್ಲಿಪೇಟೆ 11.3 ಮಿ.ಮೀ., ಕುಶಾಲನಗರ 3.4 ಮಿ.ಮೀ., ಸುಂಟಿಕೊಪ್ಪ 8.8 ಮಿ.ಮೀ. ಮಳೆಯಾಗಿದೆ.ಹಾರಂಗಿ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಜಲಾಶಯದಲ್ಲಿ ಈಗ 2828.05 ಅಡಿನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 2809.01ಅಡಿ ನೀರು ಸಂಗ್ರಹವಾಗಿತ್ತು.ಹಾರಂಗಿ ಜಲಾಶಯ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 9.8 ಮಿ.ಮೀ. ಮಳೆಯಾಗಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 777 ಕ್ಯೂಸೆಕ್ ಆಗಿದೆ.ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 836ಕ್ಯೂಸೆಕ್ ಆಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.