ಮಳೆ: ಕೊಚ್ಚಿ ಹೋದ ಸೇತುವೆ, ಅಪಾರ ಬೆಳೆ ಹಾನಿ

7

ಮಳೆ: ಕೊಚ್ಚಿ ಹೋದ ಸೇತುವೆ, ಅಪಾರ ಬೆಳೆ ಹಾನಿ

Published:
Updated:

ಯಮಕನಮರಡಿ: ಶನಿವಾರ ರಾತ್ರಿ ಗುಡುಗು, ಸಿಡಿಲು, ಮಿಂಚಿನಿಂದ ಸುರಿದ ವಿಪರೀತ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದೆ. ಸಮೀಪದ ಸುತಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4 ಬಳಿಯಲ್ಲಿರುವ ಸೇತುವೆಯ ಮೇಲೆ ನೀರು ಹರಿದಿದ್ದರಿಂದ ಸುಮಾರು 2ತಾಸು ಹೆದ್ದಾರಿ ವಹಿವಾಟು ಸ್ಥಗಿತಗೊಂಡಿತ್ತು. ಅಲ್ಲದೇ ಮೂರು ದ್ವಿಚಕ್ರ ವಾಹನ ತೇಲಿ ಹೋಗಿದ್ದವು.ಮಳೆ ಅಬ್ಬರ ಸಾಕಷ್ಟಿದ್ದರೂ ಸುದೈವದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪ್ರವಾಹ ಇಳಿದ ನಂತರ ಮೂರು ದ್ವಿಚಕ್ರ ವಾಹನಗಳು  ಸಿಕ್ಕಿವೆ.ಕಾಕತಿ ಹೋಬಳಿ ಮಟ್ಟದ ಉಪತಹಶೀಲ್ದಾರ ಎ.ಜಿ. ಹಿರೇಮಠ ಅವರು ಭಾನುವಾರ ಸುತಗಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದ ರೈತರ ಕಬ್ಬು ಸುಮಾರು 70 ಎಕರೆ, 25 ಎಕರೆ ಭತ್ತ ಹಾಗೂ ಅವರೆ, ಬೇನಸ್ ಇತರೆ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ ಹಾಗೂ ಸುತಗಟ್ಟಿ ಗ್ರಾಮದ ಬಳಿ ಇರುವ ಚಿಕ್ಕದಾಗ ಸೇತುವೆ ಸಂಪೂರ್ಣ ಕಿತ್ತು ಹೋಗಿದೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಪೂರ್ಣ ಬಿದ್ದಿದೆ. ಮೂವರು ಮನೆಗಳು ಕುಸಿದು ಬಿದ್ದಿದೆ ಎಂದು ಅವರು ತಿಳಿಸಿದರು.ಬೆಳಗಾವಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚವ್ಹಾಣ, ಗ್ರಾಮಲೆಕ್ಕಾಧಿಕಾರಿ ಪ್ರಶಾಂತ ನೇಸರಿ, ರಾಜೇಂದ್ರ ತುಬಚಿ, ಮಾರುತಿ ಗುಟಗುದ್ದಿ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry