ಶನಿವಾರ, ಜುಲೈ 24, 2021
27 °C

ಮಳೆ ಕೊರತೆ: ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಣಾವರ: ಸಂಪೂರ್ಣ ಮಳೆ ಆಶ್ರಿತ ಬಾಣಾವರ ಹೋಬಳಿಗೆ ಈ ಬಾರಿಯೂ ವರುಣನ ಅವಕೃಪೆ ಎದುರಾಗಿದೆ. ಬಿತ್ತನೆ ಕಾರ್ಯ ಹಲವೆಡೆ ಆರಂಭವಾಗದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.ಏಪ್ರಿಲ್-ಮೇ ನಲ್ಲಿ ಕೊಂಚ ಸುರಿದ ಮಳೆ ಹೋಬಳಿಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆಗ ಬಂದ ಮಳೆರಾಯ ತಿಂಗಳು ಉರುಳಿದರೂ ಇತ್ತ ಸುಳಿಯದ್ದರಿಂದ ರೈತರು ಮುಗಿಲು ನೋಡುವಂತಾಗಿದೆ.ಜೂನ್‌ವರೆಗೆ 227.82ಮಿ.ಮೀ. ಮಳೆ ಆಗಬೇಕಿತ್ತು. 2012ರಲ್ಲಿ ಇದೇ ವೇಳೆಗೆ 217.02 ಮಿ.ಮೀ ಮಳೆ ಆಗಿತ್ತು. ಆದರೆ, 2013ರಲ್ಲಿ 165.6 ಮಿ.ಮೀಗಳಷ್ಟು ಮಾತ್ರ ಮಳೆಯಾಗಿದೆ. ಒಟ್ಟು 51.42ಮಿ.ಮೀ.ನಷ್ಟು ಮಳೆ ಕಡಿಮೆ ಆಗಿದೆ.2400 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ಕೇವಲ 850 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. 490 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆ ಗುರಿ ಹೊಂದಲಾಗಿತ್ತು. ಕೇವಲ 120 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಅಲಸಂದೆ, ತೊಗರಿ, ಎಳ್ಳು, ಸೂರ್ಯಕಾಂತಿ ಸೇರಿದಂತೆ ಎಲ್ಲ ಬೆಳೆಗಳ ಬಿತ್ತನೆ ಪ್ರಮಾಣ ಕುಂಠಿತವಾಗಿದೆ.`ಪಟ್ಟಣದ ರೈತ ಸಂಪರ್ಕ ಕೇಂದ್ರದ ವತಿಯಿಂದ ಹೋಬಳಿಯ ರೈತರಿಗೆ ಈಗಾಗಲೇ ರಿಯಾಯಿತಿ ದರದಲ್ಲಿ ಬೀಜ ವಿತರಿಸಲಾಗಿದ್ದು ಹೆಸರು 2640 ಕೆ.ಜಿ, ಉದ್ದು 1321 ಕೆ.ಜಿ, ಅಲಸಂದೆ 2385 ಕೆ.ಜಿ, ಹೈ.ಜೋಳ 2337 ಕೆ.ಜಿ, ತೊಗರಿ 735 ಕೆ.ಜಿ, ಸೂರ್ಯಕಾಂತಿ 572 ಕೆ.ಜಿ, ಮುಸುಕಿನ ಜೋಳ 3785 ಕೆ.ಜಿಗಳಷ್ಟು ವಿತರಿಸಲಾಗಿದೆ' ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ.ಸೋಮಶೇಖರ್ `ಪ್ರಜಾವಾಣಿ'ಗೆ ತಿಳಿಸಿದರು.ಮಳೆಗೆ ಕಾದಿರುವ ಬೆಳೆ

ಜಾವಗಲ್: ಮಳೆ ಬೀಳದೇ ಇರುವುದರಿಂದ ಸಾವಿರಾರು ಎಕರೆ ಭೂಮಿಯಲ್ಲಿ ಬಿತ್ತಿದ ಬೆಳೆಗಳು ಒಣಗುತ್ತಿವೆ.

ಮುಂಗಾರಿನಲ್ಲಿ ಬಿತ್ತಲಾದ ಸೂರ್ಯಕಾಂತಿ, ಎಳ್ಳು, ಉದ್ದು, ಹೆಸರು, ಜೋಳ ಮುಂತಾದ  ಬೆಳೆಗಳು ವರುಣನ ಕೃಪೆಯಿಲ್ಲದೇ ಬಾಡುತ್ತಿವೆ.ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದರೂ ಜಾವಗಲ್ ಸುತ್ತಮುತ್ತಲ ಪ್ರದೇಶ ಬಿಸಿಲ ನಾಡಿನಂತಾಗಿದೆ.

ಆರಂಭದಲ್ಲಿ ಭರಣಿ ಮಳೆ ಒಂದಿಷ್ಟು ಸುರಿದ ಪರಿಣಾಮ ಸಂತಸಗೊಂಡ ರೈತರು ಬಿತ್ತನೆ ಕೈಗೊಂಡಿದ್ದರು. ಆದರೆ, ಈಚೆಗೆ ಮಳೆರಾಯ ಕಾಣೆಯಾಗಿದ್ದು, ರೈತರು ಚಿಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.