ಮಳೆ ಕೊರತೆ: ಶೇ 37ರಷ್ಟು ಬಿತ್ತನೆ

ಸೋಮವಾರ, ಮೇ 20, 2019
29 °C

ಮಳೆ ಕೊರತೆ: ಶೇ 37ರಷ್ಟು ಬಿತ್ತನೆ

Published:
Updated:

ಕೊಪ್ಪಳ: ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿಯೂ ಮುಂಗಾರು ಮಳೆಯ ಕೊರತೆ ಕಂಡು ಬಂದಿದೆ. ಆದರೆ ಅಲ್ಪ-ಸ್ವಲ್ಪ ಮಳೆಯಿಂದಾಗಿ ರೈತರು ಉತ್ತಮ ಮಳೆಯ ಭರವಸೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.  ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೇವಲ ಶೇ 37ರಷ್ಟು ಬಿತ್ತನೆಯಾಗಿದೆ.ಜಿಲ್ಲೆಯಲ್ಲಿ ಒಟ್ಟು 2,52,500 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಈ ಪೈಕಿ 94459 ಹೆ. ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 94 ಮಿ.ಮೀ ನಷ್ಟು ಮಳೆ ಬಿದ್ದಿದ್ದರೆ, ಈ ವರ್ಷ 48.8 ಮಿ.ಮೀ.ನಷ್ಟು ಮಳೆ ಬಿದ್ದಿದೆ.ಮಳೆ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯ 222 ಮಿ.ಮೀ. ಮಳೆಯ ಬದಲಿಗೆ 113. 65 ಮಿ.ಮೀ. ಮಳೆಯಾಗಿದ್ದು, 108.35 ಮಿ.ಮೀ. ಮಳೆಯ ಕೊರತೆ ಕಂಡು ಬಂದಿದೆ. ಕೊಪ್ಪಳ ತಾಲ್ಲೂಕಿನಲ್ಲಿ 144.8 ಮಿ.ಮೀ., ಕುಷ್ಟಗಿ- 104.9. ಯಲಬುರ್ಗಾ- 118 ಹಾಗೂ ಗಂಗಾವತಿ ತಾಲ್ಲೂಕಿನಲ್ಲಿ 86.9 ಮಿ.ಮೀ. ಮಳೆಯಾಗಿದೆ. ಬಿತ್ತನೆ: ಕೊಪ್ಪಳ ತಾಲ್ಲೂಕಿನಲ್ಲಿ 64,600 ಹೆ. ಗುರಿಯ ಬದಲಿಗೆ 31,924 ಹೆ. (ಶೇ 49), ಕುಷ್ಟಗಿ- 68250 ಹೆ. ಗುರಿಯ ಎದುರು 26,674 ಹೆ. (ಶೇ 39), ಯಲಬುರ್ಗಾ- 55,520 ಹೆ. ಗುರಿಯ ಬದಲಿಗೆ 22,787 ಹೆ. (ಶೇ 41) ಹಾಗೂ ಗಂಗಾವತಿ ತಾಲೂಕಿನಲ್ಲಿ 64,130 ಹೆ. ಗುರಿಯ ಬದಲಿಗೆ 13,074 ಹೆ. (ಶೇ 20) ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry