ಮಂಗಳವಾರ, ಏಪ್ರಿಲ್ 13, 2021
29 °C

ಮಳೆ: ಜಲಾಶಯ ಭರ್ತಿಗೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲೂರು: ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಬರುವ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.ಸಕಲೇಶಪುರ ಭಾಗದಲ್ಲಿ ಒಂದು ವಾರದಿಂದ ಸತತವಾಗಿ ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯದ ಒಳಹರಿವು 24,404 ಕ್ಯೂಸೆಕ್‌ಗೆ ಏರಿಕೆಯಾಗಿದೆ.37 ಟಿ.ಎಂ.ಸಿ. ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 22.9 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ಆದರೆ, ನಾಲೆಗಳಿಗೆ ನೀರು ಬಿಡಲು ಆರಂಭಿಸಿರುವುದರಿಂದ ಜಲಾಶಯ ತುಂಬಲು ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ಮಳೆ ಬೀಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಗೆ ಇನ್ನು 6.95ಮೀಟರ್‌ಗಳಷ್ಟು ನೀರು ಬೇಕಾಗಿದೆ.

1.51ಟಿ.ಎಂ.ಸಿ. ಸಂಗ್ರಹ ಸಾಮರ್ಥ್ಯದ ಈ ಜಲಾಶಯದ ಗರಿಷ್ಠ ನೀರಿನ ಮಟ್ಟ 966.05ಮೀಟರ್‌ಗಳಾಗಿದ್ದು ಮಂಗಳವಾರ 959.10 ಮೀ. ನೀರು ತುಂಬಿದೆ. ಜಲಾಶಯದ ಒಳಹರಿವು 65ಕ್ಯೂಸೆಕ್‌ಗೆ ಏರಿದೆ. ಕಳೆದ ವರ್ಷ ಈ ವೇಳೆಗೆ ಜಲಾಶಯ ತುಂಬಿತ್ತು.~ಶೀಘ್ರದಲ್ಲೇ ನೀರು ಬಳಕೆದಾರರ ಸಲಹಾ ಸಮಿತಿಯ ಸಭೆ ಕರೆದು ಕಾಲುವೆಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ ಎಂದು ವಾಟೆಹೊಳೆ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಆರ್.ನಟರಾಜ್ ತಿಳಿಸಿದ್ದಾರೆ.ಚಿಕ್ಕಮಗಳೂರು ಭಾಗದಲ್ಲೂ ಮಳೆಯಾಗಿರುವುದರಿಂದ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯದ ಒಳಹರಿವು ಮಂಗಳವಾರ ಸಂಜೆ ವೇಳೆಗೆ ಹೆಚ್ಚಾಗಿದೆ. ಬೆಳಿಗ್ಗೆ 100ಕ್ಯೂಸೆಕ್ ಆಸುಪಾಸಿನಲ್ಲಿದ್ದ ಒಳಹರಿವು ಸಂಜೆ ವೇಳೆಗೆ 1100 ಕ್ಯೂಸೆಕ್‌ಗೆ ಏರಿದೆ. ಇದರಿಂದಾಗಿ ನೀರಿನ ಮಟ್ಟ ಒಂದೇ ದಿನ 10ಸೆಂ.ಮೀನಷ್ಟು ಏರಿಕೆಯಾಗಿದೆ.ಯಗಚಿ ಜಲಾಶಯದ ನೀರಿನ ಮಟ್ಟ 964.6 ಮೀ. ಆಗಿದ್ದು ಮಂಗಳವಾರ ಸಂಜೆ 962.90 ಮೀಟರ್  ನೀರು ತುಂಬಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.