ಮಳೆ: ಮನೆ ಕುಸಿದು ಇಬ್ಬರಿಗೆ ಗಾಯ

ಬುಧವಾರ, ಜೂಲೈ 17, 2019
30 °C

ಮಳೆ: ಮನೆ ಕುಸಿದು ಇಬ್ಬರಿಗೆ ಗಾಯ

Published:
Updated:

ಬೆಂಗಳೂರು: ಕೊಡಗು ಬಿಟ್ಟು ರಾಜ್ಯದ ಉಳಿದೆಡೆ ಮಳೆ ಶನಿವಾರ ಇಳಿಮುಖವಾಗಿತ್ತು. ವಿರಾಜಪೇಟೆ ಬಳಿ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ ಭಾರಿ ಮಳೆ ಸುರಿದು  ಹೆಗ್ಗಳ ಗ್ರಾಮದ ನಿರ್ಮಲ ಗಿರಿ ಎಂಬಲ್ಲಿ ಒಂದು ಮನೆ ಕುಸಿದು ಇಬ್ಬರು ಗಾಯಗೊಂಡಿದ್ದಾರೆ.ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿ ಹಾಗೂ ಜಲಾನಯನ ಪ್ರದೇಶಗಳಾದ ಭಾಗಮಂಡಲ, ನಾಪೊಕ್ಲು ಸುತ್ತಮುತ್ತ  ಶುಕ್ರವಾರ ರಾತ್ರಿ ಮತ್ತು ಶನಿವಾರ ಭಾರಿ ಮಳೆ ಸುರಿದಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಬಹತೇಕ ಭರ್ತಿಯಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ಲಿಂಗನಮಕ್ಕಿ ಸುತ್ತಮುತ್ತ 69 ಮಿ.ಮೀ. ಮಳೆಯಾದ ಪರಿಣಾಮ ಜಲಾಶಯಕ್ಕೆ ಒಳಹರಿವು 5,959 ಕ್ಯೂಸೆಕ್‌ಗೆ ಏರಿದೆ. ಭದ್ರಾ ಜಲಾಶಯದ ಒಳಹರಿವು 5,854 ಕ್ಯೂಸೆಕ್‌ಗೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.  ಮಂಗಳೂರು ನಗರದಲ್ಲಿ ಶನಿವಾರ ಬೆಳಿಗ್ಗೆ ಬಿಸಿಲು ಕಾಣಿಸಿಕೊಂಡರೆ ಮಧ್ಯಾಹ್ನ ಮತ್ತು ಸಂಜೆ ಕೆಲಕಾಲ ಮಳೆಯಾಯಿತು. ಚಿಕ್ಕಮಗಳೂರು ನಗರದಲ್ಲಿ ಸಂಜೆ ಮಳೆಯಾಯಿತು. ಆದರೆ ಜಿಲ್ಲೆಯ ಕಳಸ, ಕೊಟ್ಟಿಗೆಹಾರ, ಶೃಂಗೇರಿ ಪ್ರದೇಶದಲ್ಲಿ ಮಳೆಯಾಗಿದೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಸಾಧಾರಣ ಮಳೆಯಾಗಿದೆ. ಲಿಂಗನಮಕ್ಕಿ ಸುತ್ತಮುತ್ತ 69 ಮಿ.ಮೀ. ಮಳೆಯಾದ ಪರಿಣಾಮ ಜಲಾಶಯಕ್ಕೆ ಒಳಹರಿವು 5,959 ಕ್ಯೂಸೆಕ್‌ಗೆ ಏರಿದೆ. ಭದ್ರಾ ಜಲಾಶಯದಒಳಹರಿವು 5,854 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry