ಮಳೆ ಸಹಾಯವಾಣಿ ಆರಂಭ

ಮಂಗಳವಾರ, ಜೂಲೈ 23, 2019
25 °C

ಮಳೆ ಸಹಾಯವಾಣಿ ಆರಂಭ

Published:
Updated:

ಬೆಳಗಾವಿ: ನಗರದಲ್ಲಿ ಮಳೆಯಿಂದಾಗಿ ತೊಂದರೆ ಆದರೆ ಸಹಾಯ ನೀಡಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆಯ ಕಚೇರಿಯಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲು ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಲಾಗಿದೆ.ವಾರ್ಡ್ ನಂ. 1ರಿಂದ 30 ರವರೆಗೆ ಪಾಲಿಕೆಯ ನಗರ ಎಂಜಿನಿಯರ್ ಡಿ.ಎ. ಹಲಗಿ (ಮೊ: 9844220790) ಅವರನ್ನು ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಎಸ್.ಬಿ. ಪೋತದಾರ (ಮೊ: 9448114589) ಅವರನ್ನು ತಂಡದ ಮುಖ್ಯಸ್ಥರನ್ನಾಗಿ ಕಾರ್ಯದ ಉಸ್ತುವಾರಿ ಅಧಿಕಾರಿಗಳೆಂದು ನೇಮಿಸಲಾಗಿದೆ.ವಾರ್ಡ್ ನಂ. 1ರಿಂದ 15ರವರೆಗೆ ಸಂಬಂಧಪಟ್ಟ ಸಾರ್ವಜನಿಕರು ಟಿಳಕವಾಡಿ ಉಪವಿಭಾಗ ದಕ್ಷಿಣ-1ರ ಸಹಾಯಕ ಕಾರ್ಯಕಾರಿ ಎಂಜಿನಿಯರ್ ವಿ.ಎಂ. ಸಾಲಿಮಠ ಅವರನ್ನು (ದೂ: 0831-2405308, ಮೊ: 9480498435) ಹಾಗೂ ವಾರ್ಡ್ ನಂ. 16ರಿಂದ 30ಕ್ಕೆ ಸಂಬಂಧಪಟ್ಟ ಜನರು ಟಿಳಕವಾಡಿ ಉಪವಿಭಾಗ ದಕ್ಷಿಣ-2ರ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸಿ.ಎಲ್. ಕುಲಕರ್ಣಿ ಅವರನ್ನು (ದೂ: 0831-2405310, ಮೊ: 9448436879) ಸಂಪರ್ಕಿಸಬಹುದಾಗಿದೆ. ವಾರ್ಡ್ ನಂ. 31ರಿಂದ 58ರವರೆಗೆ ಪಾಲಿಕೆಯ ನಗರ ಎಂಜಿನಿಯರ್ ರಮೇಶ ನ್ಯಾಮಗೌಡ (ಮೊ: 9448481279), ಪರಿಸರ ಎಂಜಿನಿಯರ್ ವಿ.ಆರ್. ಬಿರಡಿ ಅವರನ್ನು (ಮೊ: 9448484812) ಅವರನ್ನು ತಂಡ ಮುಖ್ಯಸ್ಥರುಗಳ ಕಾರ್ಯದ ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ವಾರ್ಡ್ ನಂ. 31ರಿಂದ 44 ಮತ್ತು 58ನೇ ವಾರ್ಡ್‌ಗೆ ಸಂಬಂಧಪಟ್ಟವರು ಕೊನವಾಳಗಲ್ಲಿಯ ಉಪವಿಭಾಗ ಉತ್ತರ-1ರ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಎಲ್.ಎಂ. ಸುಳಗೇಕರ (ದೂ: 0831-2405307, ಮೊ: 9449193973) ಅವರನ್ನು ಹಾಗೂ ವಿಶ್ವೇಶ್ವರಯ್ಯ ನಗರದ ಉಪವಿಭಾಗ ಉತ್ತರ-2ರ ಸಹಾಯಕ ಕಾರ್ಯಕಾರಿ ಎಂಜಿನಿಯರ್ ರಮೇಶ ನ್ಯಾಮಗೌಡರ (ದೂ: 0831-2405309, ಮೊ: 9448481279) ಅವರನ್ನು  ಸಂಪರ್ಕಿಸಬಹುದು.ನಗರದಲ್ಲಿ ಅತಿ ಹೆಚ್ಚು ಮಳೆಯಾದಾಗ ನೀರು ಸರಾಗವಾಗಿ ಪ್ರಮುಖ ನಾಲೆಗಳಲ್ಲಿ ಸೇರಲು ಕನಿಷ್ಠ ಅರ್ಧ ಗಂಟೆ ಬೇಕಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಅನಾಹುತಗಳನ್ನು ತಪ್ಪಿಸಲು ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರು ನಾಲೆಗಳ ಅಕ್ಕಪಕ್ಕದಲ್ಲಿ ಓಡಾಡದಂತೆ ಎಚ್ಚರ ವಹಿಸಬೇಕು. ಅತಿಯಾದ ಮಳೆಯಿಂದ ತೊಂದರೆಗೆ ಒಳಗಾಗುವ ತಗ್ಗು ಪ್ರದೇಶದ ವಾಸಿಗಳು ತುರ್ತು ಸಂದರ್ಭದ ಸಹಾಯಕ್ಕಾಗಿ 24 ಗಂಟೆ ನಿರಂತರವಾಗಿ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ಸಹಾಯವಾಣಿ: 0831-2405337, 2405316 ಸಂಪರ್ಕಿಸಿದರೆ, ತಕ್ಷಣವೇ ಅಂಥ ಸ್ಥಳಗಳಿಗೆ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ.ಕಟ್ಟಡ ನಿರ್ಮಾಣದ ಅವಶೇಷ, ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವಸ್ತುಗಳನ್ನು ಚರಂಡಿಗಳಲ್ಲಿ ಅಥವಾ ನಾಲೆಗಳಲ್ಲಿ ಎಸೆಯಬಾರದು. ಘನತ್ಯಾಜ್ಯ ವಸ್ತುಗಳನ್ನು ಪ್ರತಿದಿನ ಸಂಗ್ರಹಣೆ ಮಾಡಲು ಬರುವ ತಳ್ಳುವ ಗಾಡಿಗೆ ನೀಡುವುದು. ಅಧಿಕ ಮಳೆ ಬರುವಾಗ ಮರಗಳ ಕೆಳಗೆ, ವಿದ್ಯುತ್ ಕಂಬಗಳ ಹತ್ತಿರ ಒಡಾಡದಂತೆ ಎಚ್ಚರ ವಹಿಸಬೇಕು ಎಂದು ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry