ಮಳೆ ಸಾಧ್ಯತೆ

7

ಮಳೆ ಸಾಧ್ಯತೆ

Published:
Updated:

ಬೆಂಗಳೂರು: ಬುಧವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.ಬಂಡೀಪುರದಲ್ಲಿ 3 ಸೆಂ.ಮೀ ಮಳೆ ಯಾಗಿದೆ. ಮದ್ದೂರು, ಮಾಲೂರು, ಶ್ರೀನಿವಾಸಪುರ, ರಾಯಲಪಾಡು, ಬಂಗಾರಪೇಟೆ, ಬೆಂಗಳೂರು ನಗರ, ಎಚ್.ಎ.ಎಲ್ ವಿಮಾನ ನಿಲ್ದಾಣ, ಹೊಸಕೋಟೆ, ರಾಮನಗರ, ಚನ್ನ ಪಟ್ಟಣ, ಕನಕಪುರ 2, ಮಡಿಕೇರಿ, ಕುಶಾಲನಗರ, ಪೊನ್ನಂಪೇಟೆ, ಮಾದಾ ಪುರ, ಮೈಸೂರು, ಹೊನಕೆರೆ, ಮಳವಳ್ಳಿ, ಕೋಲಾರ, ಹೆಸರಘಟ್ಟ, ಆನೇಕಲ್, ಟಿ.ಜಿ.ಹಳ್ಳಿ, ಜಿಕೆವಿಕೆ, ಚಿಂತಾಮಣಿಯಲ್ಲಿ 1 ಸೆಂ.ಮೀ ಮಳೆಯಾಗಿದೆ. ಧಾರ ವಾಡ ದಲ್ಲಿ ಕನಿಷ್ಠ ಉಷ್ಣಾಂಶ 16.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆ ಗಳ ಕಾಲ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶ ಗಳಲ್ಲಿ ಮಳೆ ಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry