ಭಾನುವಾರ, ಏಪ್ರಿಲ್ 18, 2021
33 °C

ಮಳೆ: ಸಿಎಂಐಇ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮುಂಗಾರು ಶೇ 21ರಷ್ಟು ಕುಂಠಿತಗೊಂಡಿರುವುದರ ಪರಿಣಾಮ ಆಹಾರ ಉತ್ಪಾದನೆ ಕಡಿಮೆ ಆಗಿ, ಧಾರಣೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಹಣದುಬ್ಬರವೂ ಹೆಚ್ಚಲಿದೆ ಎಂದು  ಭಾರತೀಯ ಆರ್ಥಿಕ ನಿಗಾ ಸಂಸ್ಥೆ (ಸಿಎಂಐಇ) ವರದಿ ತಿಳಿಸಿದೆ.ಮುಂಗಾರು ವೈಫಲ್ಯದಿಂದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು  ಉತ್ತರಪ್ರದೇಶದಲ್ಲಿ ಒಟ್ಟಾರೆ ಕೃಷಿ ಉತ್ಪಾದನೆ ಶೇ 2.3ರಷ್ಟು ಕುಸಿಯುವ ನಿರೀಕ್ಷೆ ಇದೆ. ಇದು ಬೇಳೆಕಾಳು, ದ್ವಿದಳ ಧಾನ್ಯ, ಎಣ್ಣೆಬೀಜಗಳ ಇಳುವರಿ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ವರ್ಷಾಂತ್ಯಕ್ಕೆ ಶೇ 9.7ರಷ್ಟು ಆಹಾರ ಹಣದುಬ್ಬರ ನಿರೀಕ್ಷಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.