ಮಳ್ಳೂರು: ಧಾರ್ಮಿಕ ಆಚರಣೆ

7

ಮಳ್ಳೂರು: ಧಾರ್ಮಿಕ ಆಚರಣೆ

Published:
Updated:

ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಮೂರು ದಿನಗಳ ಕಾಲ ಒಬ್ಬತ್ತು ದೇವರುಗಳ ಪೂಜೆ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ವಿಜಯಪುರದ ಅಯ್ಯಪ್ಪ ಸ್ವಾಮಿ, ಮಳ್ಳೂರು ಗ್ರಾಮದ ಕೈವಾರ ತಾತಯ್ಯ, ಸಾಯಿಬಾಬ, ನಾಗಲಮುದ್ದಮ್ಮ, ಎಲ್ಲಮ್ಮ, ಬೆಂಗಳೂರಿನ ಅಣ್ಣಮ್ಮ, ಮೇಲೂರಿನ ಚೌಡೇಶ್ವರಮ್ಮ, ಗಂಗಮ್ಮ ಮತ್ತು ಚೌಡಸಂದ್ರದ ಸಪ್ಲಮ್ಮ ದೇವರುಗಳನ್ನು ಸಂಕ್ರಾಂತಿಯ ಹಿಂದಿನ ತಂದು ಮೂರು ದಿನಗಳ ಕಾಲ ವಿವಿಧ ಹೋಮಾಚರಣೆಗಳೊಂದಿಗೆ ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಸುತ್ತಮುಲ್ಲಿನ ಗ್ರಾಮಗಳಿಂದ ನೂರಾರು ಮಹಿಳೆಯರು ಮಕ್ಕಳು ಆಗಮಿಸಿ ಪೂಜೆಯನ್ನು ನೆರವೇರಿಸಿದರು.ಗಾಯಕ ಶಶಿಧರ ಕೋಟೆ ಅವರಿಂದ ಸುಗಮ ಸಂಗೀತ, ಗ್ರಾಮಸ್ಥರಿಂದ ಭಜನೆ ಹಾಗೂ ಗ್ರಾಮದ ಶಾಂತಿಗಾಗಿ ಶಾಂತಿ ಹೋಮ ಮತ್ತು ವಿಘ್ನೇಶ್ವರ ಹೋಮವನ್ನು ನಡೆಸಲಾಯಿತು. ಭಾನುವಾರ ಸಕಲ ಪೂಜಾ ವಿಧಾನದೊಂದಿಗೆ ಎಲ್ಲಾ ದೇವರುಗಳನ್ನು ಸ್ವಂತ ಸ್ಥಳಗಳಿಗೆ ಶಾಸ್ತ್ರೋಕ್ತವಾಗಿ ಕಳುಹಿಸಿದರು.ಮಳ್ಳೂರು ಗ್ರಾ.ಪಂ. ಉಪಾಧ್ಯಕ್ಷ ನಿಶಾಂತ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜುನಾಥಬಾಬು, ತಾಲ್ಲೂಕು ಯುವ ಜನತಾದಳ ಅಧ್ಯಕ್ಷ ಮಂಜುನಾಥ್, ವಿ.ಎಂ.ಹರೀಶ್, ಎಂ.ಕೆ.ಮಂಜುನಾಥ್, ದೇವರಾಜು, ಬೈರೇಗೌಡ, ಎಂ.ಟಿ.ರಮೇಶ್, ಮುರಳಿ, ರಾಜೇಶ್, ಕೋಲಾರ ಮಂಜುನಾಥ್, ಗ್ರಾ.ಪಂ. ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry