ಭಾನುವಾರ, ಏಪ್ರಿಲ್ 18, 2021
28 °C

ಮಸಾಲಾ ಸಿನಿಮಾ ಮಾಡಬೇಕಿದೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಬುಗೆ ಇದೀಗ ಕಾಮೆಡಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಎನಿಸಿದೆಯಂತೆ! `ಅಂಕಲ್ ಪೈ~ದಲ್ಲಿ ನಟಿಸುವಲ್ಲಿ ನಿರತರಾಗಿದ್ದ 41ರ ಹರೆಯದ ತಬುಗೆ ಮಸಾಲಾ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ.ತಮ್ಮ ಎರಡು ದಶಕಗಳ ಅವಧಿಯಲ್ಲಿ ಮುಖ್ಯವಾಹಿನಿಯ ಸಿನಿಮಾ, ಮನರಂಜನೆ ಹಾಗೂ ಕಲಾತ್ಮಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ತಬುಗೆ ತಮ್ಮ ಸಾಧನೆ ತೃಪ್ತಿ ತಂದಿದೆ. ಈವರೆಗೆ ಮಾಡಿರುವ ಚಿತ್ರಗಳಲ್ಲಿ ಯಾವುದು ಖುಷಿ ನೀಡಿದ್ದು ಎಂದು ಕೇಳಿದರೆ, ಎಲ್ಲವೂ ಎಂದು ಹೇಳಿ ನಗುತ್ತಾರೆ ಈ ನೀಳ ಸುಂದರಿ.ಇದೀಗ ಡೇವಿಡ್ ಧವನ್ ನಿರ್ದೇಶನದ ಹಾಸ್ಯ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆಯೆಂದು ಹೇಳಿಕೊಂಡಿದ್ದಾರೆ.ಬಾಲಿವುಡ್ ಚಿತ್ರದ ಹಾಡು ಹಾಗೂ ನೃತ್ಯಗಳೆಂದರೆ ನನಗಿಷ್ಟ. ಆ ಉಡುಗೆ-ತೊಡುಗೆ, ಬಿನ್ನಾಣ, ವಯ್ಯಾರ ಎಲ್ಲವೂ ಇಷ್ಟವಾಗುತ್ತದೆ ಎನ್ನುವ ತಬು, ಅಂಥ ಚಿತ್ರಗಳಿಂದ ದೂರ ಸರಿದಿದ್ದೇಕೆ ಎಂಬ ಪ್ರಶ್ನೆಗೆ ವಿವರಣೆಯನ್ನು ನೀಡುತ್ತಾರೆ.`ಹಿಂದಿ ಚಿತ್ರರಂಗದಲ್ಲಿ ಒಮ್ಮೆ ಒಂದೇ ಥರದ ಪಾತ್ರಗಳನ್ನು ನಿರ್ವಹಿಸಿದರೆ, ಅದೇ ಬಗೆಯ ಪಾತ್ರಗಳು ಕಟ್ಟಿಟ್ಟ ಬುತ್ತಿಯಾಗುತ್ತವೆ. ಒಂದೇ ಬಗೆಯ ಪಾತ್ರಗಳನ್ನು ನಾನು ನಿರ್ವಹಿಸಲಾರೆ. ಪ್ರತಿಯೊಂದು ಪಾತ್ರದಿಂದಲೂ ನನಗೇನಾದರೂ ಕಲಿಯಬೇಕು ಎಂಬ ಹುಮ್ಮಸ್ಸಿದೆ. ಅಂಥ ಪಾತ್ರಗಳನ್ನು ಮಾತ್ರ ನಾನು ಆಯ್ಕೆ ಮಾಡಿಕೊಂಡೆ.

 

ನಾನ್ಯಾವತ್ತೂ ನಟನೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಸಿನಿಮಾ ರಂಗಕ್ಕೆ ಬಂದೆ. ಗುಲ್ಜಾರ್, ಆರ್.ಕೆ ಬಾಲ್ಕಿ, ಡೇವಿಡ್ ಧವನ್ ಮುಂತಾದವರೊಂದಿಗೆ ನಟಿಸುವ ಅವಕಾಶ ದೊರೆಯಿತು. ಇದೆಲ್ಲವೂ ನನ್ನ ಮಟ್ಟಿಗೆ ದೊಡ್ಡ ಸಾಧನೆಯೆಂದೇ ಎನಿಸುತ್ತದೆ~ ಎಂದೂ ತಬು ಹೇಳಿದ್ದಾರೆ.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.