ಶುಕ್ರವಾರ, ನವೆಂಬರ್ 22, 2019
22 °C

`ಮಸಾಲೆ' ರಹಿತ ಮಹಿಳೆ!

Published:
Updated:
`ಮಸಾಲೆ' ರಹಿತ ಮಹಿಳೆ!

ಮಹಿಳೆಗೂ, ಮಸಾಲೆಗೂ ಅವಿನಾಭಾವ ಸಂಬಂಧ. ಮಹಿಳೆ ಅಡುಗೆ ಮನೆಗೆ `ಮಹಾರಾಣಿ' ಆದರೆ ಮಸಾಲೆ ಅಡುಗೆಯ `ಮಹಾರಾಜ' ಇದ್ದಂತೆ. ಅಡುಗೆ ಮನೆಯಲ್ಲಿ ಮಹಿಳೆಯರು ಕಾರುಬಾರು ನಡೆಸಿದರೆ, ಅಡುಗೆಯಲ್ಲಿ ಮಸಾಲೆಯದೇ ಜೋರು. ಹೀಗೆ ಮಹಿಳೆಯ ಕಾಯಕದಲ್ಲಿ ಮಸಾಲೆ ಬಹು ಮುಖ್ಯ ಪಾತ್ರ ವಹಿಸುತ್ತದೆ.`ಹುಡುಗಿ ಎಂದರೆ ಸಕ್ಕರೆಯ ಬೊಂಬೆ' `ಹುಡುಗಿ ಎಂದರೆ ದೇವರು ರುಚಿಕಟ್ಟಾದ ಮಸಾಲೆ ಪದಾರ್ಥಗಳಿಂದ ಮಾಡಿದ ಜೀವ' ಎನ್ನುತ್ತದೆ ಒಂದು ಶಿಶುಗೀತೆ. ಹಾಗಿದ್ದರೆ ಅಂಗನೆಯ ಅಂಗಗಳಲ್ಲಿ ನಿಜವಾಗಲೂ ಏನೇನು ಅಡಗಿರಬಹುದು? ಮಸಾಲೆಯಂತಹ ರುಚಿಕಟ್ಟಾದ ಅಂಶಗಳು, ಅದರೊಟ್ಟಿಗೆ ಅಧಿಕ ಸಕ್ಕರೆಯ ಅಂಶವೂ ಸೇರಿರಬಹುದು ಎಂದುಕೊಳ್ಳುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಊಹೆ ತಪ್ಪು. ಮಹಿಳೆಯ ಕಾಯದಲ್ಲಿ ಲವಲೇಶವೂ ಮಸಾಲೆಯ ಅಂಶ ಇಲ್ಲ ಎನ್ನುತ್ತದೆ ವೈದ್ಯಕೀಯ ಸಂಶೋಧನೆ.ಇಲ್ಲಿದೆ ವಿಜ್ಞಾನಿಗಳು ಹೊರಗೆಡವಿರುವ ಸತ್ಯ


  • 2 ಈಜುಕೊಳಗಳನ್ನು ಸೋಂಕು ರಹಿತವನ್ನಾಗಿಸಲು ಬೇಕಾಗುವಷ್ಟು ಕ್ಲೋರಿನ್ ಅಂಶ

  • 85 ಪೌಂಡ್ ಆಮ್ಲಜನಕ

  • 2 ಔನ್ಸ್ ಉಪ್ಪು

  • 50 ಕ್ವಾರ್ಟ್ಸ್ (56.25 ಲೀಟರ್) ನೀರು

  • 3 ಪೌಂಡ್ ಕ್ಯಾಲ್ಷಿಯಂ

  • 25 ಬೆಂಕಿಕಡ್ಡಿಗಳ ತುದಿಗೆ ಅಂಟಿಸಲು ಬೇಕಾದ ರಂಜಕ

  • 10 ಬಾರ್ ಸೋಪ್‌ಗಳನ್ನು ತಯಾರಿಸಲು ಸಾಕಾಗುವಷ್ಟು ಕೊಬ್ಬು

  • 2 ಅಂಗುಲದ ಮೊಳೆ ತಯಾರಿಸಬಹುದಾದಷ್ಟು ಕಬ್ಬಿಣದ ಅಂಶ

  • ಮನೆಯ ನಾಯಿಯನ್ನು ನೊಣಗಳ ಕಾಟದಿಂದ ಪಾರುಮಾಡಲು ಬೇಕಾದಷ್ಟು ಗಂಧಕ

  • ನಿಮ್ಮ ಹೃದಯವನ್ನು ಕರಗಿಸಲು ಬೇಕಾಗುವಷ್ಟು ಗ್ಲಿಸರಿನ್

ಇಷ್ಟೆಲ್ಲ ಇದ್ದೂ ಒಂದೇ ಒಂದು ಸಾಸಿವೆ ಕಾಳಿನಷ್ಟೂ ಮಸಾಲೆ ಅಂಶ ಮಹಿಳೆಯ ದೇಹದಲ್ಲಿ ಸಿಕ್ಕುವುದಿಲ್ಲ. ಆದ್ದರಿಂದಲೇ ಮಹಿಳೆಯ `ಕಾಯಕ' ಮಸಾಲೆ ಸಹಿತವಾದರೆ, ಆಕೆಯ `ಕಾಯ' ಮಾತ್ರ ಮಸಾಲೆ ರಹಿತ ಎನ್ನಬಹುದು.

 

ಪ್ರತಿಕ್ರಿಯಿಸಿ (+)