ಗುರುವಾರ , ಜೂನ್ 24, 2021
23 °C

ಮಸಿ ಅಳಿಸಿ ಮತ್ತೆ ಮತ ಹಾಕಿ: ಶರದ್‌ ಪವಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠಾಣೆ (ಐಎಎನ್‌ಎಸ್‌): ಲೋಕಸಭೆ ಚುನಾವಣೆ­ಯಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಮತ ಹಾಕಿ ಎಂಬ ವಿವಾದಾತ್ಮಕ ಸಂದೇಶವನ್ನು ಹಮಾಲಿ­ಗಳಿಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಭಾನುವಾರ ನೀಡಿದ್ದಾರೆ.ನವಿಮುಂಬೈಯಲ್ಲಿ ನಡೆದ ಹಮಾಲಿ­ಗಳ ಸಮಾವೇಶದಲ್ಲಿ ಮಾತನಾಡಿದ ಪವಾರ್‌, ಮುಂಬೈ ಮತ್ತು ಸತಾರಾಗಳಲ್ಲಿ ಈ ಬಾರಿ ಬೇರೆ ಬೇರೆ ದಿನಾಂಕಗಳಂದು ಚುನಾವಣೆ ನಡೆಯಲಿದೆ.ಏಪ್ರಿಲ್‌ 17ರಂದು ಸತಾರಾ­ದಲ್ಲಿ ಮತದಾನ ನಡೆಯಲಿದೆ. ಹಾಗಾಗಿ ಹಮಾಲಿಗಳು ಮೊದಲು ಸತಾರಾದಲ್ಲಿರುವ ತಮ್ಮ ಹಳ್ಳಿಗಳಿಗೆ ಹೋಗಿ ಮತ ಚಲಾಯಿಸಬೇಕು. ಹಮಾಲಿ­ಗಳಲ್ಲಿ ಹೆಚ್ಚಿನವರು ಸತಾರಾ ಜಿಲ್ಲೆಗಳಿಂದ ಬಂದವರು.ನಂತರ ಮುಂಬೈಗೆ ಮರಳಿ ಏಪ್ರಿಲ್‌ 24ರಂದು ನಡೆಯಲಿರುವ ಮತದಾನದಲ್ಲಿಯೂ ಮತ ಚಲಾಯಿಸಬೇಕು ಎಂದು ಪವಾರ್‌ ಹೇಳಿದರು.ಮತದಾನ ಮಾಡಿದ ನಂತರ ಬೆರಳಿಗೆ ಹಾಕುವ ಮಸಿ ಗುರುತನ್ನು ಅಳಿಸುವುದನ್ನು ಮರೆಯಬೇಡಿ. ಮಸಿ ಇದ್ದು ಎರಡನೇ ಬಾರಿ ಮತದಾನಕ್ಕೆ ಹೋದರೆ ಸಮಸ್ಯೆ ಎದುರಾದೀತು ಎಂದೂ  ಪವಾರ್‌ ಎಚ್ಚರಿಕೆ ನೀಡಿದರು.2009ರ ಚುನಾವಣೆಯಲ್ಲಿ ಪಶ್ಚಿಮ ಮಹಾ­ರಾಷ್ಟ್ರ ಮತ್ತು ಮುಂಬೈಯಲ್ಲಿ ಒಂದೇ ದಿನ ಮತದಾನ ನಡೆಯಿತು. ಈ ಬಾರಿ ಬೇರೆ ಬೇರೆ ದಿನ ಮತದಾನ ನಡೆಯುವುದರಿಂದ ಕಳೆದ ಬಾರಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಿ ಎಂದರು.ಇದು ನಕಲಿ ಮತದಾನಕ್ಕೆ ಪ್ರೇರಣೆಯಾಗಿದ್ದು ಚುನಾವಣಾ ಆಯೋಗ ಕ್ರಮ ಕೈಗೊಳ್ಳ­ಬೇಕು ಎಂದು ಬಿಜೆಪಿ ನಾಯಕ ವಿನೋದ್ ತಾವಡೆ ಆಗ್ರಹಿಸಿದ್ದಾರೆ.ಹೇಳಿಕೆಯು ವಿವಾದದ ಸ್ವರೂಪ ಪಡೆಯುತ್ತಿ­ದ್ದಂತೆಯೇ ತರಾತುರಿಯಲ್ಲಿ ಪತ್ರಿಕಾಗೋಷ್ಠಿ ನಡೆ­ಸಿದ ಪವಾರ್‌, ‘ತಮಾಷೆಯಾಗಿ ಹಾಗೆ ಹೇಳಿದ್ದೆ. ಚುನಾವಣಾ ಕಾನೂನು ಅಥವಾ ನಿಯಮ­ಗಳನ್ನು ಉಲ್ಲಂಘಿಸುವಂತೆ ಕರೆ ನೀಡಿರಲಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.