ಮಸೀದಿಯೊಳಗೆ ಬಾಂಬ್ ಸ್ಫೋಟ- 5 ಜನರ ಸಾವು

ಬುಧವಾರ, ಜೂಲೈ 17, 2019
24 °C

ಮಸೀದಿಯೊಳಗೆ ಬಾಂಬ್ ಸ್ಫೋಟ- 5 ಜನರ ಸಾವು

Published:
Updated:

ಅಬುಜಾ (ಪಿಟಿಐ): ಉತ್ತರ ನೈಜೀರಿ ಯಾದ ಮೈಡುಗುರಿ ಪಟ್ಟಣದಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಸೀದಿಯೊಳಗೆ ನುಗ್ಗಿದ ಬಾಲಕನೊಬ್ಬ ಮೈಗೆ ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿದ್ದರಿಂದ ಐದು ಜನರು ಸತ್ತಿದ್ದಾರೆ ಮತ್ತು ಆರು ಜನರು ಗಾಯಗೊಂಡಿದ್ದಾರೆ.ಧಾರ್ಮಿಕ ಮುಖಂಡರನ್ನು ಗುರಿಯಾಗಿಟ್ಟುಕೊಂಡು 15 ವರ್ಷದ ಬಾಲಕ  ಬಾಂಬ್ ಸ್ಫೋಟಿಸಿದ್ದಾನೆ. ಆದರೆ ಬಾಗಿಲಿನಲ್ಲಿದ್ದ ಭದ್ರತಾ ಸಿಬ್ಬಂದಿ ಬಾಲಕನನ್ನು ತಡೆದಿದ್ದರಿಂದ ಅಲ್ಲಿಯೇ ಬಾಂಬ್ ಸ್ಫೋಟಗೊಂಡಿದೆ.ಮಸೀದಿಯ ಒಳಗೆ ಮೊದಲ ಸಾಲಿನಲ್ಲಿ ಇದ್ದ ಉಪ ಗೌರ‌್ನರ್ ಜೆನ್ನಾ ಉಮರ್ ಮುಸ್ತಫಾ ಮತ್ತು ಇತರ ಧಾರ್ಮಿಕ ಮುಖಂಡರಿಗೆ ತೊಂದರೆಯಾಗಿಲ್ಲ ಎಂದು ಮೂಲಗಳು ಹೇಳಿವೆ.ಈ ಘಟನೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಉಪ ಗೌರ‌್ನರ್ ಅವರು, `ದೇವರ ದಯೆಯಿಂದ ನನಗೆ ಏನೂ ಆಗಿಲ್ಲ, ಬಟ್ಟೆಯ ಮೇಲೆ ರಕ್ತದ ಕಲೆ ಕಂಡು ಕಾಲಿಗೆ ಏಟಾಗಿದೆ ಎಂದು ಭಾವಿಸಿದ್ದೆ, ಆದರೆ ಏನೂ ಆಗಿಲ್ಲ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry