ಮಸೀದಿ ಮೇಲೆ ದಾಳಿ: ಮೃತರ ಸಂಖ್ಯೆ 36ಕ್ಕೆ

7

ಮಸೀದಿ ಮೇಲೆ ದಾಳಿ: ಮೃತರ ಸಂಖ್ಯೆ 36ಕ್ಕೆ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ವಾಯವ್ಯಕ್ಕಿರುವ ಕುರ‌್ರಂ ಬುಡಕಟ್ಟು ವಲಯದ ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿದೆ.



ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಸಂಘಟನೆಯ ಗುಂಪೊಂದು ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ದುಷ್ಕೃತ್ಯ ಪ್ರತಿಭಟಿಸಿ ಪರಾಚಿನಾರ್ ಪಟ್ಟಣದಲ್ಲಿ ಅಂಗಡಿ, ಮುಂಗಟ್ಟು, ಮಾರುಕಟ್ಟೆಗಳನ್ನು ಶನಿವಾರ ಮುಚ್ಚಲಾಗಿತ್ತು.



ಘಟನೆ ನಡೆದ ವೇಳೆ 26 ಜನರು ಮೃತಪಟ್ಟಿದ್ದರು. ಗಾಯಗೊಂಡು ಆಸ್ಪತ್ರೆ ಸೇರಿದ್ದವರಲ್ಲಿ ಮತ್ತೆ 10 ಜನರು ಶುಕ್ರವಾರ ತಡ ರಾತ್ರಿ  ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry