ಮಂಗಳವಾರ, ಜನವರಿ 21, 2020
29 °C

ಮಸೂದೆ ತಿದ್ದಿದ ಅಧಿಕಾರಿಗಳು: ಹಕ್ಕುಚ್ಯುತಿ ಸಮಿತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ಸೌಧ (ಬೆಳಗಾವಿ): ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಯನ್ನು ಪರಿ ಷ್ಕರಿಸಿ ಗೆಜೆಟ್‌ನಲ್ಲಿ ಪ್ರಕಟಿಸಿದ ವಿಷಯ ವನ್ನು ವಿಧಾನಪರಿಷತ್ ಸಭಾಪತಿ ಬುಧ ವಾರ ಹಕ್ಕುಚ್ಯುತಿ ಸಮಿತಿಗೆ ವಹಿಸಿದರು. ಶೂನ್ಯವೇಳೆಯ ನಂತರ ಮುಖ್ಯ ಮಂತ್ರಿಗಳು ಧನವಿನಿಯೋಗ ಲೆಕ್ಕಗಳನ್ನು ಮಂಡಿಸಲು ಎದ್ದು ನಿಂತಾಗ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಿ.ಜೆ. ಪುಟ್ಟ ಸ್ವಾಮಿ ಅವರು, ಅಧಿಕಾರಿಗಳು ಮಸೂದೆಯನ್ನು ಪರಿಷ್ಕರಿಸಿದ ವಿಷಯ ವನ್ನು ಸದನದ ಗಮನಕ್ಕೆ ತಂದರು.ಕಳೆದ ಅಧಿವೇಶನದಲ್ಲಿ ಉಭಯ ಸದನಗಳು ಅಂಗೀಕಾರ ನೀಡಿದ ಮಸೂದೆ ಯನ್ನು ತಿದ್ದಿರುವುದು ಗಂಭೀರ ಲೋಪ ವಾಗಿದ್ದು ಇದನ್ನು ಹಕ್ಕುಚ್ಯುತಿ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)