ಶುಕ್ರವಾರ, ಏಪ್ರಿಲ್ 16, 2021
31 °C

ಮಸ್ಕಿ: ಅದ್ದೂರಿ ತುಳಜಾಭವಾನಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ತುಳಜಾಭವಾನಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತುಳಜಾಭವಾನಿಯ ಭಾವಚಿತ್ರದ ಮೆರವಣಿಗೆಯೊಂದಿಗೆ ಬುಧವಾರ ನೆರವೇರಿತು.ಸುಮಂಗಲೆಯರು ಪೂರ್ಣಕುಂಭ ಹಾಗೂ ಕಳಸ ಕನ್ನಡಿಯೊಂದಿಗೆ ಪಾಲ್ಗೊಂಡಿದ್ದರು.ಬೆಳಿಗ್ಗೆ ಗಂಗಾಸ್ಥಳದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಆರಂಭವಾಯಿತು.ಸಂಡೂರಿನ ತಾರಾನಗರದ ಎಚ್.ಎಂ. ಚಂದ್ರಶೇಖರಯ್ಯಸ್ವಾಮಿ, ಗಂಗಾವತಿಯ ಬಸವಯ್ಯಶಾಸ್ತ್ರಿಗಳ ತಂಡದಿಂದ ವೀರಭದ್ರ ಕುಣಿತದ ಜೊತೆಗೆ ಜಾನಪದ ಹಾಡುಗಳು, ನೃತ್ಯಗಳು ನಡೆದವು. ಹಿರೇಜಂತಗಲ್ ಗ್ರಾಮದ ವೀರಯ್ಯಸ್ವಾಮಿ ತಾಸಿಯಾ ಮೇಳದ ಜೊತೆಗೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.ಅಶೋಕ ವೃತ್ತ, ಅಗಸಿ, ದೈವದ ಕಟ್ಟೆ ಮೂಲಕ ಕಣವಿ ಆಂಜನೇಯ ದೇವಸ್ಥಾನದ ಬಳಿ ಇರುವ ತುಳಜಾಭವಾನಿ ದೇವಸ್ಥಾನಕ್ಕೆ ಪೂರ್ಣಕುಂಭದ ಮೆರವಣಿಗೆ ಆಗಮಿಸಿತು.ನಂತರ ಗಂಗಾಸ್ಥಳದಿಂದ ಕುಂಭದಲ್ಲಿ ತರಲಾದ ಜಲದಿಂದ ತುಳಜಾಭವಾನಿ ಮೂರ್ತಿಗೆ ಅಭಿಷೇಕ ನಡೆಸಲಾಯಿತು, ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ರಜಪೂತ ಸಮಾಜದ ಮುಖಂಡರಾದ ರಾಮಲಾಲ್ ದೇಶಮುಖ, ಭರತಸಿಂಗ್ ಕಿಲ್ಲಾ, ಅಶೋಕ ಠಾಕೂರು, ಸುರೇಶ ಠಾಕೂರ, ಭರತದೇಶಮುಖ, ರಾಮಸಿಂಗ್ ಶಿಕ್ಷಕ, ಸುಭಾಸ್‌ಸಿಂಗ್ ಹಜಾರಿ, ಶಿವಕುಮಾರ ದೇಶಮುಖ, ನರಸಿಂಗ್‌ಬಾನು, ಜಗದೀಶ ಚವ್ವಾಣ, ಅಭೀಜಿತ್‌ಸಿಂಗ್, ರಜಪೂತ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.