ಶುಕ್ರವಾರ, ಆಗಸ್ಟ್ 23, 2019
21 °C

ಮಸ್ಕಿ: ಶಾಸಕ ಪಾಟೀಲರಿಂದ ಇಫ್ತಾರ್ ಕೂಟ

Published:
Updated:

ಮಸ್ಕಿ:  ರಂಜಾನ್ ಅಂಗವಾಗಿ ಶಾಸಕ ಪ್ರತಾಪಗೌಡ ಪಾಟೀಲ ಶುಕ್ರವಾರ ಸಂಜೆ ಇಲ್ಲಿನ ಜಾಮಿಯಾ ಮಸೀದಿ ಹತ್ತಿರ ಇಫ್ತಾರ್ ಕೂಟ ಏರ್ಪಡಿಸಿದ್ದರು.ಸಾಮೂಹಿಕ ಪ್ರಾರ್ಥನೆಯ ನಂತರ ನಡೆದ ಭೋಜನ ಕೂಟದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ  ಊಟ ಬಡಿಸುವ ಮೂಲಕ ಇಫ್ತಾರ್‌ಗೆ ಚಾಲನೆ ನೀಡಿದರು. ಮಸ್ಕಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಡಾ. ಶಿವಶರಣಪ್ಪ ಇತ್ಲಿ, ಡಾ. ಬಿ.ಎಚ್. ದಿವಟರ್, ದೊಡ್ಡಪ್ಪ ಕಡಬೂರು, ಬಸವಂತರಾಯ ಕುರಿ, ಪಾಮಯ್ಯ ಮುರಾರಿ, ಸಿದ್ದಣ್ಣ ಹೂವಿನಭಾವಿ, ಶ್ರೀಶೈಲಪ್ಪ ಬ್ಯಾಳಿ, ಮಸ್ಕಿ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ವೀರೇಶ ಸೌದ್ರಿ, ಚಂದ್ರಶೇಖರಪ್ಪ ವಂದ್ಲಿ, ಅಯ್ಯಣ್ಣ ಹೂವಿಭಾವಿ,  ಪ್ರಸನ್ನ ಪಾಟೀಲ, ಪ್ರತಾಪಗೌಡ ಯುವ ಸೇನಾ ಅಧ್ಯಕ್ಷ ರಾಮರಡ್ಡಿಗೌಡ, ಚೇತನ ಪಾಟೀಲ, ಸುರೇಶ ಹರಸೂರು, ಹನುಮಂತಪ್ಪ ವೆಂಕಟಾಪುರ, ಅಬ್ದುಲ್‌ಗನಿ, ಖಾಜಿಸಾಬ್, ಅಬ್ದಲ್ ಅಜೀಜ್, ಬಾಹರ್‌ಹಲಿ, ಖಾಜಾಹುಸೇನ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಮುಸ್ಲಿಂ ಸಮುದಾಯದ ಮುಖಂಡರು ಸನ್ಮಾನಿಸಿದರು.

Post Comments (+)