ಮಹತ್ವದ ನಿರ್ಧಾರ: ಅಮೆರಿಕ ಬಣ್ಣನೆ

7

ಮಹತ್ವದ ನಿರ್ಧಾರ: ಅಮೆರಿಕ ಬಣ್ಣನೆ

Published:
Updated:
ಮಹತ್ವದ ನಿರ್ಧಾರ: ಅಮೆರಿಕ ಬಣ್ಣನೆ

ವಾಷಿಂಗ್ಟನ್ (ಪಿಟಿಐ): ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಪದತ್ಯಾಗ ಮಾಡಿರುವುದನ್ನು ಸ್ವಾಗತಿಸಿರುವ ಅಮೆರಿಕ, ಇದು ಇದೊಂದು ಮಹತ್ವದ ನಿರ್ಧಾರ. ಈಜಿಪ್ಟ್‌ನ ಮುಂದಿನ ಭವಿಷ್ಯವನ್ನು ಆ ದೇಶದವರೇ ನಿಶ್ಚಿಯಸುತ್ತಾರೆ ಎಂದಿದೆ.ಮುಬಾರಕ್ ಅವರು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿರುವುದು ಇಡೀ ಮಧ್ಯಪ್ರಾಚ್ಯದ ರಾಷ್ಟ್ರಗಳ ಇತಿಹಾಸದಲ್ಲೇ ಪ್ರಮುಖ ನಿರ್ಧಾರವಾಗಲಿದೆ ಎಂದು ಅಮೆರಿಕ ತಿಳಿಸಿದೆ.ಇದು ಮುಬಾರಕ್ ಅವರು ಪದತ್ಯಾಗ ಮಾಡಿದ ಮೇಲೆ ಅಮೆರಿಕ ನೀಡುತ್ತಿರುವ ಮೊದಲ ಅಧಿಕೃತ ಪ್ರತಿಕ್ರಿಯೆ ಕೂಡ ಆಗಿದೆ.ಟಿವಿ ವೀಕ್ಷಿಸಿದ ಒಬಾಮ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಹತ್ವದ ಸಭೆಯೊಂದರಲ್ಲಿದ್ದಾಗ ಮುಬಾರಕ್ ಪದತ್ಯಾಗ ನಿರ್ಧಾರದ ಮಾಹಿತಿ ಬಂತು. ಕೂಡಲೇ ಕೈರೊದಲ್ಲಿನ ಬೆಳವಣಿಗೆಯ ಮಾಹಿತಿಗಾಗಿ ಒಬಾಮ ಕೆಲ ನಿಮಿಷಗಳ ಕಾಲ ಟಿವಿ ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry