ಸೋಮವಾರ, ಏಪ್ರಿಲ್ 12, 2021
24 °C

ಮಹತ್ವದ ಪಂದ್ಯಗಳು ಮುಂದಿವೆ

ಗೇಮ್ ಪ್ಲಾನ್ Updated:

ಅಕ್ಷರ ಗಾತ್ರ : | |

ಮುಂದಿನ ವಾರ ನಮ್ಮ ಪಾಲಿಗೆ ಮಹತ್ವದ್ದು. ಇಂಗ್ಲೆಂಡ್ ಮತ್ತು ಆ ಬಳಿಕ ಭಾರತದ ವಿರುದ್ಧದ ಪಂದ್ಯಗಳು ಮುಂದಿವೆ. ಭಾನುವಾರ ಇಂಗ್ಲೆಂಡ್ ಎದುರಿನ ಪಂದ್ಯ ಸವಾಲಿನಿಂದ ಕೂಡಿರಲಿದೆಎಂಬುದು ನನ್ನ ಭಾವನೆ. ಆದರೆ ಎಂದಿನ ಯೋಜನೆಯಂತೆ ಆಡುವುದು ತಂಡದ ಗುರಿ. ವೆಸ್ಟ್ ಇಂಡೀಸ್ ಮತ್ತು ಹಾಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಲಭಿಸಿರುವುದು ಸಂತಸದ ವಿಚಾರ.ಆದರೆ ಎರಡು ಬಲಿಷ್ಠ ತಂಡಗಳ ನಡುವಿನ ಪೈಪೋಟಿ ಯಾವಾಗಲೂ ರೋಚಕತೆಯಿಂದ ಕೂಡಿರುತ್ತದೆ. ಇಂಗ್ಲೆಂಡ್ ಈ ಹಿಂದೆ ಒಂದೆರಡು ಸರಣಿಗಳಲ್ಲಿ ನಮ್ಮನ್ನು ಸೋಲಿಸಿದೆ. ಆದರೆ ಈಗ ನಾವು ಹಿಂದಿಗಿಂತ ಬಲಿಷ್ಠರಾಗಿದ್ದೇವೆ. ಭಾನುವಾರ ಹೊಸ ದಿನ ಎಂಬ ಅಂಶ ಮನಸ್ಸಿನಲ್ಲಿಟ್ಟುಕೊಂಡು ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದ್ದೇವೆ. ಈ ಪಂದ್ಯ ಹಗಲು ನಡೆಯಲಿದೆ. ದೆಹಲಿಯಲ್ಲೂ ನಾವು ಹಗಲು ನಡೆದ ಪಂದ್ಯದಲ್ಲಿ ಆಡಿದ್ದೆವು. ಆದರೆ ದೆಹಲಿ ಮತ್ತು ಚೆನ್ನೈ ಹವಾಮಾನದ ನಡುವೆ ಭಾರಿ ವ್ಯತ್ಯಾಸ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.