ಮಹದೇವಯ್ಯ ನೂತನ ಡಿಸಿಪಿ

ಗುರುವಾರ , ಜೂಲೈ 18, 2019
22 °C

ಮಹದೇವಯ್ಯ ನೂತನ ಡಿಸಿಪಿ

Published:
Updated:

ಮೈಸೂರು: ನಗರದ ಡಿಸಿಪಿಯಾಗಿ (ಸಂಚಾರ ಮತ್ತು ಅಪರಾಧ) ಎಂ.ಎಂ. ಮಹದೇವಯ್ಯ ಅವರು ನಿರ್ಗಮಿತ ಡಿಸಿಪಿ ಕೆ.ಪಿ. ಭೀಮಯ್ಯ ಅವರಿಂದ ಶುಕ್ರವಾರ ಅಧಿಕಾರ ಸ್ವೀಕರಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, `ಮೈಸೂರು ನಗರದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಗರದಲ್ಲಿ ಹೊಸ ಬಡಾವಣೆಗಳು ಬೆಳೆಯುತ್ತಿದ್ದು ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಆದ್ದರಿಂದ, ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು' ಎಂದು ತಿಳಿಸಿದರು.`ಬೈಕ್ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣ (ಹೆಲ್ಮೆಟ್) ಧರಿಸಬೇಕು. ಇಲ್ಲದಿದ್ದರೆ ದಂಡದ ಜತೆ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry