ಶನಿವಾರ, ಆಗಸ್ಟ್ 24, 2019
28 °C

ಮಹದೇಶ್ವರ ದೇಗುಲದಲ್ಲಿ ವಿಶೇಷ ಪೂಜೆ

Published:
Updated:

ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಗ್ರಾಮದ ದೊಡ್ಡ ಆಲದ ಮರಗಳ ಕೆಳಗೆ ಇರುವ ಐತಿಹಾಸಿಕ ಹಿನ್ನೆಲೆ   ಉಳ್ಳ ಮಹದೇಶ್ವರ ದೇಗುಲದಲ್ಲಿ ಮಂಗಳವಾರ ಭೀಮನ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ  ನಡೆಯಲಿದೆ.

ನೂರಾರು ವರ್ಷಗಳ ಇತಿಹಾಸವಿರುವ ಈ ದೇಗುದಲ್ಲಿ ಕಳೆದ 13 ವರ್ಷಗಳಿಂದ ಪ್ರತಿವರ್ಷ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡುವ ವಾಡಿಕೆ ಇದೆ.

ಈ ಬಾರಿ 14 ನೇ ವರ್ಷದ ನಿಮಿತ್ತ ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದ್ದು, 50 ಕ್ವಿಂಟಲ್‌ಗೂ ಅಧಿಕ ಅಕ್ಕಿಯನ್ನು ಬಳಸಿ ಅನ್ನ ಸಂತರ್ಪಣೆ ಮಾಡಲು ಸಿದ್ಧತೆಗಳು ನಡೆದಿವೆ.ಮಲೆ ಮಹದೇಶ್ವರರು ಬೆಟ್ಟಕ್ಕೆ ತೆರಳುವ ದಾರಿಯಲ್ಲಿ ಈ ಸ್ಥಳದಲ್ಲಿ ತಂಗಿದ್ದರು ಎಂಬ ಪ್ರತೀತಿ ಇದೆ.

ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತ ಸಾವಿರಾರು ಭಕ್ತರು ಪ್ರತಿ ವರ್ಷ ನಡೆಯುವ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಥದ ಸೇವೆ ಮಾಡುತ್ತಾರೆ. ಇದರ ನಿಮಿತ್ತ ಬೆಳಿಗ್ಗೆ 6 ಗಂಟೆಯಿಂದ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ    ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

Post Comments (+)