ಶನಿವಾರ, ಆಗಸ್ಟ್ 24, 2019
28 °C

ಮಹಮದ್ ರಫಿ 33ನೇ ಪುಣ್ಯ ಸ್ಮರಣೆ

Published:
Updated:

ಹುಬ್ಬಳ್ಳಿ: ದೇಶ ಕಂಡ ಅದ್ಭುತ ಗಾಯಕ, ಸಂಗೀತದ ಬಾದ್‌ಶಾ ಮಹ್ಮದ್ ರಫಿ ಅವರ 33ನೇ ಪುಣ್ಯ ಸ್ಮರಣೆ ಅಂಗವಾಗಿ, ಜೆ.ಕೆ. ಕಾಟ್ಕ ರ್ಸ್‌ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಬ್ಯೂರೋ ಸಂಸ್ಥೆ ರಫಿ  ಗೀತೆಗಳ ದೃಶ್ಯ-ಶ್ರವ್ಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು.ನಗರದ ಗೋಕುಲ ರಸ್ತೆಯಲ್ಲಿರುವ ಕಾಟ್ಕರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಲ್ಪನಾ ವಾಲೆ, ಜೆ.ಕೆ. ಕಾಟ್ಕರ್ ಹಾಗೂ ರಫಿ ಅಭಿ ಮಾನಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ರಫಿಯವರ `ಓ ದೂರ್ ಕೆ ಮುಸಾಫಿರ್' ಗೀತೆಯ ಪ್ರದರ್ಶನ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾ ಯಿತು. ನಂತರ `ದಿಲ್ ಏಕ್   ಮಂದಿರ್' ಚಿತ್ರದ ಯಾದ್ ನ ಜಾಯೆ, ದೀದಾರ್ ಚಿತ್ರದ `ಮೇರಿ ಕಹಾನಿ', ಸೆಹ್ರಾ ಚಿತ್ರದ `ತಖದಿರ್ ಕಾ ಫಸಾನಾ' ಗೀತೆಗಳು ಕೇಳುಗರನ್ನು ಭಾವಲೋಕಕ್ಕೆ ಕರೆದೊಯ್ದವು. ರಫಿಯವರು ತಮ್ಮ 35 ವರ್ಷಗಳ ಅವಧಿಯಲ್ಲಿ ಹಾಡಿದ ಆಯ್ದ ಸುಮಧುರ ಗೀತೆಗಳನ್ನು ಪ್ರದರ್ಶಿಸಲಾಯಿತು. ರಫಿ ಕಂಠಸಿರಿಯ ವಿರಹ, ಶೃಂಗಾರ, ದೇಶಭಕ್ತಿ ಗೀತೆಗಳು, ಕವ್ವಾಲಿಯಿಂದ ಗಝಲ್‌ವರೆಗಿನ ಗೀತೆ ಗಳು ಸಂಗೀತ ಪ್ರಿಯರನ್ನು ರಂಜಿಸಿದವು.ಕಾರ್ಯಕ್ರಮದ ನಡುವೆ ರೈಲ್ವೆ ಉದ್ಯೋಗಿ ಪಾಂಡು ಪರಚಂಡೆ ಯವರು, ಅಟಲ್ ಬಿಹಾರಿ ವಾಜ ಪೇಯಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಹಿಂದಿ ನಟರ ಧ್ವನಿ ಅನುಕರಣೆ ಮಾಡಿ, ಹಾಸ್ಯದ ತುಣಕುಗಳನ್ನು ಹೇಳಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ರಾಜಶೇಖರ ಟುಂಗಳಿ ವಂದಿಸಿದರು. ಜೆ.ಕೆ. ಕಾಟ್ಕರ್ ನಿರೂಪಿಸಿದರು.

Post Comments (+)