ಮಂಗಳವಾರ, ನವೆಂಬರ್ 12, 2019
28 °C

ಮಹಮ್ಮಡನ್‌ಗೆ ಗೆಲುವು

Published:
Updated:

ಬೆಂಗಳೂರು: ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ್ದ ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್‌ನ ಅಂತಿಮ ಘಟ್ಟದ ಪಂದ್ಯದಲ್ಲಿ ಬುಧವಾರ 2-1ಗೋಲುಗಳಿಂದ ಲ್ಯಾಂಗ್‌ಸ್ನಿಂಗ್ ಕ್ಲಬ್ ಎದುರು ಗೆಲುವು ಸಾಧಿಸಿತು. ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಕೋಲ್ಕತ್ತದ ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಪಡೆದ ಮೊದಲ ಗೆಲುವು ಇದಾಗಿದೆ. ಎರಡನೇ ಪಂದ್ಯವನ್ನಾಡುತ್ತಿರುವ ಈ ತಂಡ ತನ್ನ ಪ್ರಥಮ ಪಂದ್ಯದಲ್ಲಿ ಭವಾನಿಪುರೆ ಎದುರು ಗೋಲು ರಹಿತವಾಗಿ ಡ್ರಾ ಸಾಧಿಸಿತ್ತು.ವಿಜಯಿ ತಂಡದ ಯೂನಿಸ್ ಬಾಲ್ತಾವೆ 52ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಚಾರ್ಲೆಸ್ ಡಿ. ಪೆನಾಲ್ಟಿ ಕಾರ್ನರ್ ಮೂಲಕ 58ನೇ ನಿಮಿಷದಲ್ಲಿ ಎರಡನೇ ಗೋಲು ತಂದಿತ್ತರು. ಗುರುವಾರ ವಿಶ್ರಾಂತಿ ದಿನವಾದ ಕಾರಣ ಪಂದ್ಯಗಳು ನಡೆಯುವುದಿಲ್ಲ.

ಪ್ರತಿಕ್ರಿಯಿಸಿ (+)