ಮಂಗಳವಾರ, ನವೆಂಬರ್ 12, 2019
28 °C

ಮಹಮ್ಮಡನ್‌ಗೆ ಗೆಲುವು

Published:
Updated:
ಮಹಮ್ಮಡನ್‌ಗೆ ಗೆಲುವು

ಬೆಂಗಳೂರು: ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ-ಲೀಗ್ ಫುಟ್‌ಬಾಲ್ ಎರಡನೇ ಡಿವಿಷನ್ ಲೀಗ್ ಟೂರ್ನಿಯ ಪಂದ್ಯದಲ್ಲಿ 2-0 ಗೋಲುಗಳಿಂದ ಮುಂಬೈ ಟೈಗರ್ಸ್ ವಿರುದ್ಧ ಜಯ ಸಾಧಿಸಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚಾರ್ಲ್ಸ್ ದಿಸಾ (83ನೇ ನಿಮಿಷ) ಮತ್ತು ಆಲ್ಫ್ರೆಡ್ ಜೆ ಜರ್ಯನ್ (90+4) ಗೋಲು ಗಳಿಸಿ ಮಹಮ್ಮಡನ್ ತಂಡದ ಗೆಲುವಿಗೆ ಕಾರಣರಾದರು.ಈ ಗೆಲುವಿನ ಮೂಲಕ ಕೋಲ್ಕತ್ತದ ತಂಡ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತಲ್ಲದೆ, ಪ್ರಧಾನ ಹಂತಕ್ಕೆ ಬಡ್ತಿ ಪಡೆಯುವ ಕನಸಿಗೆ ಹೆಚ್ಚಿನ ಬಲ ನೀಡಿತು. ಎಂಟು ಪಂದ್ಯಗಳನ್ನು ಆಡಿರುವ ಮಹಮ್ಮಡನ್ ತಂಡದ ಬಳಿಕ ಈಗ 17 ಪಾಯಿಂಟ್‌ಗಳಿವೆ. ಸತತ ಮೂರನೇ ಸೋಲು ಅನುಭವಿಸಿದ ಟೈಗರ್ಸ್ ಎಂಟು ಪಂದ್ಯಗಳಿಂದ ಒಂಬತ್ತು ಪಾಯಿಂಟ್ ಹೊಂದಿದೆ.ಭವಾನಿಪುರ್ ತಂಡಕ್ಕೆ ಗೆಲುವು: ದಿನದ ಮೊದಲ ಪಂದ್ಯದಲ್ಲಿ ಭವಾನಿಪುರ್ ಫುಟ್‌ಬಾಲ್ ಕ್ಲಬ್ ತಂಡ 4-1 ಗೋಲುಗಳಿಂದ ಸದರ್ನ್ ಸಮಿತಿ ವಿರುದ್ಧ ಜಯ ಸಾಧಿಸಿತು.ಮೂರು ಗೋಲುಗಳನ್ನು ಗಳಿಸಿದ ಹಡ್ಸನ್ ಲಿಮಾ ಸಿಲ್ವಾ (12, 57 ಮತ್ತು 74ನೇ ನಿಮಿಷ) ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇನ್ನೊಂದು ಗೋಲನ್ನು ಜೋಸ್ ಬರೆಟೊ 14ನೇ ನಿಮಿಷದಲ್ಲಿ ಗಳಿಸಿದರು.ಸದರ್ನ್ ಸಮಿತಿ ತಂಡದ ಏಕೈಕ ಗೋಲನ್ನು ಬಸಂತ್ ಸಿಂಗ್ (63ನೇ ನಿ.) ತಂದಿತ್ತರು. ಈ ಗೆಲುವಿನ ಮೂಲಕ ಭವಾನಿಪುರ್ ತಂಡ 13 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿತು.ಇಂದು (ಸೋಮವಾರ) ಮುಕ್ತಾಯಗೊಳ್ಳಬೇಕಿದ್ದ ಪಂದ್ಯಗಳನ್ನು ವಿಸ್ತರಿಸಲಾಗಿದ್ದು, ಈ ಟೂರ್ನಿ ಏಪ್ರಿಲ್ 28ರ ವರೆಗೆ ನಡೆಯಲಿದೆಸೋಮವಾರ ನಡೆಯುವ ಪಂದ್ಯದಲ್ಲಿ (ಮಧ್ಯಾಹ್ನ 2.00 ಗಂಟೆಗೆ ಆರಂಭ) ಲ್ಯಾಂಗ್‌ಸ್ನಿಂಗ್ ಎಫ್‌ಸಿ ಮತ್ತು          ರಂಗ್‌ದಜೀತ್ ಯುನೈಟೆಡ್ ತಂಡಗಳು ಪರಸ್ಪರ ಎದುರಾಗಲಿವೆ.

ಪ್ರತಿಕ್ರಿಯಿಸಿ (+)