ಗುರುವಾರ , ನವೆಂಬರ್ 14, 2019
18 °C
ಐ ಲೀಗ್ ಫುಟ್‌ಬಾಲ್ ಎರಡನೇ ಡಿವಿಷನ್

ಮಹಮ್ಮಡನ್‌ಗೆ ಜಯ

Published:
Updated:
ಮಹಮ್ಮಡನ್‌ಗೆ ಜಯ

ಬೆಂಗಳೂರು: ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ  ಡಿವಿಷನ್‌ನ ಗುರುವಾರದ ಪಂದ್ಯದಲ್ಲಿ 1-0 ಗೋಲುಗಳಿಂದ ಸದರ್ನ್ ಸಮಿತಿ ಎದುರು ಗೆಲುವು ಸಾಧಿಸಿತು.ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತದ ಮಹಮ್ಮಡನ್ ತಂಡದ ಚಾರ್ಲೆಸ್ ಜೇಶಿಹ್ 35ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.ಲ್ಯಾಂಗ್ ಸ್ನಿಂಗ್ ಹಾಗೂ ಭಾವನಿಪುರೆ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 3-3 ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು. ಲ್ಯಾಂಗ್‌ಸ್ನಿಂಗ್ ತಂಡದ ಡೇನಿಯಲ್17ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಸುಟಿಂಗ್ (20ನೇ  ನಿಮಿಷ) ಹಾಗೂ ಜೋಯೆಲ್ (53ನೇ ನಿ.) ತಲಾ ಒಂದು ಗಳಿಸಿದರು.ಲ್ಯಾಂಗ್‌ಸ್ನಿಂಗ್ ತಂಡದ ಹೋರಾಟಕ್ಕೆ ಪ್ರಬಲ ಪ್ರತಿರೋಧ ಒಡ್ಡಿದ ಭಾವನಿಪುರೆ ಸಮಬಲ ಸಾಧಿಸುವಲ್ಲಿ ಯಶ ಕಂಡಿತು. ಈ ತಂಡದ ಹಡ್ಸನ್ 13 ಹಾಗೂ 69ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ದಿಪೆಂಡು (45+1) ಗೋಲು ಗಳಿಸಿದರು.

ಪ್ರತಿಕ್ರಿಯಿಸಿ (+)