ಮಂಗಳವಾರ, ನವೆಂಬರ್ 19, 2019
29 °C

ಮಹಮ್ಮಡನ್ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್‌ನ ಅಂತಿಮ ಘಟ್ಟದ ಶುಕ್ರವಾರದ ಪಂದ್ಯದಲ್ಲಿ 1-0ಗೋಲುಗಳಿಂದ ಸದರ್ನ್ ಸಮಿತಿ ಎದುರು ಗೆಲುವು ಸಾಧಿಸಿತು.ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಅಲ್ಫರ್ ಕೆ. 69ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.ಲ್ಯಾಂಗ್‌ಸ್ನಿಂಗ್ ಹಾಗೂ ಭಾವನಿಪುರೆ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 3-3ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು. 

ಪ್ರತಿಕ್ರಿಯಿಸಿ (+)