ಮಹಾಕುಂಭ ಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜು

7

ಮಹಾಕುಂಭ ಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜು

Published:
Updated:
ಮಹಾಕುಂಭ ಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜು

ಮಂಡ್ಯ: ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಸೇರುವ ಕೆ.ಆರ್‌. ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಸೆ.26 ರಂದು ಶ್ರೀಮಲೆ ಮಹದೇಶ್ವರ ಜಯಂತಿ ಹಾಗೂ ಮಹಾಕುಂಭ ಮೇಳ ಜರುಗಲಿದೆ.ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕುಂಭ ಮೇಳ ನಡೆಸಿರುವ ಕೀರ್ತಿ ಶಿವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ಮೇಳದ ಸಿದ್ಧತೆಗಳನ್ನು ವೀಕ್ಷಿಸಿದ ನಂತರ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲನಾಥ ಸ್ವಾಮೀಜಿ ತಿಳಿಸಿದರು.ಮೂರು ನದಿಗಳು ಸೇರುವ ಇಲ್ಲಿ, ಸೆ.24 ರಂದು ಗಂಗಾ ಪೂಜೆ ಮಾಡಲಾಗುವುದು. ಸೆ.25 ರಂದು ಬೆಳಿಗ್ಗೆ ಕಳಸ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ಪೂರ್ಣಾಹುತಿ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.ಸೋಮನಹಳ್ಳಿಯಿಂದ ಕಲಾಜಾಥ ಹಮ್ಮಿಕೊಳ್ಳಲಾಗಿದ್ದು, ನಂದಿಧ್ವಜ ಪೂಜೆ ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಜಯಂತಿ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಉದ್ಘಾಟಿಸಲಿದ್ದಾರೆ. ಬಾಲಮಹದೇಶ್ವರ ದೇವಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌್್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್‌್್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮಧ್ಯಾಹ್ನ 3 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ನಾಡೋಜ ಪ್ರೊ.ಹಂಪಾ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮಹದೇಶ್ವರರ ಕಾವ್ಯ ಪರಂಪರೆ ಕುರಿತು ಪ್ರೊ.ಪಿ.ಕೆ. ರಾಜಶೇಖರ್‌, ಮಹದೇಶ್ವರರ ಪವಾಡಗಳು ಮತ್ತು ಅರ್ಥಪೂರ್ಣತೆ ಕುರಿತು ಮಹೇಶ್‌್ ಹರವೆ, ಮಹೆಮಹದೇಶ್ವರರು ಮತ್ತು ಪ್ರಸ್ತುತತೆ ಕುರಿತು ಡಾ. ವೆಂಕಟೇಶ್‌ ಮಾತನಾಡಲಿದ್ದಾರೆ.ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಹೈಕೋರ್ಟ್‌್ ನ್ಯಾಯಾಧೀಶ ಬಿ. ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.ಸೆ.26 ರಂದು ಬೆಳಿಗ್ಗೆ 9.10ಕ್ಕೆ ವೃಷಭ ಲಗ್ನದಲ್ಲಿ ನಾಡಿನ ಸ್ವಾಮೀಜಿಗಳ ನೇತೃತ್ವದಲ್ಲಿ ಕುಂಭಸ್ನಾನ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌್ ವಹಿಸಲಿದ್ದಾರೆ. ಕಾಗಿನೆಲೆ ಸಂಸ್ಥಾನಮಠದ ಶಿವಾನಂದಪುರಿ, ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠ ಭೂಷಣ ಬೊರಸೆ, ಜಿ.ಪಂ. ಸಿಇಒ ಪಿ.ಸಿ. ಜಯಣ್ಣ ಇತರರು ಇರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry