ಭಾನುವಾರ, ಜೂನ್ 20, 2021
21 °C
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಮಹಾತ್ಮನನ್ನು ರೂಪಿಸಿದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಹಿಂಸಾ ವ್ರತದ ವಿಚಾರ­ವಾಗಿ ಗಾಂಧೀಜಿ ಅವರು ತಮ್ಮ ಪತ್ನಿ ಕಸ್ತೂರಬಾ ಅವರನ್ನು ಗುರುಗಳೆಂದು ಭಾವಿಸಿದ್ದರು’ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಹಯೋಗದಲ್ಲಿ ಗುರುವಾರ ಏರ್ಪ­ಡಿಸಿದ್ದ ದಿ.ಸತ್ಯವ್ರತ ಸ್ಮಾರಕ ದತ್ತಿ ಉಪ­ನ್ಯಾಸ ಕಾರ್ಯಕ್ರಮದಲ್ಲಿ ‘ಮಹಾತ್ಮ ಗಾಂಧಿ ಮತ್ತು ಮಹಿಳೆ’ ವಿಷಯ ಕುರಿತು ಅವರು ಮಾತನಾಡಿದರು.

‘ತಮ್ಮ ಪತ್ನಿಯ ಮೇಲೆ ತಾವು ನಡೆಸಿದ ದಬ್ಬಾಳಿಕೆಗೆ ಕಸ್ತೂರಬಾ ಅವರ ಪ್ರತಿಕ್ರಿಯೆಯನ್ನು ಆಧರಿಸಿ ಅಹಿಂಸಾ ವ್ರತವನ್ನು ರೂಪಿಸಿಕೊಂಡೆ ಎಂದು ಗಾಂಧಿ ಹೇಳಿದ್ದಾರೆ’ ಎಂದರು.‘ಗಾಂಧಿ ಮಹಾತ್ಮನಾಗುವಲ್ಲಿ  ಕಸ್ತೂರ­­ಬಾ, ಮನು ಗಾಂಧಿ, ಪ್ರಭಾವತಿ, ಸರೋಜಿನಿ ನಾಯ್ಡು ಮುಂತಾದ ಹಲವು ಮಹಿಳೆಯರ ಪಾತ್ರವಿದೆ. ಬ್ರಹ್ಮಚರ್ಯ ಪಾಲನೆಗೆ ಗಾಂಧೀಜಿ ನಡೆಸಿದ ಪ್ರಯೋಗಗಳು ಮಹತ್ವವಾ­ದುದು. ಸಬರಮತಿ ಆಶ್ರಮದಲ್ಲಿದ್ದ ಹೆಣ್ಣು­ಮಕ್ಕಳನ್ನು ಗಾಂಧಿ ಈ ಪ್ರಯೋಗ­ಗಳಿಗೆ ಒಳಪಡಿಸಿದ್ದರು. ಇದರಿಂದ ಸಾಕಷ್ಟು ಟೀಕೆಗಳು ಎದುರಾದರೂ ಅದನ್ನು ಸಮರ್ಥವಾಗಿ ನಿರ್ವಹಿಸಿದರು’ ಎಂದರು.‘ಹಿಂದೂ ಸಂಪ್ರದಾಯಕ್ಕೆ ಅನುಗುಣ­ವಾಗಿ ಮಹಿಳೆ ಹೇಗಿರಬೇಕು ಮತ್ತು ಏನನ್ನು ಪಾಲಿಸಬಾರದು ಎಂಬುದರ ಬಗೆಗೆ ಗಾಂಧಿಯವರ ನಿಲುವನ್ನು ವಿರೋಧಿಸಿ ಸಾಹಿತಿ ಶಿವರಾಮ ಕಾರಂತರು ಹಲವು ಬಾರಿ ಗಾಂಧಿ­ಯವರಿಗೆ ಪತ್ರ ಬರೆದಿದ್ದಾರೆ. ಹೆಣ್ಣು­ಮಕ್ಕಳ ಬಗೆಗೆ ಗಾಂಧೀಜಿ ಅವರಲ್ಲಿ ಇಂತಹದ್ದೇ ಎಂದು ನಿರ್ಧಿಷ್ಟವಾಗಿ ಹೇಳ­ಲಾಗದ ವಿಶೇಷ ಮಮತೆಯಿತ್ತು’ ಎಂದರು.ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ವೂಡೆ ಪಿ.ಕೃಷ್ಣ ಅವರು, ‘ಅಗ್ರಹಾರ ಕೃಷ್ಣ­ಮೂರ್ತಿಯವರ ವಿಚಾರಗಳಿಗೆ ಪತ್ರ­ಗಳ, ಪುಸ್ತಕಗಳ ದಾಖಲೆಯಿದೆ. ಗಾಂಧಿಯವರ ಸರಳತೆಯನ್ನು ಕಾಪಾ­ಡುವಲ್ಲಿ ನಾವು ಸಾಕಷ್ಟು ಖರ್ಚು ಮಾಡ­­ಬೇಕು ಎಂದು ಸರೋಜಿನಿ ನಾಯ್ಡು ಅವರು ಹಾಸ್ಯ ಮಾಡುತ್ತಿ­ದ್ದರು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.