ಸೋಮವಾರ, ಮಾರ್ಚ್ 1, 2021
31 °C
ಜಿಲ್ಲೆಯ ವಿವಿಧೆಡೆ ಸಡಗರದ 67ನೇ ಗಣರಾಜ್ಯೋತ್ಸವ

ಮಹಾತ್ಮರ ತತ್ವಾದರ್ಶ ಸ್ಫೂರ್ತಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾತ್ಮರ ತತ್ವಾದರ್ಶ ಸ್ಫೂರ್ತಿಯಾಗಲಿ

ಬಂಗಾರಪೇಟೆ: ಗುಣಾತ್ಮಕ ಶಿಕ್ಷಣ, ಉತ್ತಮ ಆರೋಗ್ಯ, ಕೌಶಲ ತರಬೇತಿ ರಾಷ್ಟ್ರದ ಅಭಿವೃದ್ಧಿಗೆ ಅನಿವಾರ್ಯ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಾತ್ಮರ ತತ್ವ, ಆದರ್ಶ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದರು. ತಹಶೀಲ್ದಾರ್‌ ಎಲ್‌.ಸತ್ಯಪ್ರಕಾಶ್‌ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಸಹ ಶಿಕ್ಷಕಿ ಕೆ.ನಿರ್ಮಲಾ ಮುಖ್ಯ ಭಾಷಣ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.ಶಿಕ್ಷಣ ಇಲಾಖೆಯ ಬಸವರಾಜಮ್ಮ, ಡಿ.ರಾಜೇಶ್ವರಿ, ಕಂದಾಯ ಇಲಾಖೆ ಗೋಪಾಲ್‌, ಸಮಾಜ ಸೇವಕರಾದ ಮುಬಾರಕ್‌, ಎಸ್‌.ಎ.ಪಾರ್ಥಸಾರಥಿ, ಸಮಾಜ ಕಲ್ಯಾಣ ಇಲಾಖೆ ಅಂಜಲಿದೇವಿ, ಆಶಾ ಕಾರ್ಯಕರ್ತೆ ಶಬಾನಾ, ಪುರಸಭೆ ನೀರು ಸರಬರಾಜು ವಿಭಾಗದ ರಮೇಶ್, ಸೂಲಿಕುಂಟೆ ಪಂಚಾಯಿತಿಯ ನಾರಾಯಣಪ್ಪ, ಬದರೀನಾಥ್ ಸನ್ಮಾನಿತರು.ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.  ಎಸ್‌ಎಸ್‌ಎಲ್‌ಸಿಯ ಹರ್ಷ, ಆರ್‌.ಪ್ರತಾಪ್‌, ಆರ್‌. ಹಾರಿಕ ಪಿಯುಸಿಯ ಉದಯ ಕುಮಾರ್‌, ಮಣಿಕಂಠ ಹರೀಶ್‌ ಪುರಸ್ಕೃತರು. ವಿವಿಧ ಶಾಲೆ ಮಕ್ಕಳಿಂದ ಪಥ ಸಂಚಲನ, ಸಾಸ್ಕೃತಿಕ ಚಟುವಟಿಕೆ ಮೂಡಿಬಂತು. ಉತ್ತಮ ಪ್ರದರ್ಶನ ನೀಡಿದ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು.ಪಥ ಸಂಚಲನ: ಪ್ರಾಥಮಿಕ ಶಾಲೆ–ಪಟ್ಟಣದ ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆ ಪ್ರಥಮ, ಸರಸ್ವತಿ ವಿದ್ಯಾನಿಕೇತನ ಶಾಲೆ ದ್ವಿತೀಯ, ಗಂಗಮ್ಮನಪಾಳ್ಯ ಸರ್ಕಾರಿ ಶಾಲೆ ತೃತೀಯ. ಪ್ರೌಢಶಾಲೆ ವಿಭಾಗದಲ್ಲಿ– ಸಾಂದೀಪನಿ ಶಾಲೆ ಪ್ರಥಮ, ಆದರ್ಶ ಶಾಲೆ ದ್ವಿತೀಯ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ತೃತೀಯ ಸ್ಥಾನ ಪಡೆಯಿತು.ಸಾಂಸ್ಕೃತಿಕ ಚಟುವಟಿಕೆ: ಪ್ರಾಥಮಿಕ ಶಾಲೆ– ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಸಾಂದೀಪನಿ ಶಾಲೆ ದ್ವಿತೀಯ, ರಾಜೇಶ್ವರಿ ಶಾಲೆ ತೃತೀಯ, ಪ್ರೌಢಶಾಲೆ– ಸ್ವಾಮಿ ವಿವೇಕಾ ನಂದ ಶಾಲೆ ಪ್ರಥಮ, ಸಂದೀಪನಿ ಶಾಲೆ ದ್ವಿತೀಯ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ತೃತೀಯ ಬಹುಮಾನ ಗಳಿಸಿತು.ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಹದೇವಪ್ಪ, ಪುರಸಭೆ ಮುಖ್ಯಾಧಿಕಾರಿ ಶಿವಣ್ಣ, ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಎನ್‌.ವೆಂಕಟಾಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್‌, ಲೋಕೋಪಯೋಗಿ ಎಇಇ ಕಷ್ಣಮೂರ್ತಿ, ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಘಟಕ ಉಪಾಧ್ಯಕ್ಷ ಅಪ್ಪಯ್ಯಗೌಡ,ತಾಲ್ಲೂಕು ಘಟಕ ಅಧ್ಯಕ್ಷ ಆಂಜನೇಯಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಶಗೌಡ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ಸಬ್‌ಇನ್‌ಸ್ಪೆಕ್ಟರ್ ಸಿ.ರವಿ ಕುಮಾರ್‌ ಇತರರು ಉಪಸ್ಥಿತರಿದ್ದರು. ಶಿಕ್ಷಕರ ಸಂಘದ ಆರ್‌.ದೇವರಾಜ್‌ ನಿರೂಪಿಸಿದರು.ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಮಾಲೂರು: ಪಟ್ಟಣದ ಬಾಲಕರ ಸರ್ಕಾರಿ ಆಟದ ಮೈದಾನದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಮಂಜುನಾಥ ಗೌಡ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುರುಷೋತ್ತಮ್, ನಾರಾಯಣಸ್ವಾಮಿ, ವಿ.ರಾಮೋಹನ್ ರಾವ್, ವಿ.ಪ್ರಭಾಕರ್, ಮಹೇಶ್ ಮಾದನಟ್ಟಿ, ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು. ಶಾಸಕ ಕೆ.ಎಸ್.ಮಂಜುನಾಥ್‌ಗೌಡ  4 ಸಾವಿರ ಮಕ್ಕಳಿಗೆ ಸಿಹಿ ಮತ್ತು ತಂಪು ಪಾನಿಯಗಳನ್ನು ವಿತರಿಸಿದರು.ತಹಶೀಲ್ದಾರ್ ನಾಗರಾಜ್ , ಕಾರ್ಯನಿರ್ವಾಹಣಾಧಿಕಾರಿ,  ಸಂಜೀವಪ್ಪ, ಬಿಇಒ ಸುಬ್ರಮಣಿ , ಪುರಸಭಾ ಅಧ್ಯಕ್ಷೆ ಭಾರತಮ್ಮ, ಉಪಾಧ್ಯಕ್ಷೆ ಶ್ರೀವಳ್ಳಿ, ಸಿ.ಒ. ಜಹೀರ್ ಅಭಾಸ್, ಜಿ.ಪಂ. ಸದಸ್ಯರಾದ ರಾಮಸ್ವಾಮಿ ರೆಡ್ಡಿ, ಯಶೋದಮ್ಮ, ತಾ.ಪಂ. ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಎಸ್.ವಿ. ಲೋಕೇಶ್, ಎಪಿಎಂಸಿ ಅಧ್ಯಕ್ಷ ಡಿ.ಎನ್. ರಮೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಚನ್ನರಾಯಪ್ಪ, ಪ್ರಾಂಶುಪಾಲ ಡಾ.ಚಂದ್ರಶೇಖರ್ ನಂಗಲಿ, ರಾಮ ಕೃಷ್ಣಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಟಿ.ಗುಂಡಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆಂಪಣ್ಣ, ಪ್ರಾಥ ಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್. ನರಸಿಂಹ, ರಾಜೇಂದ್ರ ವೈದ್ಯ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.