ಮಹಾತ್ಮಾ ಗಾಂಧೀಜಿ ಮೌಲ್ಯ, ಸಿದ್ಧಾಂತ ಸಾರ್ವಕಾಲಿಕ

7

ಮಹಾತ್ಮಾ ಗಾಂಧೀಜಿ ಮೌಲ್ಯ, ಸಿದ್ಧಾಂತ ಸಾರ್ವಕಾಲಿಕ

Published:
Updated:

ಬೆಳಗಾವಿ: `ಮಹಾತ್ಮಾ  ಗಾಂಧೀಜಿ ಅವರ ಮೌಲ್ಯ ಹಾಗೂ ಸಿದ್ಧಾಂತಗಳಾದ ಸತ್ಯ, ಪ್ರೇಮ, ಅಹಿಂಸೆ ಇಂದಿಗೂ ಪ್ರಸ್ತುತವಾಗಿದೆ. ಪ್ರತಿಯೊಬ್ಬರು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.ವಾರ್ತಾ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ಏರ್ಪಡಿಸಲಾಗಿದ್ದ `ಮಹಾತ್ಮಾ  ಗಾಂಧೀಜಿ ಮೌಲ್ಯಗಳು-ಒಂದು ಚಿಂತನೆ~ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಮಹಾತ್ಮಾ  ಗಾಂಧೀಜಿ ಒಬ್ಬ ಯುಗ ಪುರುಷ. ಅವರ ತತ್ವಗಳು ಹಾಗೂ ಮೌಲ್ಯಗಳು ಸಾರ್ವಕಾಲಿಕ~ ಎಂದು ನುಡಿದರು.ಯಾವುದೇ ಅಧಿಕಾರದ ಆಸೆಯನ್ನು ಹೊಂದದೇ ಹೋರಾಟ ಮಾಡಿದ ಮಹಾನ್ ಜೀವಿ. ರಕ್ತರಹಿತ ಕ್ರಾಂತಿ ಮಾಡಿದ ಅವರೊಬ್ಬ ಚಿಂತಕ, ಶರಣ, ಹೋರಾಟಗಾರ ಹಾಗೂ ಅಹಿಂಸೆಯ ಪ್ರವಾದಿಯಾಗಿದ್ದರು ಎಂದು ವಿಶ್ಲೇಷಿಸಿದರು.ಮಹಾತ್ಮಾ  ಗಾಂಧೀಜಿ ಒಬ್ಬ ಸರಳ ವ್ಯಕ್ತಿ. ದುಂಡು ಮೇಜಿನ ಪರಿಷತ್ತಿಗೂ ತಮ್ಮ ಎಂದಿನ ವಸ್ತ್ರ ಉಡಿಗೆದೊಂದಿಗೆ ಹೋಗಿರುವುದು ಅವರ ಸರಳ ಜೀವನಕ್ಕೆ ಸಾಕ್ಷಿ. ಇಂದು ಪ್ರತಿಯೊಬ್ಬರು ಅವರಂತೆ ಸರಳ ಜೀವನವನ್ನು ಅಸುಸರಿಸಿದರೆ ಯಾವುದೇ ಸಮಸ್ಯೆ ಹಾಗೂ ಹಿಂಸಾತ್ಮಕ ಚಟುವಟಿಕೆ ನಡೆಯುವುದಿಲ್ಲ ಎಂದು ಜಗಜಂಪಿ ಹೇಳಿದರು.ಸಮಾರಂಭ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ. ಗದ್ಯಾಳ, ಮಹಾತ್ಮಾ  ಗಾಂಧೀಜಿ ಅಹಿಂಸೆಯ ಪ್ರತಿಪಾದಕರಾಗಿದ್ದರು. ಪ್ರತಿಯೊಬ್ಬರೊಂದಿಗೆ ಪ್ರೀತಿ ಹಾಗೂ ವಿಶ್ವಾಸದಿಂದ ಬದುಕಿದರು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಚ್. ಗಂಗರೆಡ್ಡಿ, `ಮದ್ಯಪಾನ ವಿರುದ್ಧ ಮಹಾತ್ಮಾ  ಗಾಂಧಿ~ ಪುಸ್ತಕವನ್ನು ಬಿಡುಗಡೆ ಮಾಡಿದರು.ಮಂಗಳಾ ಮಠದ ಹಾಗೂ ಸಂಗಡಿಗರಿಂದ ಗಾಂಧೀಜಿ ಪ್ರೀಯ ಭಜನೆಗಳನ್ನು ಪಠಿಸಲಾಯಿತು. ವಾರ್ತಾ ಇಲಾಖೆ ಉಪನಿರ್ದೇಶಕ ಬಸವರಾಜ ಕಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು. ವಾರ್ತಾ ಇಲಾಖೆಯ ಅನಂತ ಬಿ. ಪಪ್ಪು ವಂದಿಸಿದರು.ಜಿಲ್ಲಾಡಳಿತದಿಂದ ಗಾಂಧಿ ಜಯಂತಿ: ಜಿಲ್ಲಾ ಆಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಗಾಂಧಿ ಜಯಂತಿ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ. ಗದ್ಯಾಳ ಉದ್ಘಾಟಿಸಿದರು. ಮಂಗಳಾ ಮಠದ ಹಾಗೂ ಸಂಗಡಿಗರು ಭಜನೆಗಳನ್ನು ಪಠಿಸಿದರು.ತಹಶೀಲ್ದಾರ ಪ್ರೀತಂ ನಸಲಾಪೂರ, ವಾರ್ತಾ ಇಲಾಖೆ ಉಪನಿರ್ದೇಶಕ ಬಸವರಾಜ ಕಂಬಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರಿಶಂಕರಿ ಹಾಜರಿದ್ದರು.`ಗಾಂಧೀಜಿ ಆದರ್ಶ ಪಾಲಿಸಿ~


`ನಾವೆಲ್ಲ ಮಹಾತ್ಮಾರಾಗಲು ಸಾಧ್ಯವಿಲ್ಲ. ಆದರೆ ನಮ್ಮ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮಾಡಿ ಮಹಾತ್ಮಾ  ಗಾಂಧೀಜಿಯವರ ತತ್ವಗಳನ್ನು ಪಾಲಿಸುತ್ತ ಸರಳ ಮನುಷ್ಯರಾಗಿ ಬದುಕೋಣ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ. ಪುಂಡಲೀಕ ಹೇಳಿದರು.ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಯು.ಡಿ. ಹುನಕುಪ್ಪಿ, ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಎಚ್. ಗೌಡ ಮಾತನಾಡಿದರು. ಶಿಕ್ಷಣ ಸಂಯೋಜಕ ಸನದಿ, ವಾರಕರಿ, ದೈಹಿಕ ಶಿಕ್ಷಣಾಧಿಕಾರಿ ಶಿಂಧೆ, ವಲಯ ಸಂಪನ್ಮೂಲ ವ್ಯಕ್ತಿ ಎಸ್.ಎಸ್. ಪೂಜಾರ, ಭಾರತಿ ಬಡಿಗೇರ, ಸಮೂಹ ಸಂಪನ್ಮೂಲ ವ್ಯಕ್ತಿ ಎಲ್.ಎಚ್. ಆಲೂರ, ವಸಂತ ಕಟ್ಟಿ, ರಸೂಲ ಖಾನ್, ನಾವಲಗಿ, ರಾವಳ, ಮೆಳವಂಕಿ, ಗೋಂದಕರ, ಶಿವಪೂಜಿಮಠ, ಎಸ್.ಎಸ್.ಪಾಟೀಲ, ಬಿ.ಆರ್.ಕಾಮಕರ ಹಾಜರಿದ್ದರು.ಆರ್‌ಸಿಯುನಲ್ಲಿ ಗಾಂಧಿ ಸ್ಮರಣೆ

`ಮಹಾತ್ಮಾ  ಗಾಂಧಿ ಚಿಂತನೆಯ ಮರುಸ್ಮರಣೆ ಅನಿವಾರ್ಯವಾಗಿದೆ. ಗಾಂಧೀಜಿ ಸ್ವಾರ್ಥ ಮರೆತು ಭಾರತಕ್ಕೆ ತಮ್ಮ ಸಂಕಲ್ಪ ಶಕ್ತಿಯಿಂದ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಆ ಸ್ವಾತಂತ್ರ್ಯ ಇಂದು ನಮ್ಮ ಕೈಯಲ್ಲಿ ಏನಾಗಿದೆ ಎಂಬುದನ್ನು ಪ್ರತಿಯೊಬ್ಬ ಭಾರತೀಯ ಚಿಂತಿಸಬೇಕಾಗಿದೆ~ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಹೇಳಿದರು.`ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿದ ಅವರು, ಗಾಂಧಿಗಿರಿ ಎನ್ನುವುದು ತೋರಿಕೆಯ ಸನ್ನಿವೇಶವಾಗಿದೆ. ಕೇವಲ ಗಾಂಧಿ ಜಯಂತಿಯ ದಿನ ಮಾತ್ರ ಗಾಂಧಿ ಸ್ಮರಣೆ ಮಾಡುವುದು ಕ್ಲಿಷ್ಟಕರ ವಿಷಯವಾಗಿದೆ~ ಎಂದು ಅವರು ಹೇಳಿದರು.ಸಮಾರಂಭದಲ್ಲಿ ಕುಲಸಚಿವ ಪ್ರೊ. ಎಚ್.ಡಿ. ಪಾಟೀಲ, ಕುಲಸಚಿವ (ಮೌಲ್ಯಮಾಪನ) ಪ್ರೊ. ಜೆ.ಜಿ. ನಾಯಿಕ, ಹಣಕಾಸು ಅಧಿಕಾರಿ ಸಿದ್ಧರಾಮೇಶ್ವರ ಉಕ್ಕಲಿ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.ಅಂಹಿಸಾ ದಿನಾಚರಣೆ

ಕೆಎಲ್‌ಇ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಮಹಾತ್ಮಾ ಗಾಂಧೀಜಿ ಜನ್ಮದಿನಾಚರಣೆ ಅಂಗವಾಗಿಅಂತರರಾಷ್ಟ್ರೀಯ ಅಂಹಿಸಾ ದಿನ ಆಚರಿಸಲಾಯಿತು.ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿನ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಕುಲಸಚಿವ ಡಾ. ವಿ.ಡಿ.ಪಾಟೀಲ ಮಾತನಾಡಿ, ಗಾಂಧೀಜಿ ತವ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಡಾ. ಅಲ್ಕಾ ಕಾಳೆ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೆಎಲ್‌ಇ ಸಂಗೀತ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಭಜನೆ, ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಲಿಂಗರಾಜ ಕಾಲೇಜಿನಿಂದ ಶಾಂತಿ ಮೆರವಣಿಗೆ ನಡೆಯಿತು.ಮುಗಳಖೋಡ ವರದಿ

ಮುಗಳಖೋಡ:
ಇಲ್ಲಿಯ ಚನ್ನಬಸವೇಶ್ವರ ವಿದ್ಯಾ ವರ್ಧದಕ ಸಂಘದ  ಬ.ನಿ. ಕೂಲಿಗುಡ ಸಂಯುಕ್ತ  ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ಮಹಾತ್ಮಾ  ಗಾಂಧಿ  ಹಾಗೂ ಲಾಲಬಹಾದ್ದೂರ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ  ಎಸ್.ಎಸ್. ಮದಾಳೆ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಶಿಕ್ಷಕ ಬಿ.ಆರ್. ಕೂಡ್ಲಿವಾಡ ಆಗಮಿಸಿದ್ದರು.  ಕೆ.ಟಿ. ಪತ್ತಾರ ಹಾಗೂ ಎನ್. ಎಮ್. ಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು ಉಪನ್ಯಾಸಕಿಯರಾದ  ಆರ್.ಜಿ. ಹುಬ್ಬಳ್ಳಿ ಕೆ.ಎಂ. ಕಾಂಬಳೆ ವಿದ್ಯಾರ್ಥಿಗಳಾದ ವಿದ್ಯಾಶ್ರೀ ನಿಂಗನೂರ ಬೋರಮ್ಮ ಯಡವಣ್ಣವರ,  ಜೋತಿ ಕೂಲಿಗುಡ ವಿದ್ಯಾ ಹೊಟಪೇಟಿ ಮಾತನಾಡಿದರು.ಈ ಸಂದರ್ಭದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿಜೇತ  ಸಂಪತ್ ರವಿ ಕಳ್ಳಿಗುದ್ದಿ, ಗಾಯತ್ರಿ ಶಿವಾನಂದ ಮುಧೋಳ,  ರಾಮು ಶ್ರೀಕಾಂತ ಬಡಿಗೇರ  ಅವರಿಗೆ ಬಹುಮಾನ ವಿತರಿಸಲಾಯಿತು.ಎಸ್.ಎಸ್. ಬಾಬಣ್ಣವರ ಜಿ.ಎ. ನರಗುಂದ, ಎ.ಎಚ್.ಹೊಸಪೇಟಿ, ಬಿ.ಎ. ಕೊಪ್ಪದ ಜಿ.ಎಸ್. ಹಿರೇಮಠ, ಎ.ಆರ್. ಮುನ್ಯಾಳ, ವಿ.ಡಿ. ಸೋಮನ್ನವರ, ಎಸ್. ಬಿ. ಕೊಕಟನೂರ, ಜಿ,ಆರ್, ಮಾಗವೀರ, ಬಿಎಸ್. ಬೆಳಗಲಿ, ಎಸ್.ಟಿ.ಕೋತ, ಜಿ.ಬಿ. ಮೆಕಟಣಮರಡಿ ಎ.ಎಮ್. ದೊಡಮನಿ, ಆರ್.ಎಸ್. ಶೇಗುಣಸಿ ಉಪಸ್ಥಿತರಿದ್ದರು. ಕೆ.ಟಿ. ಪತ್ತಾರ ಸ್ವಾಗತಿಸಿದರು ಎಲ್.ಬಿ.ಮುನ್ಯಾಳ ನಿರೂಪಿಸಿದರು ಬಿ.ಆರ್. ಕೂಡ್ಲಿವಾಡ ವಂದಿಸಿದರು.ಗೋಕಾಕ ವರದಿ

ಗೋಕಾಕ:
ಇಲ್ಲಿಯ ವಕೀಲರ ಸಂಘದಲ್ಲಿ ಮಂಗಳವಾರ ರಾಷ್ಟ್ರಪಿತ ಮಹಾತ್ಮಾ  ಗಾಂಧೀಜಿ ಜನ್ಮ ದಿನ ಆಚರಿಸಲಾಯಿತು.ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಅವರು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ, ವಿ.ಎಸ್.ಪಾಟೀಲ ಮತ್ತು ಭೋಲಾ ಪಂಡಿತ ಹಾಗೂ ಸಂಘದ ಪ್ರ.ಕಾರ್ಯದರ್ಶಿ ಯು.ಬಿ.ಶಿಂಪಿ, ಸದಸ್ಯ ಎಸ್.ಬಿ. ನೇಸರಗಿ, ಯು.ಪಿ.ಬನ್ನಿಶೆಟ್ಟಿ, ಎಮ್.ಕೆ.ಪೂಜೇರಿ, ಎಸ್.ಎಸ್.ಹಂಚಿನಾಳ, ಬಿ.ಎಸ್.ವಡೇರ, ಸಿ.ಬಿ.ಗಿಡ್ಡನವರ, ಎ.ಎಸ್.ದೇಮನ್ನವರ, ಎ.ಕೆ.ತಮ್ಮಣ್ಣಿ, ಕೆ.ಆರ್.ಪವಾರ, ಸಿ.ಡಿ.ಹುಕ್ಕೇರಿ ಉಪಸ್ಥಿತರಿದ್ದರು.ಎಲ್.ಆರ್.ಜೆ. ಕಾನೂನು ಮಹಾವಿದ್ಯಾಲಯ: ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದಲ್ಲಿ ಮಹಾತ್ಮಾ  ಗಾಂಧೀಜಿ ಹಾಗೂ ಲಾಲ್‌ಬಹದ್ದುರ ಶಾಸ್ತ್ರಿ ಜಯಂತಿ ಆಚರಿಸಲಾಯಿತು.ಪ್ರಾಚಾರ್ಯ ಡಿ. ರಾಮದಾಸ ಅವರು ಗಾಂಧೀಜಿ ಹಾಗೂ  ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ್.ಎಮ್.ನದಾಫ್, ಉಪನ್ಯಾಸಕ ಎ.ಬಿ.ಪಾಟೀಲ, ಶ್ರೀಧರರಾವ, ಎಲ್.ವಿ. ಚಂದರಗಿ, ಡಿ.ಎಸ್.ಅಂಗಡಿ, ಎ.ಪಿ.ಪೀರಜಾದೆ, ಎ.ಎಂ. ಬೀಳಗಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry