ಶನಿವಾರ, ಮಾರ್ಚ್ 6, 2021
21 °C

ಮಹಾದಾಯಿ ವಿವಾದ: ಸಂಸದ ಪ್ರತಾಪ್ ಸಿಂಹ ಅವರಿಗೆ ನೆಟಿಜನ್‍ಗಳ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾದಾಯಿ ವಿವಾದ: ಸಂಸದ ಪ್ರತಾಪ್ ಸಿಂಹ ಅವರಿಗೆ ನೆಟಿಜನ್‍ಗಳ ಪ್ರಶ್ನೆಗಳು

ಬೆಂಗಳೂರು: ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಹಾಕಿದ್ದಾರೆ. 'ಮಹದಾಯಿ ತಿರುವಿಗೆ ಬಿಡುವುದಿಲ್ಲ ಎಂದಿದ್ದ ಸೋನಿಯಾ ಶಿಷ್ಯೋತ್ತಮರೇ, ಸ್ವಲ್ಪ ಕೇಳಿ!' ಎಂಬ ಶೀರ್ಷಿಕೆಯ ಈ ಪೋಸ್ಟ್ ಈಗಾಗಲೇ ಮೂರು ಸಾವಿರಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ. ಆದಾಗ್ಯೂ, ಈ ಪೋಸ್ಟ್ ಗೆ ಬಂದ ಕಾಮೆಂಟ್ ಗಳಲ್ಲಿ ಹೆಚ್ಚಿನದ್ದು ಪ್ರತಾಪ್ ಸಿಂಹ ಅವರಿಗಿರುವ ಮರು ಪ್ರಶ್ನೆಗಳಾಗಿವೆ. ಉತ್ತರ ಕರ್ನಾಟಕದ ಜಿಲ್ಲೆಯ ಜನರು ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗಿರುವಾಗ ರಾಜಕಾರಣ ಮಾಡಬೇಡಿ ಎಂಬ ಸಲಹೆ ಮತ್ತು ಆಕ್ರೋಶದ ದನಿ ಹೆಚ್ಚಿನ ಕಾಮೆಂಟ್ ಗಳಲ್ಲಿ ಎದ್ದು ಕಾಣುತ್ತಿತ್ತು.

ಪ್ರತಾಪ್ ಸಿಂಹ ಅವರಿಗೆ ನೆಟಿಜನ್‍ಗಳು ಕೇಳಿದ ಪ್ರಶ್ನೆಗಳು ಇಲ್ಲಿವೆ

1. ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ನ್ಯಾಯಾಧಿಕರಣದ ಮುಂದೆ ಇದ್ದರೂ ಪ್ರಧಾನಿಗಳಿಗೆ ಇರುವ ವಿಶೇಷ ಅಧಿಕಾರ ಬಳಸಿ ಬೆಂಗಳೂರಿಗೆ ಕುಡಿಯುವ ಕಾರಣಕ್ಕಾಗಿ ಒಂಭತ್ತು ಟಿಎಂಸಿ ನೀರನ್ನು ನೀಡಲು ಆದೇಶಿಸುತ್ತಾರೆ.ಅಂದು ಇಪ್ಪತ್ತನಾಲ್ಕು ಪಕ್ಷಗಳು ಸೇರಿ ಕೇಂದ್ರದಲ್ಲಿ ಸರಕಾರ ರಚನೆ ಮಾಡಿದ್ದವು.ಅಲ್ಲದೇ ತಮಿಳುನಾಡಿನ ಕರುಣಾನಿಧಿಯೂ ದೇವೇಗೌಡರನ್ನು ಬೆಂಬಲಿಸಿದ್ದರು ಆದರೂ ರಾಜ್ಯದ ವಿಚಾರ ಬಂದಾಗ ಕರಣಾನಿಧಿಯವರ ರಾಜಕೀಯ ಒತ್ತಡದ ವಿರುದ್ಧವಾಗಿ ಬೆಂಗಳೂರಿಗೆ ನೀರು ಒದಗಿಸುವ ಇಚ್ಚಾ ಶಕ್ತಿಯನ್ನು ದೇವೇಗೌಡರು ಪ್ರದರ್ಶಿಸಿಸಿದ್ದರು.ಅದೇ ರೀತಿಯ ಇಚ್ಛಾಶಕ್ತಿ ಇಂದು ರಾಜ್ಯ ಬಿಜೆಪಿ ಸಂಸದರಿಗೇಕಿಲ್ಲ?.....

2.ಇತಿಹಾಸ ಉಕದಲ್ಲಿರಿಗೂ ಗೊತ್ತಿರುವ ವಿಚಾರ ಸಿಂಹರವರೆ.... ಉ ಕ ದಿಂದ ಹೆಚ್ಚು ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದು ಇತಿಹಾಸ ಕೇಳಲು ಅಲ್ಲಾ, ರಾಜೀನಾಮೆ ಕೊಟ್ಟು ಬಂದು ಹೋರಾಟ ಸೇರಿಕೊಳ್ಳಿ...ನಮೊ ಸರಕಾರ ಏನು ಬಿಳಲ್ಲಾ ಸಂಪೂರ್ರಣ ಬಹುಮತ ಇದೆ Dont do Politics Shut u Mouth

 

3. ಸರ್, ನೀವು ರಾಜಕಾರಣಿಗಳು ಭಾಷಣದಲ್ಲಿ ಮಾತ್ರ ರೈತರ ಬಗ್ಗೆ ಮಾತಾಡ್ತೀರಾ. ಹಳೇದು ಬಿಡಿ ಸರ್, ಈಗ ನಿಮ್ಮ ಕೈಯಲ್ಲಿ ಅಧಿಕಾರ ಇದೆ.  ನೀವು, ನಿಮ್ಮ ಪಕ್ಷ ಏನು ಮಾಡ್ತಾ ಇದೆ ಹೇಳಿ?

4.ಏನಾಗಿದೆ ನಿಮಗೆಲ್ಲಾ......ಯಾಕೆ ಹಳೇದು ಕೆದರತಾ ಇದ್ದೀರಾ......ಮುಂದೇನು ನೋಡಿ!!! ಅವರು ತಪ್ಪು ಮಾಡ್ಯರೆ ಅಂತಾ ಜನ ಮನಿಗೆ ಕಳ್ಸ್ಯಾರ......ನಿಮ್ಮನ್ನೂ ಕಳಿಸ್ಬೇಕಾ......?

5.ಅವಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಧಿನಾಯಕಿ, ದೇಶಕ್ಕಲ್ಲ , ಇವಾಗ ನೀವು ಅಧಿಕಾರದಲ್ಲಿದಿರಲ್ಲ ಏನಾದರೂ ಜನ ಮೆಚ್ಚೊ ಹಾಗೆ ರಾಜಕೀಯ ಮಾಡಿ ನೀರು ಕೊಡಿಸಿ ಸಾರ್

6.ಪ್ರತಾಪ್ ಸಿಂಹ ಅವರೇ, ನಾನೂ ಮೋದಿಯವರ ಅಭಿಮಾನಿ. ಆದ್ರೆ ಇಷ್ಟೆಲ್ಲಾ  ರಾಜ್ಯದಲ್ಲಿ ನಡೀತಾ ಇದ್ರೂ ಮೋದಿಯವರು ಯಾಕೆ ಸುಮ್ನೆ ನೋಡಿದ್ರೂ ನೋಡದೇ ಇರೋ ಥರಾ ನಟಿಸ್ತಾ ಇದ್ದಾರೆ ಗೊತ್ತಿಲ್ಲ. ದಯವಿಟ್ಟು ನೀವು 17 ಜನ ಎಂಪಿಗಳು 2 ಜನ ಎಂಪಿಗಳಿಗೆ ಸೋತು ಹೋಗಿರೋದು ನಮ್ಮ ದುರ್ದೈವ.

7. ಪ್ರತಾಪ್ ಸಿಂಹರವರೇ ನನಗೆ ಸ್ಪಷ್ಟನೆ ಬೇಕು 2002 ರಲ್ಲಿ ಯಡಿಯೂರಪ್ಪನವರು ಕರ್ನಾಟಕ ದ ಉಪ ಮುಖ್ಯಮಂತ್ರಿ ಯಾಗಿದ್ದರೇ?
8.ಪ್ರತಾಪ್ ಸಿಂಹ ಅವ್ರೆ, ಅವ್ರೇನೋ ಮಾಡ್ಲಿಲ್ಲ, ನೀವಾದ್ರು ಎನಾದ್ರೂ ಮಾಡ್ತಿರೋ ಇಲ್ಲ ಅವ್ರು ಕಕ್ಕ ತಿನ್ದವ್ರೆ ನಾವೂ ತಿನ್ದೇ ತಿಂತಿವಿ ಅಂತ ಅವ್ರ ತರಾನೆ ಆಡ್ತಿರಾ?

9. ನೀವು ಒಳ್ಳೆ ಬರಹಗಾರರು ನಿಜ.ಅದರೆ ಮಹದಾಯಿ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ..ಈತರಹದ ರಾಜಕೀಯ ಮಾಡುವ ಬದಲು..ರೈತರ ಬಗ್ಗೆ ಸಲ್ಪವಾದರು ಕಾಳಜಿ ಇದ್ರೆ ..ಅಲ್ಲಿಗೆ ಬಂದು ಹೋರಾಟ ಮಾಡಿ..ಕಡೆಯಾದಾಗಿ ನನ್ನದೊಂದು ಮಾತು ..ನೀವು ಬರೆಯುವ article ಬೆತ್ತಲೆ ಜಗತ್ತು ..ಸ್ವಾಮಿ ಜಗತ್ತನ್ನು ನೋಡುವ ನಿಮ್ಮ ಕಣ್ಣುಗಳು ಬೆತ್ತಲೆ

10. ದಯವಿಟ್ಟು ಕಳಸಾ ಬಂಡೋರಿ ವಿಷಯದಲ್ಲಿ ರಾಜಕೀಯ ಮಾಡಬೇಡಿ ಉ ಕ ಜನರಿಗೆ ನೀರ ಬಿಡೊ ವಿಚಾರ ಮಾಡ್ರಿ

11.ರೀ ಸ್ವಾಮಿ., ಅವರು ಹೊಟ್ಟೆಗೆ ಇನ್ನೆನ್ನನ್ನೋ ತಿಂದು ಮಾತಾಡ್ತಿದಾರೆ., ನೀವ್ಯಾಕೆ ಅವ್ರು ತಿಂದು ಜೀರ್ಣಿಸಿರೋ ಹೊಲಸು ನೋಡ್ತಿದಿರಿ.. ನೀವು ಹೊಟ್ಟೆಗೆ ಅನ್ನೋ ತಿನ್ನೋ ಕೆಲಸ ಮಾಡಿ ಉತ್ತರ ಕರ್ನಾಟಕದ ಜನತೆಗೆ ನೀರು ಕೊಡಿಸಿ.. ಮಹಾರಾಷ್ಟ್ರ., ಗೋವಾದ ಆಡಳಿತ ಪಕ್ಷನ ಒಪ್ಪಿಸಿ., ವಿರೋಧ ಪಕ್ಷದವರ ಬಗ್ಗೆ ನಿಮಗೇನು ಚಿಂತೆ.. ಎಷ್ಟೋ ವಿಧೇಯಕಗಳು ವಿರೋಧ ಪಕ್ಷದ ವಿರೋಧದ ನಡುವೆಯೂ ಅಂಗೀಕೃತವಾಗಿವೆ. ಕುಂಟು ನೆಪ ಬೇಡ., ನಿಮ್ಮ ಚಿಂತೆ ನಾಳೆ ಅಧಿಕಾರ ಕಳ್ಕೋತೀವಿ ಅನ್ನೋ ಭಯ.. ನಾಚಿಕೆ ಆಗ್ಬೇಕು ನಿಮಗೆ.. ಮೋದಿಯವರ ಮೇಲೆ ಅಭಿಮಾನ ಇಟ್ಟು ರಾಜ್ಯದ ಜನ ಬಿಜೆಪಿ ಗೆ ಮತ ಹಾಕಿದ್ದಾರೆ.. ನೀವು ಸಜ್ಜನ., ತಿಳ್ಕೊಂಡವರು ಅಂತ ನಿಮಗೆ ಬೆಂಬಲ ಕೊಟ್ಟಿದ್ದಾರೆ ಅವರ ಋಣ ತೀರಿಸಿ.... ನಿಮಗೆ ನಿಜವಾದ ಕಾಳಜಿಯೇ ರೈತರ ಮೇಲಿದ್ದರೆ ಸಾಮೂಹಿಕ ರಾಜೀನಾಮೆ ಕೊಡಿ ಹೋರಾಡಿ..
ರೈತರ ದಣಿವಾರಿಸಿ...(ಉಗ್ರ)ಪ್ರತಾಪ ಸಿಂಹ.,
ಜಗತ್ತಿಗೆ ಬೆತ್ತಲಾಗಿರೋರು ನೀವು., ಮರೆಯದಿರಿ...

12.ಬರೀ ಪೋಸ್ಟ್ ಹಾಕೋದಲ್ಲ. ನೀವೇನ್ ಮಾಡಿದ್ದೀರಾ? ಮೋದಿನಾ ಹೊಗಳ್ತೀರಾ. ನೀವೆಲ್ಲ ಇದ್ದೀರಲ್ಲಾ ಮೋದಿಯವರಿಗೆ ಅರ್ಥ ಮಾಡಿಸಿ ಸಮಸ್ಯೆ ಪರಿಹರಿಸಲು ಆಗುವುದಿಲ್ಲವಾ.  ಪಿಎಂ ನಮ್ಮವರೇ, ಇಷ್ಟೊಂದಿನ ಬೇಕಾ ನೀರು ಬಿಡಿಸೋಕೆ. ಫಸ್ಟ್ ಆ ಕೆಲ್ಸ ಮಾಡಿ ಆಮೇಲೆ ಬೇರೆಯವರ ಬಗ್ಗೆ ಟೀಕೆ ಮಾಡಿ, ಪೋಸ್ಟ್ ಮಾಡಿ, ಅರ್ಥ ಆಯ್ತು ಅಂದ್ಕೋತೀನಿ

13.ಪ್ರತಾಪ ಸರ್ ಕತೆ ಬೇಡ ಅಂತ ಅನಿಸುತ್ತೆ ನೀವು ಚೆನ್ನಾಗಿ ಬರಿತ್ತಿರಾ ಆದ್ರೆ YAMNURU ನಲ್ಲಿ ನಡೆದಂತ ಘಟನೆಗೆ ಯಾರು ನೀವು ಮತ್ತು ನಿಮ್ಮ ನಾಯಕರು Spandisilla ನೀವು ಕತೆ ಹೇಳಬೇಡಿ ಕಳೆದ ಒಂದು ವರ್ಷದಿಂದ ನಡೆದಂತ ಹೋರಾಟ ಇಲ್ಲಿವರಿಗು ಇನ್ನು ಅದೆ ಕತೆ ಹೇಳತೀರ, ಸಾಕು Result ಬೇಕು,ಕತೆ ಕೇಳಿ ಆ ಜನ ಹೋರಾಟ ಮಾಡೀ ಏಟು ತಿಂದು ಜೈಲಲ್ಲಿ ಇದ್ದಾರೆ ಆದಕಾರಣ ಅವರಿಗೆ ನ್ಯಾಯ ಒದಗಿಸಿ ನಿಮ್ಮಲ್ಲಿ ಕಳಕಳಿಯ ವಿನಂತಿ.

14. ಹಲೋ ಮೋದಿ ಪ್ರಿಯ ಪ್ರತಾಪ್ ಸಿಂಹರವರೆ ಮೋದಲು ಈ ಕಿತ್ತೋಗಿರೋ ರಾಜಕೀಯ ಬಿಟ್ಟು . ಜನರ ಬಾವನೆಯನ್ನ ಅರ್ಥ ಮಾಡ್ಕೋಳ್ಳಪ್ಪ ಅದ್ ಬಿಟ್ಟು ಮೋದಿ ಮೋದಿ ಅಂತ ಜಪ ಮಡ್ಕೋಂಡು ಇರ್ಬೇಡ.

15.ಹಳೇ ಕತೆ ಬಿಡ್ರೀ, ನೀವ್ ಹದಿನೇಳ್ ಜನ ಮೋದಿ ಮುಂದೆ ಮಂಡಿಯೂರಿ ಕೂತಿದೀರಲ್ಲಾ .... ಮೊದ್ಲು ಎದ್ದ್ ನಿಲ್ಲ್ರೀ..... ಮೋದಿ ಮುಂದೆ ನಿಂತು ಮಾತಾಡೋ ದಮ್ ಇಲ್ಲದ ನೀವು ಇಲ್ಲಿ ಆರ್ಟಿಕಲ್ ಬರ್ಕೊಂಡ್ ಕೂತಿದೀರಾ? ನಿಮಗೆ ವೋಟ್ ಹಾಕಿ ಗೆಲ್ಸಿರೋದು ಪತ್ರಿಕೆಗಳಲ್ಲಿ ಕತೆ ಬರ್ಕೊಂಡ್ ಕೂರೋಕಲ್ಲಾ, ಹದಿನೇಳ್ ಜನಾ ಇದೀರಾ ತಾಖತ್ ಇದ್ರೆ ರಾಜೀನಾಮೆ ಬೆದರಿಕೆ ಒಡ್ಡಿ ರಾಜ್ಯದ ಪರವಾಗಿ ನಿಲ್ಲೀ, ಮೋದಿ ನಿಮ್ ಮುಂದೆ ತಲೆಬಾಗದಿದ್ರೆ ಕೇಳಿ, ಜನ ಮುಂದಿನ ಭಾರೀನೂ ನಿಮ್ಮನ್ನೇ ಆರಿಸ್ತಾರೆ. ಮೋದಿಯ ಮನ್ ಕೀ ಬಾತ್ ಹೊಟ್ಟೆ ತುಂಬ್ಸಲ್ಲಾ, ನಿಮ್ಮ ಮಂಕೀ ಮಾತು ಬಾಯಾರಿಕೆ ನೀಗ್ಸಲ್ಲಾ .... ಇದೆಲ್ಲಾ ತೇಪೆ ಕೆಲ್ಸಾ ಬಿಟ್ಟು ಮಾಡೋ ಕೆಲ್ಸಾ ಮಾಡಿ, ಇಲ್ಲಿ ಬೆಂಗಳೂರಲ್ಲಿ ನಮ್ ಗಾರ್ಮೆಂಟ್ಸ್ ಹೆಣ್ ಮಕ್ಳು ನಿಮ್ಮನ್ನೆಲ್ಲಾ ನೋಡಿ ನಗ್ತಿದಾರೆ .... ನಮಗಿರೋ ಧೈರ್ಯ ಈ ಹದ್ನೇಳ್ ಜನಕ್ಕಿಲ್ಲಾ, ಇವ್ರಿಗೆಲ್ಲಾ ಮೋದಿ ಕಂಡ್ರೆ ಅಷ್ಟೊಂದ್ ಭಯಾನಾ ಅಂತಾ.

16.ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ನ್ಯಾಯಾಧಿಕರಣದ ಮುಂದೆ ಇದ್ದರೂ ಪ್ರಧಾನಿಗಳಿಗೆ ಇರುವ ವಿಶೇಷ ಅಧಿಕಾರ ಬಳಸಿ ಬೆಂಗಳೂರಿಗೆ ಕುಡಿಯುವ ಕಾರಣಕ್ಕಾಗಿ ಒಂಭತ್ತು ಟಿಎಂಸಿ ನೀರನ್ನು ನೀಡಲು ಆದೇಶಿಸುತ್ತಾರೆ.ಅಂದು ಇಪ್ಪತ್ತನಾಲ್ಕು ಪಕ್ಷಗಳು ಸೇರಿ ಕೇಂದ್ರದಲ್ಲಿ ಸರಕಾರ ರಚನೆ ಮಾಡಿದ್ದವು.ಅಲ್ಲದೇ ತಮಿಳುನಾಡಿನ ಕರುಣಾನಿಧಿಯೂ ದೇವೇಗೌಡರನ್ನು ಬೆಂಬಲಿಸಿದ್ದರು ಆದರೂ ರಾಜ್ಯದ ವಿಚಾರ ಬಂದಾಗ ಕರಣಾನಿಧಿಯವರ ರಾಜಕೀಯ ಒತ್ತಡದ ವಿರುದ್ಧವಾಗಿ ಬೆಂಗಳೂರಿಗೆ ನೀರು ಒದಗಿಸುವ ಇಚ್ಚಾ ಶಕ್ತಿಯನ್ನು ದೇವೇಗೌಡರು ಪ್ರದರ್ಶಿಸಿಸಿದ್ದರು.ಅದೇ ರೀತಿಯ ಇಚ್ಛಾಶಕ್ತಿ ಇಂದು ರಾಜ್ಯ ಬಿಜೆಪಿ ಸಂಸದರಿಗೇಕಿಲ್ಲ?........

17.ಪ್ರತಾಪ್ ಸಿಂಹ ..... ನೀವು ಹದಿನೇಳು ಮಂದಿ ಸಂಸದರೇನು ದನ ಕಾಯ್ತಿದೀರ್ಯೆ? ಮೋದಿ ಮುಂದೆ ಮಾತಾಡೋಕೆ ಮೀಟರ್ ಇಲ್ಲದ ನೀವುಗಳು ಕಾಂಗ್ರೆಸ್ಸಿಗರ ಹಳೇಕಥೆಯನ್ನು ಎಷ್ಟು ವರ್ಷ ಅಂತ ಹೇಳ್ತೀರಿ. ಮೋದಿ ಮನಸ್ಸು ಮಾಡಿದರೆ ಇದನ್ನು ಕೆಲವೇ ಕ್ಷಣಗಳಲ್ಲಿ ಪರಿಹಾರ ಮಾಡಬಹುದು. ಆದರೆ ಮಾಡಲ್ಲ.

18.ಪ್ರತಾಪ ಸಿಂಹ ಅವರೇ,ಒಂದು ಹೆಜ್ಜೆ ಮುಂದೆ ಹೋಗಿ ಮೊದಲು ಮೂರೂ ರಾಜ್ಯದ ಸಿ.ಎಂ.ಗಳ ಸಭೆ ನಡೆಸಿ ಅದರ ಪರಿಣಾಮ ನೋಡಿ ಮುಂದಿನ ಕ್ರಮವಿಡಿ......ಅದು ಬಿಟ್ಟು ಅವರನ್ನು -ಇವರನ್ನು ಮೊದಲು ಅಂದರ ಯಾವದೂ ಮೊದಲಾಗಲ್ಲ.....ಬಿ.ಜೆ.ಪಿ.ಗೆ ಇಚ್ಛಾಶಕ್ತಿ ಇದ್ದೇ ಕೂಡಲೇ ಸಭೆ ಕರೆಯಾಕೆ ಒತ್ತಾಯ ಮಾಡಿ ಎಲ್ಲಾ ಎಂ.ಪಿ.ಗಳು ರಾಜೀನಾಮೆ ಕೊಡಿ...

19.2014 ರ ಪರಿಸ್ಥಿತಿ ಹೇಗಿತ್ತೆಂದರೆ ಮೋದಿ ಹೆಸರಿನಲ್ಲಿ ಒಂದು ಕತ್ತೆ ನಿಂತಿದ್ದರೂ ಗೆಲ್ಲುತ್ತಿತ್ತು, ನಿಮ್ಮ ಉದ್ಯಮ-ಪತ್ರಿಕೋದ್ಯಮ ಅಷ್ಟು ಅಟ್ಟಕ್ಕೇರಿಸಿತ್ತು ಮೋದಿಯವರನ್ನು. ಈ ದೇಶದ ಅಭಿವೃದ್ದಿಗಾಗಿ ನನ್ನಂತ ಯುವ ಜನತೆ ಮೋದಿ ಮುಖ ನೋಡಿ ವೋಟ್ ಕೊಟ್ಟಿದ್ದೇವೆ ಹೊರತು ಪ್ರತಾಪ್, ಪ್ರಹ್ಲಾದ್ ಜೋಶಿ ಅಥವಾ ಅನಂತ್ಕುಮಾರ್ ಮುಖ ನೋಡಿ ಯಾರೂ ವೋಟ್ ಒತ್ತಿಲ್ಲ, ಹೀಗಿರುವಾಗ ನೀರಿಗೆ ಕಷ್ಟ ಬಂದಾಗ ನಿಮ್ಮನು ಕೇಳದೆ ಕಾಂಗ್ರೆಸ್ನವರನ್ನು ಕೇಳಲಾದೀತೇ ಪ್ರತಾಪ್ ಸಿಂಹರವರೇ?

20. ರೀ ಸ್ವಾಮಿ ಪ್ರತಾಪ ಸಿಂಹ ಪ್ರತ್ಯಾರೊಪ ಸಾಕ್ ಮಾಡ್ರಿ ..ಯುವ ಸಂಸದರಾಗ್ಗಿದ್ದಿರಿ ಸ್ವಲ್ಪ ರಾಜ್ಯದ ಜನರ ಬಗ್ಗೆ ಯೋಚನೆ ಮಾಡ್ರಿ..ಅದು ಬಿಟ್ಟು ಅವ್ರ್ ತಪ್ಪು ನಮ್ ತಪ್ಪು ಅನ್ನೊದನ ಬಿಡಿ..೧೭ ಜನ ಬಿಜೆಪಿ ಸಂಸದರು ಸಾಮುಹಿಕ ರಾಜೀನಾಮೆ ಕೊಟ್ಟು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಮಹಾದಾಯಿ ನೀರು ರಾಜ್ಯಕ್ಕೆ ಬರುವ ಹಾಗೆ ಮಾಡ್ರಿ..ನಿಜವಗ್ಲು ನಿಮ್ಗೆ ರಾಜ್ಯದ ಜನರ ಬಗ್ಗೆ ಸ್ವಲ್ಪವದರು ಕಾಳಜಿ ಇದಿಯೆಂದ್ರಿ..ಬೇರೆ ರಾಜಕರಣಿ ತರ ಆಡ್ತಿರಲ್ರಿ..ನಿಮ್ ತರ ನಾಯಕಗಳು ಇದ್ರೆ ನಮ್ಮ ಈ ಕರುನಾಡು ಉದ್ಧರ ಆದಂಗೆ...ನಿಮಗೆ ಅಯ್ಕೆ ಮಾಡಿದ ಜನರಿಗೆ ಸ್ವಲ್ಪ ಕೆಲ್ಸ ಮಾಡ್ರ್..ಪ್ರಾಧನಿ ಮೋದಿ ಮನ ಒಲಿಸಿ ನಿಮ್ಮೆ ಈ ಲೇಖನ ಬರೆಯೊದು ಬಿಟ್ಟು..ಕಾಂಗ್ರೆಸ್ಸ್ ಆಡಳಿತ ಇರುವ ರಾಜ್ಯದಲ್ಲಿ ೧೭ಜನ ಬಿಜೆಪಿ ಸಂಸದರನನ್ನ ಗೆಲ್ಲಿಸಿದ ಜನರಿಗೆ ಒಳ್ಳೆ ಪ್ರತಿಫಲ ಕೊಡ್ರಿ.ಸ್ವಲ್ಪನು ನಾಚಿಕೆ ಆತ್ಮ ಗೌರವ ಇಲ್ಲ ಅನ್ಸತ್ತೆ ನಿಮ್ಹೆ..ನೀರಿನ ವಿಷಯದಲ್ಲಿ ರಾಜಕೀಯ ಮಾಡ್ತ ಇದಿರಾ..ಮೈಸೂರಿನ ಜನ ನಿಮ್ನ ಅಯ್ಕೆ ಮಾಡಿದ್ದು ತಪ್ಪಾಯಿತು ಅನ್ಸತ್ತೆ...

21.ಸಾರ್ ದಯವಿಟ್ಟು ಅರ್ಥಮಾಡಿಕೊಂಡು ಮಾತನಾಡಿ ಕಾಂಗ್ರೆಸ್ ದರ್ಬಾರಾ ಸಾಕು ಒಳ್ಳೆಯ ಆಡಳಿತ ಬೇಕು ಅಂತಾನೆ ನಿಮ್ಮನ್ನು ಕೇಂದ್ರಕ್ಕೆ ಕಳುಹಿಸಿದ್ದು ಹೊರತು ನೀವು ಅವರಂತೆ ವರ್ತಿಸಿ ಅಂತಾ ಅಲ್ಲಾ ಕಾಂಗ್ರೆಸ್ ಅಧಿಕಾರ ಇದ್ದಾಗ ಅವರು ಕೊಟ್ಟಿಲ್ಲ ನಿಮಗೆ ಅಧಿಕಾರ ಇದೆ ಅಲ್ವಾ ನೀವು ಕೂಡಿ ನಿಮಗು ಆಗಲ್ಲಾ ಅಂತಾ ಹೇಳಿ ಮುಂದೆ ನಮ್ಮ ಜನತೆಗು ಕೂಡ ರಾಜಕೀಯ ಮಾಡಲು ಬರುತ್ತದೆ ಕಾಂಗ್ರೆಸ್ ನವರು ಮಾಡಿದ ತಪ್ಪು ನೀವು ಮಾಡಿದರೆ ಅವರಿಗೂ ನಿಮಗು ಇರುವ ವೇತ್ಯಾಸವೇನು ಇದು ಒಬ್ಬ ಸಾಮಾನ್ಯ ನಾಗರಿಕನಾಗಿ ನಮ್ಮ ಪ್ರಶ್ನೆ ನಮ್ಮ ದೇಶಕ್ಕೆ ಮೋದಿಜೀ ಬೇಕು ಅದೆ .ದಯವಿಟ್ಟು ಕುಡಿಯುವ ನೀರಿನಲ್ಲಿ ರಾಜಕೀಯ ಮಾಡಬೇಡಿ

22. ಪ್ರತಾಪ್ ಸಿಂಹರವರೇ ನೀವು ಕೇವಲ ಪತ್ರಕರ್ತರೇ ಆಗಿದ್ದರೆ ಜನರ ಬಗ್ಗೆ ಮಾತನಾಡುತ್ತಿದ್ದಿರಿ ಆದರೆ ಈಗ ನೀವು ಒಂದು ಪಕ್ಷದ ಪ್ರತಿನಿದಿಯಾಗಿದ್ದೀರಿ ಅದರಿಂದ ನೀವು ಪಕ್ಷದವರನ್ನು ರಕ್ಷಿಸಿಕೊಂಡು ಮಾತನಾಡಲೇಬೇಕು ಯಾಕೆಂದರೆ ಅದಿಕಾರ ಅವರು ಇವರ ಮೇಲೆ ಗೂಬೆ ಕೂರಿಸಿ ಅಂತಾ ಅಲ್ಲ ಜನರ ಸಮಸ್ಯಯನ್ನು ಪಕ್ಷಭೇದ ಮರೆತು ಬಗೆ ಹರಿಸಿ ಅಂತ ಆದರೆ ನೀವು ಸೊನಿಯಾಗಾಂದಿ ಅಂತಿರಾ ಅವರು ಮೋದಿ ಅಂತಾರೆ ಜನುಮ ಏನ್ ಹೆಳ್ಬೇಕು ಹೇಳು.. ಇದರಿಂದ ತಾನೆ ನಮ್ಮ ರಾಜ್ಯದ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈ ಸಮಸ್ಯ ಉದ್ಬವಿಸಿರುವುದೆಂತು ಸತ್ಯ...

23. ಪ್ರತಾಪ ಸಿಂಹ ಸರ್ ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿದ್ದಾಗ ನಮಗೆ ಅನ್ಯಾಯ ಮಾಡಿದಾರೆ ಅಂತನೆ ನಮ್ಮ ರಾಜ್ಯದಿಂದ ಮೋದಿ(ಬಿ.ಜೆ.ಪಿ) ಗೆದ್ದು ಬರಲಿ ನಮ್ಮ ಕನಸಿನ ಭಾರತ ನಿರ್ಮಾಣ ಆಗಲಿ ಅಂತ 17 ಜನ ಎಂ.ಪಿ. ಗಳನ್ನು ಆರಿಸಿ ಮೋದಿ ಜಿ ರವರನ್ನು ಅಧಿಕಾರಕ್ಕೆ ತರಲು ಕರ್ನಾಟಕದಿಂದ ಕೇಂದ್ರಕ್ಕೆ ಕಳಿಸಿದ್ದಿವಿ. ಆಯ್ತು ನಿಮ್ಮ ಪ್ರಕಾರ ರಾಜ್ಯ ಸರ್ಕಾರ ವಿನಾ ಕಾರಣ ಪ್ರಧಾನಿಗಳ ಮೇಲೆ ಗೂಬೆ ಕೂರಿಸುತ್ತಿರುವಂತೆ ಬರಹದಲ್ಲಿ ವ್ಯಕ್ತಪಡಿಸಿರುತ್ತೀರಿ. ಸ್ವಾಮಿ ಯಾರೋ ಕಸ್ಟದಲ್ಲಿದ್ದೇನೆ ಅಂತ ಟ್ವಿಟರ್ ನಲ್ಲಿ ಮೆಸೇಜ್ ಮಾಡಿದಾಗ ಕೂಡಲೆ ಅವರ ನೋವಿಗೆ ಸ್ಪಂದಿಸುವ ಮೋದಿ ಜಿ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯ ಸಾವಿರಗಟ್ಟಲೆ ಟ್ವಿಟ್ ಮಾಡಿ ನಮಗೆ ಕುಡಿಯಲು ನೀರು ಇಲ್ಲ ಎಂದು ಸಂದೇಶ ಹಾಕಿದರು ಈ ಬಗ್ಗೆ ಗಮನ ನೀಡುತ್ತಿಲ್ಲವಲ್ಲ ಏಕೆ? ಗೋವಾ ರಾಜ್ಯದಲ್ಲಿಯು ಕೂಡ ಬಿ.ಜೆ.ಪಿ. ಸರ್ಕಾರ ಇದೆ ಕೇಂದ್ರದಲ್ಲಿಯು ಬಿ.ಜೆ.ಪಿ ಸರ್ಕಾರ ಇದೆ ಮೋದಿ ಜಿ ರವರ ಮಾತನ್ನು ಯಾರು ತಿರಸ್ಕರಿಸಲು ಸಾದ್ಯವಿಲ್ಲ. ಮತ್ತು ಕೇಂದ್ರ ಸರ್ಕಾರ ನೇರವಾಗಿ ಕರ್ನಾಟಕ ಆಡಳಿತ ಮತ್ತು ವಿರೋಧ ಪಕ್ಷ ಹಾಗೂ ಗೋವಾ ರಾಜ್ಯದ ಆಡಳಿತ ಮತ್ತು ವಿರೋಧ ಪಕ್ಷದ ಸಭೆ ಕರೆದು ರಾಜಿ ಸೂತ್ರ ರಚಿಸಲು ಪ್ರಯತ್ನಿಸಿದ್ದರೆ ಕಂಡಿತವಾಗಿಯು 28 ಎಂ.ಪಿ ಕ್ಷೇತ್ರಗಳು ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಬರ್ತಾ ಇತ್ತು. ನಿಮ್ಮಂತ ಸಂವೇದನೆ ಉಳ್ಳ ಪತ್ರಕರ್ತರು ಹಾಗು ಎಂ.ಪಿ ಗಳು ಪ್ರಧಾನಿಗಳ ಬಳಿ ತೆರಳಿ ಈ ಬಗ್ಗೆ ಮನವಲಿಸಿದ್ದಲ್ಲಿ ಕಂಡಿತವಾಗಿಯು ಮುಂದೆ ರಾಜ್ಯದಲ್ಲಿ ಕಂಡಿತವಾಗಿಯು ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿರಲಿಲ್ಲ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.