ಶನಿವಾರ, ಮೇ 8, 2021
26 °C

ಮಹಾದೇವಿ, ವೀರನಗೌಡ ದಂಪತಿಗೆ ಪುರುಷೋತ್ತಮ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಚಿಕ್ಕ ಹಿಡುವಳಿಯಲ್ಲಿ ಸಾವಯವ ಕೃಷಿ ಮಾಡುತ್ತಾ ಸರಳ, ಸಂತೃಪ್ತ ಜೀವನ ನಡೆಸುತ್ತಿರುವ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದ ಮಹಾದೇವಿ ಮತ್ತು ವೀರನಗೌಡ ಭೀಮನಗೌಡ ಪಾಟೀಲ ಅವರು 2011ನೇ ಸಾಲಿನ `ಪುರುಷೋತ್ತಮ ಸನ್ಮಾನ~ಕ್ಕೆ ಆಯ್ಕೆಯಾಗಿದ್ದಾರೆ.

 

ಮಹಾದೇವಿ ವೀರನಗೌಡ ದಂಪತಿ ಹಂಚಿ ಹೋಗಿರುವ  4 ಎಕರೆ 17 ಗುಂಟೆ ಕೃಷಿ ಭೂಮಿಯಲ್ಲಿ ಜವಾರಿ ಚಿಕ್ಕುಗಿಡ, ದೇಸೀ ತಳಿಯ 40 ಕರಿಬೇವಿನಗಿಡ, ಜವಾರಿ ನಿಂಬೆ, ಕಂಚಿಕಾಯಿ ಗಿಡ, ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದಾರೆ.ಮಿಶ್ರ ತೋಟಗಾರಿಕ ಬೇಸಾಯ ಪದ್ಧತಿ ಆಶ್ರಯಿಸಿ 1 ಕ್ವಿಂಟಲ್ ಅರಿಶಿಣ, ಸರ್ವ ಮಸಾಲೆ ಎಲೆ, ಮುಂತಾದ ಉತ್ಪನ್ನಗಳನ್ನು ಬೆಳೆಯುತ್ತಿದ್ದಾರೆ. ದನಕರುಗಳಿಗೆ ಆಹಾರ, ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆದು ಸ್ವಾವಲಂಬಿ ಕೃಷಿಕರಾಗಿದ್ದಾರೆ ಎಂದು  ತೀರ್ಥಹಳ್ಳಿ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಸುಬ್ಬರಾವ್ ಕುರುವಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಕೃಷಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿದರು.ಸೆ. 18ರಂದು ಕೃಷಿ ಖುಷಿ ಪುರುಷೋತ್ತಮರಾಯರ 13ನೇ ಪುಣ್ಯ ಸ್ಮರಣೆ ದಿನದಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಅಧ್ಯಕ್ಷ ಮಾಜಿ ವಿಧಾನ ಪರಿಷತ್ ಸದಸ್ಯ ಕೃ. ನರಹರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಮಧ್ಯಾಹ್ನದ ನಂತರ ಕೃಷಿಯಲ್ಲಿ ರಸಾವರಿ ಬಳಕೆ ಕುರಿತು ವಿಶೇಷ ಸಂವಾದ  ನಡೆಯಲಿದೆ. ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸುವರು. ಈ ವೇಳೆ ರಸಾವರಿಯ ಬಳಕೆಯಲ್ಲಿ ಅನುಭವವಿರುವ ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ರಾವ್ ಕೃಷಿ ಪ್ರತಿಷ್ಠಾನದ  ಅರುಣ್, ವರದಾಚಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.