ಮಹಾದೇವ ತಾತನವರ ಉತ್ಸವ

7

ಮಹಾದೇವ ತಾತನವರ ಉತ್ಸವ

Published:
Updated:
ಮಹಾದೇವ ತಾತನವರ ಉತ್ಸವ

ಮೆಟ್ರಿ (ಕಂಪ್ಲಿ): ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದ ಪ್ರಣವಜ್ಯೋತಿ ಮಹಾಕ್ಷೇತ್ರದ ಸಂಸ್ಥಾಪಕರಾದ ಧರ್ಮಸೇವಾರತ್ನ ಶಿವಶರಣ ಹಂದ್ಯಾಳು ಮಠದ ಮಹಾದೇವ ತಾತನವರ 29ನೇ ಪುಣ್ಯಸ್ಮರಣೆ ಮತ್ತು ಧರ್ಮಪತ್ನಿ ಶರಣೆ ಗೌರಮ್ಮನವರ 32ನೇ ಪುಣ್ಯಸ್ಮರಣೆ ಅಂಗವಾಗಿ ಗ್ರಾಮದಲ್ಲಿ ಸೋಮವಾರ ಉತ್ಸವ ವೈಭವದಿಂದ ಜರುಗಿತು.ಶ್ರೀಮಠದಿಂದ ಹೊರಟ ಉತ್ಸವ ಎದುರು ಬಸವಣ್ಣನವರೆಗೆ ಸಾಗಿ ಮರಳಿ ಮಠಕ್ಕೆ ಆಗಮಿಸಿತು. ಉತ್ಸವ ಸಾಗುವ ದಾರಿಯುದ್ದಕ್ಕೂ ಭಕ್ತರು ಕಾಯಿ ಅರ್ಪಿಸಿ, ನಮಸ್ಕರಿಸಿದರು.ವಿಶ್ವಾರಾಧ್ಯ ಗುರುಕುಲ ಮಠದಲ್ಲಿ ಬೆಳಿಗ್ಗೆ ಮಹಾದೇವತಾತ ಮತ್ತು ಶರಣೆ ಗೌರಮ್ಮನವರ ಕತೃಗದ್ದಿಗೆ, ಶಿಲಾಮೂರ್ತಿಗಳಿಗೆ ವಿಶೇಷ ರುದ್ರಾಭಿಷೇಕ, ನೈವೇದ್ಯ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಜ್ಜಯನಿ ಜಗದ್ಗುರು ಸಿದ್ದಲಿಂಗಶಿವಾಚಾರ್ಯರ ಪುರಾಣ ಸಂಜೆ ಮಹಾಮಂಗಲಗೊಂಡಿತು. ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry