ಸೋಮವಾರ, ಮೇ 17, 2021
26 °C

`ಮಹಾನಗರಗಳ ಅಭಿವೃದ್ಧಿಗೆ 3 ತಿಂಗಳಿಗೊಂದು ಸಭೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ ನಗರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ನಗರಾ ಭಿವೃಧ್ಧಿ ಸಚಿವ ವಿನಯ್‌ಕುಮಾರ್ ಸೊರಕೆ ಹೇಳಿದರು.ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಪೊರೇಟರ್‌ಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಮಂಗಳೂರಿನಲ್ಲಿ ಎಡಿಬಿ ಅಭಿವೃದ್ಧಿ ಕಾರ್ಯದಡಿ ಕುಡ್ಸೆಂಪ್ ಎರಡನೇ ಹಂತದ ಯೋಜನೆ ಯನ್ನು ಜಾರಿ ಮಾಡುವ ಉದ್ದೇಶವಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಬಿಆರ್‌ಟಿಎಸ್(ಬಸ್ ರ‌್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್) ಕಾರಿಡಾರ್ ಯೋಜನೆಯ ಮಾದರಿಯಲ್ಲಿಯೇ ಮೂಲ್ಕಿಯಿಂದ ಉಳ್ಳಾಲವರೆಗೆ ಕಾರಿಡಾರ್ ನಿರ್ಮಾಣ ಪ್ರಸ್ತಾವವಿದೆ. ಅಲ್ಲದೆ ಬೃಹತ್ ಮಂಗಳೂರು ಮಹಾ ನಗರ ಪಾಲಿಕೆ ನಿರ್ಮಾಣದ ಕನಸನ್ನು ನನಸಾಗಿಸುವಲ್ಲಿ ಸ್ಥಳೀಯ ಶಾಸಕರು ಮತ್ತು ಪುರಸಭೆಗಳು ಪ್ರಯತ್ನ ಮಾಡಬೇಕು. ಬೃಹತ್ ಮಂಗಳೂರು ನಿರ್ಮಾಣದಿಂದ ಕೇಂದ್ರದ ಹಲವು ಸವಲತ್ತುಗಳು ನಗರಕ್ಕೆ ಲಭ್ಯವಾಗಲಿವೆ ಎಂದು ಅವರು ಹೇಳಿದರು.ಹಿಂದಿನ ಸರ್ಕಾರದ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃ ದ್ಧಿಗೆ ಸಂಬಂಧಿಸಿದ 28.75 ಕೋಟಿ ರೂ. ಖರ್ಚಾಗದೆಯೇ ಉಳಿ ದಿದ್ದು ಅದನ್ನು ಸಮರ್ಥವಾಗಿ ಬಳಕೆ ಮಾಡಲಾ ಗುವುದು. ನೀರು, ಆಸ್ತಿ ತೆರಿಗೆ ಯನ್ನು ಹೆಚ್ಚಿಸುವುದು ಅನಿವಾ ರ್ಯವಾಗಿದ್ದರೂ ಅದನ್ನು ಜನರ ಮೇಲೆ ಹೇರದೇ ಉದ್ಯಮಗಳ ಮೂಲಕ ಸಂಗ್ರಹಿಸುವುದು ಒಳ್ಳೆಯದು ಎಂದು ಅವರು ಹೇಳಿದರು.ತುಂಬೆ ವೆಂಟೆಡ್ ಡ್ಯಾಮ್‌ನ ಎರಡನೇ ಹಂತದ ಯೋಜನೆಗೆ ಕೇಂದ್ರದ ನೆರವು ಪಡೆಯಲು ಪ್ರಸ್ತಾವ ಸಿದ್ಧಪಡಿ ಸಲಾಗುವುದು. ಸುಮಾರು ಎರಡು ಸಾವಿರ ಕೋಟಿ ರೂ.ಗಳ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ವಿವರಿಸಿದರು. ಜನರು ಮತ್ತು ಸರ್ಕಾರದ ನಡುವೆ ಕಾರ್ಪೊರೇಟರ್‌ಗಳೇ ಸಂಪರ್ಕ ಸೇತು ಇದ್ದಂತೆ. ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಹೆಚ್ಚಿನ ಸಮಯ ಮೀಸಲಿ ಡಬೇಕು ಎಂದು ಅವರು ಕಿವಿಮಾತು ಹೇಳಿದರು.ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಇಬ್ರಾಹಿಂ ಬಿ., ಕಾರ್ಪೊರೇಟರ್ ವಿನಯ್‌ರಾಜ್, ಶಾಸಕ ಜೆ. ಆರ್. ಲೋಬೊ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಳ್ವ, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕ ವಿಜಯ್‌ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.