ಮಹಾನಗರಪಾಲಿಕೆ ದರ್ಜೆಗೆ ಏರಿಸುವ ಪ್ರಸ್ತಾವ

7

ಮಹಾನಗರಪಾಲಿಕೆ ದರ್ಜೆಗೆ ಏರಿಸುವ ಪ್ರಸ್ತಾವ

Published:
Updated:

ರಾಮನಗರ: ‘ರಾಮನಗರ– ಚನ್ನ ಪಟ್ಟಣವನ್ನು ಅವಳಿ ನಗರಗಳನ್ನಾಗಿ ಪರಿವರ್ತಿಸಿ ಮಹಾನಗರ ಪಾಲಿಕೆ ಯನ್ನಾಗಿ ಮೇಲ್ದರ್ಜೆಗೇರಿಸುವ ಸಾಧ್ಯತೆ ಗಳ ಕುರಿತ ವಿಸ್ತೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿ ಗೆ ಸೂಚಿಸಲಾಗಿದೆ’ ಎಂದು ನಗರಾ ಭಿವೃದ್ಧಿ ಸಚಿವ ವಿನಯ್‌ಕುಮಾರ್‌ ಸೊರಕೆ ಅವರು ತಿಳಿಸಿದರು.ಆರ್‌ಸಿಯುಡಿಎ ಕಚೇರಿಗೆ ಸೋಮ ವಾರ ಭೇಟಿ ನೀಡಿದ ಅವರು, ಅಧಿಕಾರಿ ಗಳ ಜತೆ ಸಮಾಲೋಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‘ರಾಜ್ಯದ ಸಾಕಷ್ಟು ನಗರ– ಪಟ್ಟಣ ಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. 2011ರ ಜನಗಣತಿಯನ್ನು ಆಧರಿಸಿ ರಾಜ್ಯದಲ್ಲಿ ಕೆಲ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿಸಲು, ಕೆಲ ಪುರಸಭೆ ಗಳನ್ನು ನಗರಸಭೆಗಳನ್ನಾಗಿಸಲು, ಕೆಲ ನಗರಸಭೆಗಳನ್ನು ಮಹಾನಗರ ಪಾಲಿಕೆ ಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ತುಮಕೂರು, ಶಿವಮೊಗ್ಗ, ವಿಜಾಪುರವನ್ನು ಮಹಾ ನಗರ ಪಾಲಿಕೆಯನ್ನಾಗಿಸಲು ಸರ್ಕಾರ ತೀರ್ಮಾನಿಸಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ’ ಎಂದು ಅವರು ಹೇಳಿದರು.ರಾಜ್ಯದಲ್ಲಿ ಜನದಟ್ಟಣೆ ಹೆಚ್ಚಾ ಗಿರುವ, ಜನಸಂಖ್ಯೆ ತ್ವರಿತಗತಿಯಲ್ಲಿ ಏರಿಕೆ ಕಂಡಿರುವ ನಗರಗಳ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಸಿದ್ಧವಿದೆ. ಈ ನಿಟ್ಟಿನಲ್ಲಿ ಬೆಂಗ ಳೂರಿನ ಸನಿಹವೇ ಇರುವ ರಾಮನಗರ–ಚನ್ನಪಟ್ಟಣವನ್ನು ಅವಳಿ ನಗರವ ನ್ನಾಗಿಸಿ, ಮಹಾನಗರ ಪಾಲಿಕೆಯನ್ನಾಗಿ ಸುವ ಕುರಿತು ಪರಿಶೀಲಿಸಬಹುದಾಗಿದೆ. ಇದರಿಂದ ಬೆಂಗಳೂರಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.‘ಎರಡೂ ನಗರಗಳು ಮತ್ತು ಅದರ ಸುತ್ತಮುತ್ತ ಬರುವ ನಾಲ್ಕು ಐದು ಗ್ರಾಮ ಪಂಚಾಯಿತಿಗಳನ್ನು ಗಮನಕ್ಕೆ ತೆಗೆದುಕೊಂಡರೆ 2011ರ ಜನಗಣತಿ ಯಲ್ಲಿ ಜನಸಂಖ್ಯೆ 3 ಲಕ್ಷ ದಾಟುತ್ತದೆ ಎಂಬುದನ್ನು ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಭಿಪ್ರಾಯ ಮತ್ತು ನಿರ್ಣಯ ಗಳನ್ನು ಉಲ್ಲೇಖಿಸಿ ವಿಸ್ತೃತ ವರದಿಯನ್ನು ಶೀಘ್ರದಲ್ಲಿಯೇ ಸಲ್ಲಿಸುವಂತೆ ಜಿಲ್ಲಾ ಧಿಕಾರಿಗೆ ಹೇಳಿದ್ದೇನೆ’ ಎಂದರು.ಮಹಾನಗರ ಪಾಲಿಕೆಯಾದರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳು ದೊರೆಯುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗುತ್ತವೆ. ನಗರಗಳ ಯೋಜಿತ ಅಭಿವೃದ್ಧಿ ಸಾಧ್ಯ ವಾಗುತ್ತದೆ. ಅಗತ್ಯ ಮೂಲ ಸೌಕರ್ಯ ದೊರೆಯುತ್ತದೆ ಎಂದು ಸಚಿವರು ಪ್ರತಿಕ್ರಿಯಿಸಿದರು.ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಪ್ರಾಧಿಕಾರದ ಪ್ರಭಾರಿ ಆಯುಕ್ತ ಜಯ ಮಾಧವ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಉಪವಿಭಾಗಾ ಧಿಕಾರಿ ಸ್ನೇಹಾ, ಪ್ರಾಧಿಕಾರದ ಸಹಾ ಯಕ ನಿರ್ದೇಶಕಿ ನಾಗರತ್ನ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಡಿ.ಎಸ್.ಜಗದೀಶ್, ತಹಶೀಲ್ದಾರ್ ಹನುಮಂತರಾಯಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry