ಮಹಾನದಿ ಸೋಮೇಶ್ವರದೆಡೆಗೆ

7

ಮಹಾನದಿ ಸೋಮೇಶ್ವರದೆಡೆಗೆ

Published:
Updated:

ಜೆರ್ರಿ ವಿನ್ಸೆಂಟ್ ಡಾಯಸ್ ಮತ್ತು ಗ್ಲೆನ್ ಡಾಯಸ್ ನಿರ್ಮಾಣದ `ಮಹಾನದಿ~ ಚಿತ್ರಕ್ಕೆ `ಸೋನಿಯಾ ಸೋನಿಯಾ.. ತರ ತರ ಏನೋ ಹೊಸತರ..~ ಎಂಬ ಹಾಡನ್ನು ಬೇಕಲ್ ಕೋಟೆ ಹಾಗೂ ಸೋಮೇಶ್ವರ ಬೀಚ್‌ನಲ್ಲಿ ಸಂಜನಾ, ದಿಲೀಪ್ ರಾಜ್ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಕಲೈ ನೃತ್ಯ ನಿರ್ದೇಶಿಸಿದ್ದರು.ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕೃಷ್ಣಪ್ಪ ಉಪ್ಪೂರು ಅವರದು. ಛಾಯಾಗ್ರಹಣ ಸುಂದರನಾಥ ಸುವರ್ಣ, ಸಂಗೀತ  ಎ.ಎಂ.ನೀಲ್, ಸಂಕಲನ ಶ್ರಿನಿವಾಸ್ ಪಿ ಬಾಬು, ಕಲೆ ಪುರುಷೋತ್ತಮ್ ಅಡ್ವೆ, ನೃತ್ಯ ವಿ.ನಾಗೇಶ್, ಸಾಹಸ ಮಾಸ್ ಮಾದ, ಸಹನಿರ್ದೇಶನ ಆದೀಶ್ವರ.ಉಳಿದ ತಾರಾಗಣದಲ್ಲಿ ಸೂರ್ಯಕಿರಣ, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರ್‌ದೇಶ್ ಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ಪಂಕಜ ರವಿಶಂಕರ್, ವಿನ್ಸೆಂಟ್ ಕಲ್ಯಾಣ ಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ.ಸುಕನ್ಯ ಮಾರ್ಟಿನ್ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry