ಮಹಾನ್ ಸಾಧನೆಗೆ ಮಾದರಿ ವಿಜ್ಞಾನಿ ನ್ಯೂಟನ್

7

ಮಹಾನ್ ಸಾಧನೆಗೆ ಮಾದರಿ ವಿಜ್ಞಾನಿ ನ್ಯೂಟನ್

Published:
Updated:
ಮಹಾನ್ ಸಾಧನೆಗೆ ಮಾದರಿ ವಿಜ್ಞಾನಿ ನ್ಯೂಟನ್

ನೆಲಮಂಗಲ: `ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಇದ್ದರೆ ಅದ್ಭುತವನ್ನು ಸಾಧಿಸಬಹುದು ಎಂಬುದಕ್ಕೆ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ನಿದರ್ಶನವಾಗಿದ್ದಾರೆ~ ಎಂದು ಜಿಲ್ಲಾಧಿಕಾರಿ ಎಸ್.ಶಂಕರ್‌ನಾರಾಯಣ್ ತಿಳಿಸಿದರು.2012ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲು ಗ್ರಾಮಾಂತರ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘವು, ತಾಲ್ಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪ.ಪೂ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪನೇಷಿಯ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಜಯಣ್ಣ ನಿವೃತ್ತ ಪ್ರಾಂಶುಪಾಲರಿಗೆ ಗೌರವ ಸಮರ್ಪಿಸಿ ಕನಿಷ್ಠ ಕಲಿಕಾ ಮಟ್ಟದ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವಲ್ಲಿ ಸರ್ಕಾರಿ ಕಾಲೇಜಿನ ಅಧ್ಯಾಪಕರು ಶ್ರಮಿಸುತ್ತಿರುವುದು ಅಭಿನಂದನೀಯ ಎಂದರು.ಶಾಸಕ ಎಂ.ವಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದು ಶಾಸಕರ ನಿಧಿಯಿಂದ ಆಂಗ್ಲಾ ಭಾಷಾ ಕಲಿಕೆಗೆ ಪೂರಕ ಪುಸ್ತಕ ನೀಡಲಾಗಿದೆ ಎಂದರು. ಜಿಲ್ಲೆಯ ಪ್ರತಿಭಾವಂತ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಮೊದಲ ಹತ್ತು ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಪುರಸ್ಕಾರ ನೀಡಿದರು.ಶೇಕಡಾ 100 ಫಲಿತಾಂಶಕ್ಕೆ ಶ್ರಮಿಸಿದ ಉಪನ್ಯಾಸಕರನ್ನು ಜಂಟಿ ನಿರ್ದೇಶಕಿ ಉಮಾ ಬಸವಣ್ಣ್ಯಪ್ಪ ಅಭಿನಂದಿಸಿದರು. ಉಪನಿದೇರ್ಶಕರಾದ ಜಿ.ಎನ್.ಈಶ್ವರಮೂರ್ತಿ, ಎನ್.ಸಾವಿತ್ರಿ, ಉದ್ಯಮಿ ಭೈರೇಗೌಡ, ಕಾಲೇಜು ಸಮಿತಿ ಉಪಾಧ್ಯಕ್ಷ ಜಿ.ಸಂಪತ್ ಮಾತನಾಡಿದರು. ಸಂಘದ ಅಧ್ಯಕ್ಷ ಸಿ.ಡಿ.ರಾಜೇಗೌಡ ಕಾರ್ಯದರ್ಶಿ ಎಚ್.ಬಿ.ಪ್ರಕಾಶ್, ಉಪಾಧ್ಯಕ್ಷ ರಮೇಶ್, ವಕೀಲ ಸುರೇಶ್, ಹನುಮಯ್ಯ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry