ಮಹಾಭಾರತ ಪಾತ್ರಗಳ ಪುಸ್ತಕ ಶೀಘ್ರ: ಸ್ವಾಮೀಜಿ

7

ಮಹಾಭಾರತ ಪಾತ್ರಗಳ ಪುಸ್ತಕ ಶೀಘ್ರ: ಸ್ವಾಮೀಜಿ

Published:
Updated:

ಉಡುಪಿ:`ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬೇರೆ ಭಾಷೆಯಲ್ಲಿ ಪುಸ್ತಕ ಹೊರತರುವ ಕಾರ್ಯವನ್ನು ತಮ್ಮ ಪರ್ಯಾಯದ ಅವಧಿಯಲ್ಲಿ ಮಾಡ ಲಾಗುತ್ತದೆ' ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.2014 ಜನವರಿ 18ರಂದು ನಡೆಯುವ ಕಾಣಿಯೂರು ಮಠದ ಪರ್ಯಾಯ ಪೂರ್ವಭಾವಿಯಾಗಿ ಭಾನುವಾರ ಮಠದ ಆವರಣದಲ್ಲಿ ಬಾಳೆ ಮುಹೂರ್ತ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.ಸುಮಾರು 55 ಜನ ವಿದ್ವಾಂಸರಿಂದ ಮಹಾಭಾರತದಲ್ಲಿ ಬರುವ ಪಾತ್ರಗಳ ಕುರಿತು ಲೇಖನ ಸಿದ್ದಪಡಿಸಿ ಪ್ರಕಟಿಸಲಾ ಗುತ್ತಿದೆ. ಮಹಾಭಾರತದ ಎಲ್ಲಾ ಪಾತ್ರ ಗಳ ಪುಸ್ತಕಗಳನ್ನು ಹಂತ ಹಂತವಾಗಿ ಹೊರತರಲಾಗುವುದು ಎಂದರು.ಕೃಷ್ಣ ಮಠಕ್ಕೆ ಬರುವವರು ದೇವರ ದರ್ಶನ ಪಡೆದು ಸಂತೃಪ್ತಿಯಿಂದ ಹೋಗುವುದಕ್ಕೆ ಮೊದಲ ಆದ್ಯತೆ. ಕೃಷ್ಣ ಮಠದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಎಲ್ಲಾ ಆಚರಣೆ ಸಾಮಾಜಿಕ ಕೆಲಸ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

ಪರ್ಯಾಯ ಯಶಸ್ಸಿಯಾಗಿ ನಡೆಯಲು ಸರ್ಕಾರ ಹಾಗೂ ಜನರು ಸಹಕಾರ ನೀಡಬೇಕು. ಚಿಣ್ಣರ ಸಂತರ್ಪಣೆ ಮುಂತಾದ ಸಮಾಜಮುಖಿ ಕೆಲಸಗಳನ್ನು ಮುಂದುವ ರಿಸಲಾಗುತ್ತದೆ. ಕಟ್ಟಡ ನಿರ್ಮಿಸು ವಂತಹ ಯಾವುದೇ ಹೊಸ ಯೋಜನೆ ಗಳಿಲ್ಲ ಎಂದು ಸ್ವಾಮೀಜಿ ತಿಳಿಸಿದರು.ಕಾಣಿಯೂರು ಮಠದ  ವಿದ್ಯಾವಲ್ಲಭ ಸ್ವಾಮೀಜಿಯವರ ದ್ವಿತೀಯ ಪರ್ಯಾಯಕ್ಕೆ ಪೂರ್ವಭಾವಿ ಯಾಗಿ ಭಾನುವಾರ ಮಠದ ಆವರಣದಲ್ಲಿ ಬೆಳಿಗ್ಗೆ 8.50ರ ಸುಮೂಹೂರ್ತದಲ್ಲಿ  ಮಠದ ತಂತ್ರಿ ಹೆರ್ಗ ವೇದವ್ಯಾಸ ಭಟ್ ಅವರ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಉಡುಪಿ ಚಂದ್ರಮೌಳೇಶ್ವರ ದೇವಸ್ಥಾನ, ಅನಂತೇಶ್ವರ ದೇವಸ್ಥಾನ, ಕೃಷ್ಣ ಮಠ ಹಾಗೂ ಬೃಂದಾವನದಲ್ಲಿ ಮಠದ ಪ್ರಮುಖರು ಪ್ರಾರ್ಥನೆ ಸಲ್ಲಿಸಿದರು. ನಂತರ ಆನೆ, ಕೊಂಬು- ಕಹಳೆ, ಚಂಡೆ, ವಿವಿಧ ಪತಾಕೆ ಮತ್ತು ಬಿರುದು ಬಾವಲಿಗಳ ಮೂಲಕ ಬಾಳೆ, ಕಬ್ಬು ಮತ್ತು ತುಳಸಿ ಗಿಡಗಳನ್ನು ಹೊತ್ತು ರಥಬೀದಿಯಲ್ಲಿ ಮೆರವಣಿಗೆ ನಡೆಸಿ  ಮಠಕ್ಕೆ ತರಲಾಯಿತು.ಕಾಣಿಯೂರು ಮಠ ಆವರಣದಲ್ಲಿ ಅಷ್ಟಮಠದ ಪ್ರತಿನಿಧಿಗಳಿಗೆ, ವಿದ್ವಾಂಸ ರಿಗೆ ದಾನ ನೀಡಿದ ನಂತರ  ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಬಾಳೆ ಮುಹೂರ್ತ ನೆರೆವೇರಿಸಿದರು. ಕಬ್ಬು, ಬಾಳೆ, ತುಳಸಿ ಗಿಡ ನೆಡೆಲಾಯಿತು.ಬಾಳೆ ಮಹೂರ್ತದ ನಂತರ ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿ, ಪರ್ಯಾಯ ಕ್ಕೆ ಪೂರ್ವಭಾವಿಯಾಗಿ ನಡೆಯವ ಎಲ್ಲಾ ಮುಹೂರ್ತಕ್ಕೆ  ಸಹಕಾರ ಯಾಚಿಸಿದರು. ಪರ್ಯಾಯದ ಎರಡನೇ ಮುಹೂರ್ತವಾದ ಅಕ್ಕಿ ಮುಹೂರ್ತ   ಫೆಬ್ರುವರಿ 14 ರಂದು ಕಾಣಿಯೂರು ಮಠದಲ್ಲಿ ನಡೆಯಲಿದೆ ಎಂದರು.ಕಾಣಿಯೂರು ಮಠದ ವ್ಯವಸ್ಥಾಪಕ ನಾಗರಾಜ ಆಚಾರ್ಯ, ದಿವಾನ ರಘುಪತಿ ಆಚಾರ್ಯ, ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ, ವಾಸುದೇವ ಅಸ್ರಣ್ಣ, ಹರಿದಾಸ ಆಚಾರ್ಯ, ವೇಣುಗೋಪಾಲ, ಆಚಾರ್ಯ, ಶಾಸಕ ಕೆ.ರಘುಪತಿ ಭಟ್, ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕಷ್ಣ ಪುನರೂರು, ದಕ್ಷಿಣ ಕನ್ನಡ  ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry