ಮಹಾಮಹಿಮ ಮಾರನಬೀಡ ಚನ್ನಬಸವಣ್ಣನವರು

7

ಮಹಾಮಹಿಮ ಮಾರನಬೀಡ ಚನ್ನಬಸವಣ್ಣನವರು

Published:
Updated:
ಮಹಾಮಹಿಮ ಮಾರನಬೀಡ ಚನ್ನಬಸವಣ್ಣನವರು

ದೈವಾನುಸಂಭೂತರಾದ ಶರಣರಲ್ಲಿ ಸರ್ವಸಂಗ ಪರಿತ್ಯಾಗಿಗಳಾಗಿ ಭಕ್ತರಿಗೆ ತಮ್ಮ ಕರುಣೆಯ ಕೃಪಾ ಕಟಾಕ್ಷದಿಂದ ಆಸರೆಯಾಗಿ ನಿಂತವರು ಅತೀ ವಿರಳ. ಅಂತಹ ಮಹನೀಯರಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರನಬೀಡದ ಪತ್ರೇಶ್ವರ ಮಠದ ವಿಭೂತಿ ಪುರುಷ ಚನ್ನಬಸವಣ್ಣ ಮಹಾರಾಜರು ಒಬ್ಬರು.ಶ್ರೀಗಳು ಕಾರ್ತೀಕ ಮಾಸದ ಪುಣ್ಯದಿನವಾದ ನವೆಂಬರ್ 22, 1957 ರಂದು ಮಾರನಬೀಡು ಗ್ರಾಮದ ಪಂಚಾಳ ಮನೆತನದ ದ್ಯಾಮಣ್ಣ ಮತ್ತು ಶರಣೆ ವಿರುಪಮ್ಮ ದಂಪತಿಗಳ ಉದರದಲ್ಲಿ ಜನಿಸಿದರು. ಧಾರವಾಡದ ಪತ್ರೇಶ್ವರ ಮಾಹಾರಾಜರು ಶ್ರೀಗಳ ಜನ್ಮದ ಬಗ್ಗೆ, ಇಂತಹ ಊರಿನಲ್ಲಿ ಇಂತವರ ಮನೆಯಲ್ಲಿ ಪರಮಾತ್ಮ ಸ್ವರೂಪಿ, ಸೂರ್ಯ ತೇಜಸ್ವಿನ ಬಾಲಕ ಜನಿಸುತ್ತಾನೆ. ಈತ ಹುಟ್ಟುತ್ತಲೇ ಅನೇಕ ಪವಾಡಗಳನ್ನು ಸೃಷ್ಟಿಸಲಿದ್ದಾನೆ ಎಂದು ಬರೆದಿಟ್ಟಿದ್ದರಂತೆ.ಅದರಂತೆ ಹುಟ್ಟುತ್ತಲೇ ಪವಾಡಗಳನ್ನು ಸೃಷ್ಟಿಸುತ್ತಾ ನಡೆದ ಅವರು, ಬಾಲ್ಯದ ಐದು ವರ್ಷಗಳವರೆಗೆ ಸ್ವಗ್ರಾಮವಾದ ಮಾರನಬೀಡದಲ್ಲಿ ಕಳೆದರು. ತದನಂತರ ಪತ್ರೇಶ್ವರ ಮಹಾರಾಜರ ಅಪ್ಪಣೆಯಂತೆ ಮಹಾನ್ ಯೋಗಿಗಳಾದ ಧಾರವಾಡ ಮಠದಲ್ಲಿದ್ದ ಶ್ರೀಮುರಿಗೆಪ್ಪಜ್ಜನವರು ಬಾಲಕ ಚನ್ನಬಸವಣ್ಣನನ್ನು ಕರೆತಂದು ಪಾಲನೆ ಪೊಷಣೆ ಮಾಡಿದರು.ಶ್ರೀಗಳು ಧಾರವಾಡದಲ್ಲಿ ತಮ್ಮ ಶಿಕ್ಷಣವನ್ನು ಕೈಗೊಂಡು ಸ್ನಾತಕೋತ್ತರ ಪದವಿ ಪೂರೈಸಿದರು. ಮುರಿಗೆಪ್ಪಜ್ಜನವರು ಕಾಲವಾದ ನಂತರ ಶ್ರೀಗಳು ಮಾರನಬೀಡ ಗ್ರಾಮಕ್ಕೆ ಆಗಮಿಸಿ ಮಳಿಮಲ್ಲೇಶ್ವರದ ಸನ್ನಿಧಿಯಲ್ಲಿ ಬಂದು ನೆಲೆನಿಂತರು.ಒಂದು ಕಾಲದಲ್ಲಿ ಮಳಿಮಲ್ಲೇಶ್ವರನ ಸನ್ನಿಧಿಗೆ ಹೋಗಲು ಹಿಂಜರಿಯುತ್ತಿದ್ದ ಊರಿನ ಭಕ್ತರು ಅಜ್ಜನವರ ಆಗಮನದಿಂದ ದೇವಸ್ಥಾನದ ಜಿರ್ಣೋದ್ಧಾರ ಕೈಗೊಂಡು ಅದಕ್ಕೊಂದು ಕಾಯಕಲ್ಪ ನೀಡಿದರು. ನಿರಂತರ ಸೇವಾ ಭಾವನೆಯಿಂದ ಧಾರ್ಮಿಕ ಕಾರ್ಯಗಳನ್ನು ನಡೆಸುವ ಮೂಲಕ ಮಾರನಬೀಡು ಗ್ರಾಮದ ಹೆಸರು ಜಾಗತಿಕ ಭೂಪುಟದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.  `ಹರಮುನಿದರೆ ಗುರು ಕಾಯುವನು' ಎಂಬಂತೆ ಭಕ್ತರ ಕಷ್ಟಕೋಟಲೆಗಳನ್ನು ಕ್ಷಣ ಮಾತ್ರದಲ್ಲಿ ದೂರ ಮಾಡಿ ಭಕ್ತರ ಪಾಲಿನ ಆಶಾಕಿರಣವಾಗಿದ್ದ ಶ್ರಿಗಳು ತಮ್ಮ ಸರಳತೆಯಿಂದ ಭಕ್ತಕೋಟಿಗೆ ಜೀವನ ಸಂದೇಶವಾಗಿದ್ದರು.ಶ್ರೀಗಳ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಭಕ್ತರನ್ನು ಹೊಂದಿದ್ದರೂ ಕೂಡಾ ಯಾವತ್ತು ಪ್ರಚಾರ ಬಯಸಿದವರಲ್ಲ.ಅಕ್ಷರಶಃ ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡಿದ್ದ ಶ್ರೀಗಳನ್ನು ಭಕ್ತರು ಪ್ರೀತಿಯಿಂದ `ಅಜ್ಜನ'ವರೆಂದು ಕರೆಯುತ್ತಿದ್ದರು. ಭಕ್ತರ ಆರಾಧ್ಯದೈವವಾಗಿದ್ದ ಮಾರನಬೀಡು ಶ್ರೀ ಚನ್ನಬಸವಣ್ಣ ಮಹಾರಾಜರು ಇಂದು ಭೌತಿಕವಾಗಿ ನಮ್ಮಂದಿಗಿಲ್ಲದಿದ್ದರೂ ಅವರ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.  55ನೇ ಜನ್ಮೋತ್ಸವ (ಪುಣ್ಯ ದಿನಾಚರಣೆಯನ್ನು) ಇದೇ 14ರಂದು ಮಾರನಬೀಡ ಗ್ರಾಮದ ಪತ್ರೇಶ್ವರ ಮಠದಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry