ಮಹಾಮೇಳಾವಾಗೆ ಷರತ್ತುಬದ್ಧ ಅನುಮತಿ

7

ಮಹಾಮೇಳಾವಾಗೆ ಷರತ್ತುಬದ್ಧ ಅನುಮತಿ

Published:
Updated:

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ಇಲ್ಲಿನ ಟಿಳಕವಾಡಿಯ ಲಿಲೆ ಮೈದಾನದಲ್ಲಿ ಡಿ. 5 ರಂದು ನಡೆಸಲುದ್ದೇಶಿಸಿರುವ ಮಹಾಮೇಳಾವಾಗೆ ಷರತ್ತು ಬದ್ಧ ಅನುಮತಿಯನ್ನು ಪೊಲೀಸ್ ಇಲಾಖೆ ನೀಡಿದೆ.`ಹಿಂದೆ ಮೇಳಾವಾ ನಡೆದ ಸಂದರ್ಭದಲ್ಲಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಉನ್ನತ ಮಟ್ಟದದಿಂದ ಅನುಮತಿ ನೀಡಲಾಗಿದೆ. ಯಾವುದೇ ಭಾಷೆ ಹಾಗೂ ಸರ್ಕಾರದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡದಂತೆ ಷರತ್ತು ವಿಧಿಸಲಾಗಿದೆ. ಸರ್ಕಾರ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಸಂಘಟಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸೂಚಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.ಮೇಳಾವಾ ನಡೆಸಲು ಎಂಇಎಸ್ ಸಂಘಟಕರಿಗೆ ಮಂಗಳವಾರ (ಡಿ.4) ಅನುಮತಿಪತ್ರ ನೀಡಲಾಗುವುದು ಎಂದು ಪಾಟೀಲ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry