ಮಹಾರಾಜಾ ಸೋಷಿಯಲ್ಸ್‌ಗೆ ಜಯ

ಮಂಗಳವಾರ, ಜೂಲೈ 23, 2019
25 °C

ಮಹಾರಾಜಾ ಸೋಷಿಯಲ್ಸ್‌ಗೆ ಜಯ

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಮಹಾರಾಜಾ ಸೋಷಿಯಲ್ಸ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್‌ನ ಶನಿವಾರದ ಪಂದ್ಯದಲ್ಲಿ 3-0 ಗೋಲುಗಳಿಂದ ಮುಸ್ಲಿಂ ಹೀರೋಸ್ ವಿರುದ್ಧ ಗೆಲುವು ಪಡೆಯಿತು.ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ  ತಂಡದ ಹ್ಯಾವಿಟ್ಯಾಂಗ್ (4ನೇ ನಿ.) 1-0 ಮುನ್ನಡೆ ಒದಗಿಸಿದರು. ಬಳಿಕ ಷಣ್ಮುಗಂ (15, 41ನೇ ನಿ.) ತಂದಿತ್ತ ಎರಡು ಗೋಲುಗಳಿಂದ ಮಹಾರಾಜಾ ಸೋಷಿಯಲ್ಸ್ ತಂಡ 3-0 ಮುನ್ನಡೆಯಿಂದ ಗೆಲುವು ತನ್ನದಾಗಿಸಿಕೊಂಡಿತು.ದಿನದ ಮತ್ತೊಂದು ಪಂದ್ಯದಲ್ಲಿ ಚಂದ್ರಶೇಖರ್ (7ನೇ ನಿ.) ತಂದಿತ್ತ ಪಂದ್ಯ ಏಕೈಕ ಗೋಲಿನಿಂದ ನವರತ್ನ ತಂಡದವರು ಯಂಗ್ ಜೆಮ್ಸ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry