ಮಹಾರಾಷ್ಟ್ರಕ್ಕೆ ಮುಂಬೈ ತಂಡದ ಸವಾಲು

7

ಮಹಾರಾಷ್ಟ್ರಕ್ಕೆ ಮುಂಬೈ ತಂಡದ ಸವಾಲು

Published:
Updated:

ಮುಂಬೈ (ಪಿಟಿಐ): ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಮಹಾರಾಷ್ಟ್ರ ತಂಡ ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಸವಾಲನ್ನು ಎದುರಿಸಲಿದೆ.ಮಹಾರಾಷ್ಟ್ರ ‘ಸಿ’ ಗುಂಪಿನಲ್ಲಿ 35 ಪಾಯಿಂಟ್‌್ ಕಲೆ ಹಾಕಿ ಈ ಘಟ್ಟ ತಲುಪಿದೆ. ‘ಎ’ ಗುಂಪಿನಲ್ಲಿ ಮುಂಬೈ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಗುಜ ರಾತ್‌ ಎದುರು ಅಚ್ಚರಿಯ ಗೆಲುವು ಸಾಧಿಸಿ ಎಂಟರ ಘಟ್ಟ ತಲುಪಿದೆ.ಐದು ದಿನಗಳ ಈ ಪಂದ್ಯದಲ್ಲಿ ಮುಂಬೈ ಗೆಲುವು ಪಡೆಯುವ ವಿಶ್ವಾಸ ಹೊಂದಿದೆ. ಅನುಭವಿ ಜಹೀರ್‌ ಖಾನ್‌ ಮತ್ತು ಅಭಿಷೇಕ್‌ ನಾಯರ್ ತಂಡಕ್ಕೆ ಮರಳಿರುವುದು ಚಾಂಪಿಯನ್ನರ ವಿ ಶ್ವಾಸ ಹೆಚ್ಚಿಸಿದೆ. ಅನುಭವಿ ಆಟಗಾರರ ಬಲವಿಲ್ಲದೇ ಲೀಗ್‌ನಲ್ಲಿ ಪರದಾಡಿದ್ದ ಮುಂಬೈ ಈಗ ಬಲಿಷ್ಠವಾಗಿದೆ.ರೋಹಿತ್‌ ಮೊಟ್ವಾನಿ ಸಾರಥ್ಯದ ಮಹಾರಾಷ್ಟ್ರ ತಂಡ ಲೀಗ್‌     ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆದು, ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.ಇತರ ರಣಜಿ ಪಂದ್ಯಗಳು

ಕೋಲ್ಕತ್ತ: ಬಂಗಾಳ–ರೈಲ್ವೇಸ್‌

ಮುಂಬೈ: ಮುಂಬೈ–ಮಹಾರಾಷ್ಟ್ರ

ವಡೋದರ: ಪಂಜಾಬ್‌–ಜಮ್ಮು ಮತ್ತು ಕಾಶ್ಮೀರ*ಮತ್ತೊಂದು ಸುದ್ದಿ...

*‘ಆರು ಆಟಗಾರರು ಆಡಬೇಕಿತ್ತು’

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry